ಈ ಬಾರಿ ಮನೆಯಿಂದ ಹೊರಬಂದು ದೊಡ್ಡ ಸಂಖ್ಯೆಯಲ್ಲಿ ಮತ ಚಲಾಯಿಸುವರೇ ಬೆಂಗಳೂರಿಗರು?

ಬೆಂಗಳೂರು ಗ್ರಾಮಾಂತರ, ಉತ್ತರ ಮತ್ತು ಕೇಂದ್ರ ಹಾಗೂ ಬೆಂಗಳೂರು ದಕ್ಷಿಣ, ಎಲ್ಲಾ ನಾಲ್ಕು ಸಂಸದೀಯ ಕ್ಷೇತ್ರಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತ್ತು ಚುನಾವಣಾ ಅಧಿಕಾರಿಗಳು ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಿಲಿಕಾನ್ ಸಿಟಿ ಖ್ಯಾತಿಯ ರಾಜ್ಯ ರಾಜಧಾನಿ ಬೆಂಗಳೂರು, ಕೇವಲ ಆದಾಯಕ್ಕೆ ಮಾತ್ರವಲ್ಲ, ಅದು ಹೊಂದಿರುವ ಜನಸಂಖ್ಯೆಯಿಂದಲೂ ಹೆಚ್ಚು ಪ್ರಾಮಖ್ಯತೆ ಪಡೆದಿದೆ. ಬೆಂಗಳೂರಿನಲ್ಲಿ ಅಧಿಕ ಸಂಖ್ಯೆಯ ಮತದಾರರಿದ್ದಾರೆ.

ಬೆಂಗಳೂರು ಗ್ರಾಮಾಂತರ, ಉತ್ತರ ಮತ್ತು ಕೇಂದ್ರ ಹಾಗೂ ಬೆಂಗಳೂರು ದಕ್ಷಿಣ, ಎಲ್ಲಾ ನಾಲ್ಕು ಸಂಸದೀಯ ಕ್ಷೇತ್ರಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತ್ತು ಚುನಾವಣಾ ಅಧಿಕಾರಿಗಳು ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ.

ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಅವರ ಪ್ರಕಾರ, 2019 ರ ಲೋಕಸಭೆ ಮತ್ತು 2023 ರ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಒಟ್ಟಾರೆ ಮತದಾರರ ಶೇಕಡಾವಾರು ಶೇಕಡಾ 54 ರಷ್ಟಿತ್ತು. ತಮಿಳುನಾಡಿನ ಉದಾಹರಣೆಯನ್ನು ಉಲ್ಲೇಖಿಸಿರುವ ತಜ್ಞರು ಮೊದಲ ಹಂತದಲ್ಲಿ ಶೇಕಡಾವಾರು 69.72 ರಷ್ಟು ಮತದಾನವಾಗಿದೆ. ಆದರೆ ರಾಜ್ಯದಲ್ಲಿ ಶುಕ್ರವಾರ ಮತದಾನವಾಗಿದ್ದು, ದೀರ್ಘ ವಾರಾಂತ್ಯದ ಜನರು ರಜೆಯ ಮೇಲೆ ಹೊರಹೋಗಲು ಸೂಕ್ತವಾಗಿದೆ.

ಸಾಂದರ್ಭಿಕ ಚಿತ್ರ
ಲೋಕಸಭಾ ಚುನಾವಣೆ: 2ನೇ ಹಂತದಲ್ಲಿ 88 ಸ್ಥಾನಗಳಿಗೆ ಮತದಾನ, ರಾಹುಲ್, ಹೇಮಾ ಮತ್ತಿತರರು ಕಣದಲ್ಲಿ!

ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಿದೆ. ಇದು ಹಲವಾರು ಕಾರಣಗಳಿಂದಾಗಿ. ಮತದಾನ ಜಾಗೃತಿಯನ್ನು ಹೆಚ್ಚಿಸುವ ನಮ್ಮ ಮನೆ-ಮನೆ ಅಭಿಯಾನದಲ್ಲಿ ನಾಗರಿಕರೊಂದಿಗೆ ಸಂವಾದದ ಸಮಯದಲ್ಲಿ, ಜನರು ಮತದಾನ ಮಾಡದಿರಲು ವಿಚಿತ್ರ ಕಾರಣಗಳನ್ನು ನೀಡಿದ್ದಾರೆ,

