ಬಿಜೆಪಿ ನಾಯಕರಿಗೆ ಮಹಿಳೆಯರ ರಕ್ಷಕರೆಂದು ಹೇಳುವ ನೈತಿಕ ಹಕಿಲ್ಲ: ಡಾ. ಎಂ. ವೀರಪ್ಪ ಮೊಯ್ಲಿ

ಬಿಜೆಪಿ ನಾಯಕರಿಗೆ ಮಹಿಳೆಯರ ರಕ್ಷಕರೆಂದು ಹೇಳುವ ನೈತಿಕ ಹಕ್ಕಿಲ್ಲ ಎಂದು ಮಾಜಿ ಕೇಂದ್ರ ಸಚಿವ ಡಾ. ಎಂ.ವೀರಪ್ಪ ಮೊಯ್ಲಿ ವಾಗ್ದಾಳಿ ನಡೆಸಿದ್ದಾರೆ.
ಡಾ.ಎಂ. ವೀರಪ್ಪ ಮೊಯ್ಲಿ
ಡಾ.ಎಂ. ವೀರಪ್ಪ ಮೊಯ್ಲಿ

ಮಂಗಳೂರು: ಬಿಜೆಪಿ ನಾಯಕರಿಗೆ ಮಹಿಳೆಯರ ರಕ್ಷಕರೆಂದು ಹೇಳುವ ನೈತಿಕ ಹಕ್ಕಿಲ್ಲ ಎಂದು ಮಾಜಿ ಕೇಂದ್ರ ಸಚಿವ ಡಾ. ಎಂ.ವೀರಪ್ಪ ಮೊಯ್ಲಿ ವಾಗ್ದಾಳಿ ನಡೆಸಿದ್ದಾರೆ. ಎಎನ್ಐ ಸುದ್ದಿಸಂಸ್ಥೆ ಜೊತೆಗೆ ಮಾತನಾಡಿದ ಅವರು, ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ ಪ್ರಕರಣ ಅತ್ಯಂತ ದುರದೃಷ್ಟಕರ. ನಮ್ಮದೇ ಪಕ್ಷದ ಉಪಮೇಯರ್ ಮಗಳು ಕೊಲೆಯಾಗಿದ್ದಾರೆ. ಈ ಹೀನಕೃತ್ಯವನ್ನು ನಾವೆಲ್ಲ ಖಂಡಿಸಿದ್ದೇವೆ. ಆದರೆ ಈ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದರು.

ರಾಷ್ಟ್ರೀಯ ಅಪರಾಧ ಬ್ಯೂರೋ ವರದಿ ಪ್ರಕಾರ ಈಗ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ದ್ವಿಗುಣಗೊಳ್ಳುತ್ತಿದೆ. ಬೇಟಿ ಬಚಾವೋ ಬೇಟಿ ಪಢಾವೋ ಘೋಷಣೆ ಏಲ್ಲಿದೆ ಎಂದು ಪ್ರಶ್ನಿಸಿದ ಅವರು, ಯುಪಿಎ ಸರ್ಕಾರ ಇದ್ದಾಗ ನಿರ್ಭಯ ನಿಧಿಯನ್ನು ಸೃಷ್ಟಿಸಲಾಯಿತು. ದೇಶದ ಮಹಿಳೆಯರ ಸುರಕ್ಷತೆಗೆ ಮೂಲಸೌಕರ್ಯ ಕಲ್ಪಿಸಲು ನೀಡಿದ್ದ ನಾಮಮಾತ್ರದ ಹಣವನ್ನು ಅವರು ಕಡಿಮೆ ಮಾಡಿದ್ದಾರೆ. ನಿರ್ಭಯ ಕಾಯ್ದೆ ರೂಪಿಸಿ, ಮಹಿಳೆಯರು, ಯುವತಿಯರ ರಕ್ಷಣೆಗಾಗಿ ಕಾನೂನನ್ನು ಬಿಗಿಗೊಳಿಸುವ ಕೆಲಸ ಮಾಡಿದದ್ದು ಕಾಂಗ್ರೆಸ್ ಮಾತ್ರ ಬಿಜೆಪಿ ನಾಯಕರಿಗೆ ಮಹಿಳೆಯರ ರಕ್ಷಕರೆಂದು ಹೇಳುವ ನೈತಿಕ ಹಕಿಲ್ಲ ಎಂದು ಹೇಳಿದರು.

ಡಾ.ಎಂ. ವೀರಪ್ಪ ಮೊಯ್ಲಿ
ನೇಹಾ ಹಿರೇಮಠ್ ಹತ್ಯೆ: ನಾಳೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗೆ ಬಿಜೆಪಿ ಕರೆ

ಇಂಡಿಯಾ ಮೈತ್ರಿ ಉತ್ತುಂಗಕ್ಕೇರುತ್ತಿದೆ. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ಪ್ರಬಲ ಮೈತ್ರಿ ಇದೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೊರತುಪಡಿಸಿ ಈ ಬಾರಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ನಂತರ ಸೇರ್ಪಡೆಯಾಗುವುದಾಗಿ ಅವರು ಹೇಳಿದ್ದಾರೆ. ಈ ರೀತಿಯ ಬಲವಾದ ಬದ್ಧತೆಯೊಂದಿಗೆ ಬಿಜೆಪಿ-ಎನ್ ಡಿಎ ವಿರುದ್ಧ ಹೋರಾಡುತ್ತಿರುವಾಗ 2024 ರ ವೇಳೆಗೆ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

ಕಾಂಗ್ರೆಸ್ ನಮ್ಮನ್ನು ಕೆಟ್ಟದಾಗಿ ನಡೆಸಿಕೊಂಡಿದೆ ಎಂಬ ಎಚ್. ಡಿ. ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ವೀರಪ್ಪ ಮೊಯ್ಲಿ, ಅವರು ಹೇಳಿದ್ದು ಸರಿ, 200 ಸಂಸದರ ಬೆಂಬಲ ನೀಡಿ ದೇವೇಗೌಡರನ್ನು ಪ್ರಧಾನಿ ಮಾಡಿದ್ದೇವು. ಹೌದು ಕುಮಾರಸ್ವಾಮಿಯನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡುವ ಮೂಲಕ ತಪ್ಪು ಮಾಡಿದ್ದೇವು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com