ವಿಜಯಪುರ: ಕಾರು ಪಲ್ಟಿ, ಇಬ್ಬರ ಸಾವು; 4 ದಿನಗಳ ಹಿಂದಷ್ಟೇ ನಿವೃತ್ತರಾಗಿದ್ದ ಸೈನಿಕನ ದಾರುಣ ಅಂತ್ಯ!

ಕಾರು ಪಲ್ಟಿಯಾದ ಪರಿಣಾ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರ ಗಾಯಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಡವಳಗಿ ಬಳಿ ನಡೆದಿದೆ.
ಪಲ್ಟಿಯಾದ ಕಾರು
ಪಲ್ಟಿಯಾದ ಕಾರು

ವಿಜಯಪುರ: ಕಾರು ಪಲ್ಟಿಯಾದ ಪರಿಣಾ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರ ಗಾಯಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಡವಳಗಿ ಬಳಿ ನಡೆದಿದೆ.

ದೊಡ್ಡಯ್ಯ ಪುರಾಣಿಕಮಠ (37), ಪುಷ್ಪಾವತಿ (55) ಮೃತ ದುರ್ದೈವಿ. ಮೂಲತಃ ವಿಜಯಪುರ ಜಿಲ್ಲೆಯ ಕರಭಂಟನಾಳದ ದೊಡ್ಡಯ್ಯ ಪುರಾಣಿಕಮಠ ಅವರು ಕಳೆದ ನಾಲ್ಕು ದಿನಗಳ ಹಿಂದಷ್ಟೇ ಸೇನೆಯಿಂದ ನಿವೃತ್ತಿ ಹೊಂದಿದ್ದರು. ಪತ್ನಿ, ಇಬ್ಬರು ಮಕ್ಕಳ ಹಾಗೂ ಅತ್ತೆ ಜತೆಗೆ ಡವಳಗಿಯಿಂದ ಮುದ್ದೇಬಿಹಾಳಕ್ಕೆ ಹೋಗುತ್ತಿದ್ದರು. ಕತ್ತಲಿಲ್ಲ ಚಾಲಕನ ನಿಯಂತ್ರಣ ತಪ್ಪಿದ್ದು, ಏಕಾಏಕಿ ಕಾರು ಪಲ್ಟಿಯಾಗಿದೆ.

ಕಾರು ಪಲ್ಟಿಯಾದ ರಭಸಕ್ಕೆ ದೊಡ್ಡಯ್ಯ ಪುರಾಣಿಕಮಠ (37), ಪುಷ್ಪಾವತಿ ಹಿರೆಮಠ (55) ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂವರು ಗಾಯಾಳುಗಳಿಗೆ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಪಲ್ಟಿಯಾದ ಕಾರು
ರಾಜಸ್ಥಾನದ ಜಲಾವರ್ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ: 9 ಮಂದಿ ಸಾವು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com