ಬೆಂಗಳೂರಿನ ಹಲವು ಭಾಗಗಳಲ್ಲಿ ತುಂತುರು ಮಳೆ; ಬರೊಬ್ಬರಿ 150 ದಿನಗಳ ಬಳಿಕ ವರುಣದೇವ ಆಗಮನ!

ರಾಜಧಾನಿ ಬೆಂಗಳೂರಿನ ಮೇಲೆ ಮುನಿಸಿಕೊಂಡಿದ್ದ ಮಳೆರಾಯ ಕೊನೆಗೂ ತನ್ನ ಮುನಿಸು ಬಿಟ್ಟು ಮಳೆಯಲಾರಂಭಿಸಿದ್ದು, ನಗರದ ಹಲವು ಪ್ರದೇಶಗಳಲ್ಲಿ ಇಂದು ತುಂತುರು ಮಳೆ ವರದಿಯಾಗಿದೆ.
ಬೆಂಗಳೂರು ಮಳೆ
ಬೆಂಗಳೂರು ಮಳೆ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಮೇಲೆ ಮುನಿಸಿಕೊಂಡಿದ್ದ ಮಳೆರಾಯ ಕೊನೆಗೂ ತನ್ನ ಮುನಿಸು ಬಿಟ್ಟು ಮಳೆಯಲಾರಂಭಿಸಿದ್ದು, ನಗರದ ಹಲವು ಪ್ರದೇಶಗಳಲ್ಲಿ ಇಂದು ತುಂತುರು ಮಳೆ ವರದಿಯಾಗಿದೆ.

ಬಿರು ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಸಿಲಿಕಾನ್​ ಸಿಟಿ ಬೆಂಗಳೂರಿಗರಿಗೆ ಕೊನೆಗೂ ವರಣದೇವನ ದರ್ಶನವಾಗಿದ್ದು, ನಗರದ ಹಲವು ಭಾಗಗಳಲ್ಲಿ ಇಂದು ಸಂಜೆ ತುಂತುರು ಮಳೆಯಾಗಿದೆ.

ಬೆಂಗಳೂರು ಮಳೆ
ಕಾದು ಕೆಂಡವಾಗಿದ್ದ ಬೆಂಗಳೂರಿನಲ್ಲಿ ವರ್ಷದ ಮೊದಲ ಮಳೆ: ಎಲ್ಲೆಲ್ಲಿ ಮಳೆಯಾಗುತ್ತಿದೆ?

ನಗರದ ನಾಗರಬಾವಿ, ವಿಜಯನಗರ, ಮೈಸೂರು ರಸ್ತೆ, ನಾಯಂಡಹಳ್ಳಿ, ಗೊಟ್ಟಿಗೆರೆ, ಆರ್ ಟಿ ನಗರ, ಹೆಬ್ಬಾಳ, ಸಿವಿ ರಾಮನ್ ನಗರ, ರಾಜಾಜಿನಗರ, ಅನ್ನಪೂರ್ಣೇಶ್ವರಿ ನಗರ, ಜ್ಞಾನಭಾರತಿ, ವೈಟ್‌ಫೀಲ್ಡ್, ವರ್ತೂರು, ಸರ್ಜಾಪುರ ರಸ್ತೆ, ಮಾರತ್ತಹಳ್ಳಿ, ಬೆಳ್ಳಂದೂರು, ಬೊಮ್ಮನಹಳ್ಳಿ, ಬಿಟಿಎಂ ಲೇಔಟ್, ಕೋರಮಂಗಲ, ಜಯನಗರ, ಜೆಪಿ ನಗರ, ಎಚ್‌ಎಸ್‌ಆರ್ ಲೇಔಟ್, ಬನಶಂಕರಿ, ಉತ್ತರಹಳ್ಳಿ, ರಾಜರಾಜೇಶ್ವರಿ ನಗರ, HSR ಲೇಔಟ್ ಮತ್ತು ಕಗ್ಗದಾಸನಪುರದಲ್ಲಿ ಇಂದು ಸಂಜೆ ತುಂತುರು ಮಳೆಯಾಗುತ್ತಿದೆ.

ಇದಲ್ಲದೆ ನಗರದ ಟೌನ್ ಹಾಲ್, ಕೆಆರ್ ಮಾರ್ಕೆಟ್, ಕೆಆರ್ ಸರ್ಕಲ್, ವಿಧಾನಸೌಧ, ಜೆ.ಪಿ.ನಗರ, ಕಾರ್ಪೊರೇಷನ್ ಸರ್ಕಲ್, ಮೈಸೂರು ಬ್ಯಾಂಕ್ ಸರ್ಕಲ್ ಸೇರಿದಂತೆ ಹಲವೆಡೆ ತುಂತುರು ಮಳೆ ಶುರುವಾಗಿದೆ. ಬೆಂಗಳೂರು ನಗರದ ಟಾಟಾ ನಗರ, ಸಹಕಾರ ನಗರ, ಜಾಲಹಳ್ಳಿ, ಪೀಣ್ಯ, ದಾಸರಹಳ್ಳಿ, ಯಶವಂತಪುರ, ಮಲ್ಲೇಶ್ವರ, ಡಾಲರ್ಸ್ ಕಾಲೋನಿ, ಉಳ್ಳಾಲ ಉಪನಗರದಲ್ಲೂ ತುಂತುರು ಮಳೆಯಾಗುತ್ತಿದೆ.

ಕೆಲವೆಡೆ ಮೋಡ ಕವಿದ ವಾತಾವರಣ ಹಿನ್ನಲೆ ನಗರದ ಕೆಲವೆಡೆ ಲಘು ಮಳೆಯಾಗಿದೆ. ಎರಡು ದಿನ ಕಾಲ ಬೆಂಗಳೂರಿನಲ್ಲಿ ಹಗುರ ಮಳೆ ಕುರಿತು ಹವಾಮಾನ ಇಲಾಖೆ‌ ಮೂನ್ಸುಚನೆ ನೀಡಿತ್ತು. ನಿನ್ನೆ ಕೂಡ ನಗರದ ಕೆಂಗೇರಿ, ಆರ್ ಆರ್ ನಗರದಲ್ಲಿ ಮಳೆಯಾಗಿತ್ತು. ಇವತ್ತು ಕೂಡ ನಗರದ ಹಲವೆಡೆ ಲಘು ಮಳೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com