ಬೆಂಗಳೂರಿನ ಟ್ರಾಫಿಕ್ ಮಧ್ಯೆ ಸ್ಕೂಟರ್ ನಲ್ಲೇ ಆನ್‌ಲೈನ್ ಮೀಟಿಂಗ್ ನಡೆಸಿದ ಮಹಿಳೆ, ವಿಡಿಯೋ ವೈರಲ್!

ಬೆಂಗಳೂರು ಬರಬರುತ್ತಾ ಟ್ರಾಫಿಕ್ ಸಿಟಿಯಾಗಿ ಕುಖ್ಯಾತಿ ಪಡೆಯುತ್ತಿದೆ. ಪೀಕ್ ಅವರ್ಸ್ ನಲ್ಲಿ ಸವಾರರು ಟ್ರಾಫಿಕ್ ನಿಂದ ಹೈರಾಣಾಗುತ್ತಿದ್ದಾರೆ. ಸದ್ಯದ ಪರಿಸ್ಥಿತಿ ನೋಡಿದರೆ ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಪರಿಹಾರವೇ ಇಲ್ಲ ಎನ್ನುವಂತಾಗಿದೆ.
ಟ್ರಾಫಿಕ್ ನಲ್ಲೇ ಆನ್ ಲೈನ್ ವಿಡಿಯೋ ಕಾಲ್
ಟ್ರಾಫಿಕ್ ನಲ್ಲೇ ಆನ್ ಲೈನ್ ವಿಡಿಯೋ ಕಾಲ್
Updated on: 

ಬೆಂಗಳೂರು: ಬೆಂಗಳೂರು ಬರಬರುತ್ತಾ ಟ್ರಾಫಿಕ್ ಸಿಟಿಯಾಗಿ ಕುಖ್ಯಾತಿ ಪಡೆಯುತ್ತಿದೆ. ಪೀಕ್ ಅವರ್ಸ್ ನಲ್ಲಿ ಸವಾರರು ಟ್ರಾಫಿಕ್ ನಿಂದ ಹೈರಾಣಾಗುತ್ತಿದ್ದಾರೆ. ಸದ್ಯದ ಪರಿಸ್ಥಿತಿ ನೋಡಿದರೆ ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಪರಿಹಾರವೇ ಇಲ್ಲ ಎನ್ನುವಂತಾಗಿದೆ.

ಆದರೆ ವಿಶೇಷ ಎಂದರೆ ಟ್ರಾಫಿಕ್ ನಲ್ಲೇ ಕೆಲವರು ಆನ್ ಲೈನ್ ಮೀಟಿಂಗ್, ವಿಡಿಯೋ ಕಾಲ್ ಮೂಲಕ ತಮ್ಮ ಆಫೀಸ್ ಕೆಲಸಗಳನ್ನು ಮಾಡಿಕೊಳ್ಳುತ್ತಿರುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಸ್ಟೂಟರ್ ಚಲಾಯಿಸುತ್ತಿದ್ದಾಗ ಮಹಿಳೆಯೊಬ್ಬರು ಟ್ರಾಫಿಕ್ ನಲ್ಲೇ ಸ್ಕೂಟರ್ ಗೆ ಅಳವಡಿಸಿದ್ದ ಮೊಬೈಲ್ ನಲ್ಲಿ ಆನ್ ಲೈನ್ ಮೀಟಿಂಗ್ ನಡೆಸಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ.

ಟ್ರಾಫಿಕ್ ನಲ್ಲೇ ಆನ್ ಲೈನ್ ವಿಡಿಯೋ ಕಾಲ್
ವರ್ಲ್ಡ್ ಫೇಮಸ್ ಆದ ಬೆಂಗಳೂರು ಟ್ರಾಫಿಕ್ ಜಾಮ್; ಬಸ್ ನಲ್ಲೇ ಊಟ ಮುಗಿಸಿದ BMTC ಚಾಲಕ, ವಿಡಿಯೋ ವೈರಲ್!

ಇದನ್ನು ಸೆರೆಹಿಡಿದ ವ್ಯಕ್ತಿಯೊಬ್ಬರು ವರ್ಕ್ ಫ್ರಮ್ ಟ್ರಾಫಿಕ್ ಎಂದು ಟೈಟಲ್ ಕೊಟ್ಟು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಮಹಿಳೆಯ ಕರ್ತವ್ಯ ಪ್ರಜ್ಞೆಗೆ ಶಬ್ಬಾಶ್‌ಗಿರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com