ಬೆಂಗಳೂರು: ಸ್ಕೂಟರ್ ಫುಟ್‌ರೆಸ್ಟ್‌ನಲ್ಲಿ ಮಗು ನಿಲ್ಲಿಸಿಕೊಂಡು ಸವಾರಿ; ದಂಪತಿ ವಿರುದ್ಧ ಎಫ್ಐಆರ್ ದಾಖಲು

ಮಗನ ಹುಟ್ಟುಹಬ್ಬದ ಆಸೆಯನ್ನು ಪೂರೈಸಲೆಂದು ಸ್ಕೂಟರ್‌ನ ಫುಟ್‌ರೆಸ್ಟ್ ಮೇಲೆ ಆತನನ್ನು ನಿಲ್ಲಿಸಿಕೊಂಡು ಸವಾರಿ ಮಾಡಿದ ಟೆಕ್ಕಿ ದಂಪತಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಗನನ್ನು ಫುಟ್‌ರೆಸ್ಟ್ ಮೇಲೆ ನಿಲ್ಲಿಸಿಕೊಂಡು ಸ್ಕೂಟರ್ ಸವಾರಿ ಮಾಡಿದ ದಂಪತಿ
ಮಗನನ್ನು ಫುಟ್‌ರೆಸ್ಟ್ ಮೇಲೆ ನಿಲ್ಲಿಸಿಕೊಂಡು ಸ್ಕೂಟರ್ ಸವಾರಿ ಮಾಡಿದ ದಂಪತಿ

ಬೆಂಗಳೂರು: ತಮ್ಮ ಮಗನ ಹುಟ್ಟುಹಬ್ಬದ ಆಸೆಯನ್ನು ಪೂರೈಸಲೆಂದು ಸ್ಕೂಟರ್‌ನ ಫುಟ್‌ರೆಸ್ಟ್ ಮೇಲೆ ಆತನನ್ನು ನಿಲ್ಲಿಸಿಕೊಂಡು ಸವಾರಿ ಮಾಡಿದ ಟೆಕ್ಕಿ ದಂಪತಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ದ್ವಿಚಕ್ರ ವಾಹನದ ಫುಟ್‌ರೆಸ್ಟ್‌ನಲ್ಲಿ ದಂಪತಿ ತಮ್ಮ ಮಗನನ್ನು ನಿಲ್ಲಿಸಿಕೊಂಡು ಸವಾರಿ ಮಾಡುತ್ತಿದ್ದಾಗ, ಪ್ರಯಾಣಿಕರೊಬ್ಬರು ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೋ ವೈರಲ್ ಆದ ನಂತರ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ವಿಡಿಯೋ ಎರಡು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ದಂಪತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ರಾತ್ರಿ 'ಎಕ್ಸ್' ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. 17 ಸೆಕೆಂಡ್‌ಗಳ ವಿಡಿಯೋದಲ್ಲಿ, ಮಹಿಳೆಯೊಬ್ಬರು ಫುಟ್‌ರೆಸ್ಟ್ ಮೇಲೆ ನಿಂತಿರುವ ಮಗನನ್ನು ಹಿಡಿದುಕೊಂಡು ಸ್ಕೂಟರ್ ಹಿಂಬದಿ ಕುಳಿತು ಸವಾರಿ ಮಾಡುತ್ತಿರುವುದನ್ನು ಕಾಣಬಹುದು. ಇವರು ಕೇರಳ ಮೂಲದ ದಂಪತಿಯಾಗಿದ್ದು, ಹೆಲ್ಮೆಟ್ ಕೂಡ ಧರಿಸಿರಲಿಲ್ಲ. ಮಹದೇವಪುರ ಸಂಚಾರಿ ಠಾಣೆ ಪೊಲೀಸರು ದಂಪತಿ ವಿರುದ್ಧ ಮಂಗಳವಾರ ಎಫ್‌ಐಆರ್ ದಾಖಲಿಸಿದ್ದಾರೆ.

ಸೋಮವಾರ ರಾತ್ರಿ 10.30ರ ಸುಮಾರಿಗೆ ವೈಟ್‌ಫೀಲ್ಡ್‌ನ ಗ್ರಾಫೈಟ್ ಇಂಡಿಯಾ ಬಳಿ ಈ ವಿಡಿಯೋವನ್ನು ಸೆರೆಹಿಡಿಯಲಾಗಿದೆ. ವಾಹನದ ನೋಂದಣಿ ಸಂಖ್ಯೆಯನ್ನು ನಮೂದಿಸಿದ್ದು, ಈ ಪೋಷಕರ ಮೇಲೆ ಯಾವುದೇ ಕ್ರಮ ಕೈಗೊಳ್ಳುತ್ತೀರಾ ಎಂದು ವಿಡಿಯೋ ಪೋಸ್ಟ್ ಮಾಡಿದ ವ್ಯಕ್ತಿ ಕೇಳಿದ್ದಾರೆ.

ಬೆಂಗಳೂರು ಸಂಚಾರ ಪೊಲೀಸರನ್ನು ಟ್ಯಾಗ್ ಮಾಡಿರುವ ವಿಡಿಯೋಗೆ, ಬೆಂಗಳೂರು ಟ್ರಾಫಿಕ್ ಪೊಲೀಸರು ಪ್ರತಿಕ್ರಿಯಿಸಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಮಹದೇವಪುರ ಸಂಚಾರಿ ಪೊಲೀಸರು ವೈಟ್‌ಫೀಲ್ಡ್ ಬಳಿ ತಂಗಿರುವ ಸ್ಕೂಟರ್ ಸವಾರನನ್ನು ಪತ್ತೆ ಮಾಡಿದ್ದಾರೆ.

ಮಗನನ್ನು ಫುಟ್‌ರೆಸ್ಟ್ ಮೇಲೆ ನಿಲ್ಲಿಸಿಕೊಂಡು ಸ್ಕೂಟರ್ ಸವಾರಿ ಮಾಡಿದ ದಂಪತಿ
ಸಂಚಾರ ನಿಯಮ ಉಲ್ಲಂಘಿಸುತ್ತಿದ್ದೀರಾ? 3 ತಿಂಗಳು ನಿಮ್ಮ ಡ್ರೈವಿಂಗ್‌ ಲೈಸೆನ್ಸ್ ಅಮಾನತು ಗ್ಯಾರಂಟಿ‌!

'ಪೊಲೀಸ್ ಠಾಣೆಗೆ ಬಂದ ದಂಪತಿ, ತಮ್ಮ ಮಗ ಸ್ಕೂಟರ್‌ನ ಫುಟ್‌ರೆಸ್ಟ್ ಮೇಲೆ ನಿಲ್ಲುವುದಾಗಿ ಹಠ ಮಾಡಿದನು. ತಮ್ಮ ಮಗನ ಎಂಟನೇ ಹುಟ್ಟುಹಬ್ಬದ ಕಾರಣ, ಆತನ ಆಸೆಯನ್ನು ಪೂರೈಸಲೆಂದು ಈ ರೀತಿ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ದಂಪತಿ ವಿರುದ್ಧ ಐಪಿಸಿ ಸೆಕ್ಷನ್ 279ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದಂಡ ಪಾವತಿಸಲು ಅವರು ನ್ಯಾಯವ್ಯಾಪ್ತಿಯ ಸಂಚಾರ ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com