ಬೂತ್ ಎಲ್ಲಿದೆ ಎಂದು ತಿಳಿದಿಲ್ಲ, ವಿಪರೀತ ರಶ್ ಇದೆ, ಇದು ತುಂಬಾ ದೂರದಲ್ಲಿದೆ, ಸ್ಥಳೀಯ ಸಮಸ್ಯೆಗಳು ಪರಿಹರಿಸಲಾಗಿಲ್ಲ, ಇ-ರೋಲ್ ಬಂದಿಲ್ಲ, ಬೂತ್‌ಗಳು ನೈರ್ಮಲ್ಯವಾಗಿಲ್ಲ, ಅಥವಾ ಯಾವುದೇ ಸೌಲಭ್ಯಗಳಿಲ್ಲ. ಮತದಾನಕ್ಕೆ ಪ್ರತಿಯಾಗಿ ಏನು ಸಿಗುತ್ತದೆ ಎಂದು ಕೆಲವರು ಪ್ರಶ್ನಿಸಿದ್ದಾರೆ ಎಂದು ಚುನಾವಣಾಧಿಕಾರಿಯೊಬ್ಬರು ತಿಳಿಸಿದರು.

2019 ರ ಲೋಕಸಭಾ ಚುನಾವಣಾ ಮಾಹಿತಿಯು ಬೆಂಗಳೂರು ಗ್ರಾಮಾಂತರದಲ್ಲಿ ಶೇಕಡಾ 64.98 ರಷ್ಟು ಮತದಾನವಾಗಿದೆ ಎಂದು ತೋರಿಸಿದೆ, ಇತರ ಮೂರು ಕ್ಷೇತ್ರಗಳಿಗೆ ಹೋಲಿಸಿದರೆ - ಬೆಂಗಳೂರು ಸೆಂಟ್ರಲ್ 54.32%, ಬೆಂಗಳೂರು ಉತ್ತರ 54.77% ಮತ್ತು ಬೆಂಗಳೂರು ದಕ್ಷಿಣ 53.7% ದಾಖಲಾಗಿದೆ. ಬೆಂಗಳೂರಿನಲ್ಲಿ ಒಟ್ಟು ಅರ್ಹ ಮತದಾರರ ಸಂಖ್ಯೆ 1,07,92,586. ಬೆಂಗಳೂರು ಉತ್ತರದಿಂದ ಅತಿ ಹೆಚ್ಚು ಅಂದರೆ 32,14,496 ಮತದಾರರಿದ್ದಾರೆ. ಬೆಂಗಳೂರು ಉತ್ತರವು ರಾಜ್ಯದ ಅತಿದೊಡ್ಡ ಸಂಸದೀಯ ಕ್ಷೇತ್ರವಾಗಿದೆ ಮತ್ತು ದೇಶದ ದೊಡ್ಡ ಐದು ಕ್ಷೇತ್ರಗಳಲ್ಲಿ ಒಂದಾಗಿದೆ ಎಂಬುದನ್ನು ಗಮನಿಸಬೇಕು.

ಸಾಂದರ್ಭಿಕ ಚಿತ್ರ
ಬೆಂಗಳೂರು: ಮಾನವ ಸರಪಳಿ ಮೂಲಕ ಮತದಾರರಲ್ಲಿ ಮತದಾನ ಬಗ್ಗೆ ಜಾಗೃತಿ

ಇದು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಎರಡನೇ ದೊಡ್ಡ ಕ್ಷೇತ್ರ ಬೆಂಗಳೂರು ಗ್ರಾಮಾಂತರವಾಗಿದ್ದು, ಎಂಟು ವಿಧಾನಸಭಾ ಕ್ಷೇತ್ರಗಳೊಂದಿಗೆ 28,02,580 ಮತದಾರರಿದ್ದಾರೆ. ಬೆಂಗಳೂರು ಕೇಂದ್ರದಲ್ಲಿ ಒಟ್ಟು 24,33,751 ಹಾಗೂ ಬೆಂಗಳೂರು ದಕ್ಷಿಣದಲ್ಲಿ 23,41,759 ಮತದಾರರಿದ್ದಾರೆ.

ಬೆಂಗಳೂರಿನ ಹೆಚ್ಚಿನ ನಿವಾಸಿಗಳು ಸ್ಥಳೀಯರಲ್ಲ, ಆದ್ದರಿಂದ ಮತದಾನದ ಶೇಕಡಾವಾರು ಕಡಿಮೆಯಾಗಿದೆ ಎಂಬ ಅಂಶಕ್ಕೆ ಪ್ರತಿಕ್ರಿಯಿಸಿದ ರಾಜಕೀಯ ತಜ್ಞ ಸಂದೀಪ್ ಶಾಸ್ತ್ರಿ, ಹಾಗಿದ್ದರೆ, ರಾಜ್ಯದ ಇತರ ಭಾಗಗಳಲ್ಲಿ ಮತದಾನದ ಶೇಕಡಾವಾರು ಹೆಚ್ಚು ಇರುತ್ತಿತ್ತು. ಇದೇ ರೀತಿಯ ಕಳಪೆ ಮತದಾನದ ಶೇಕಡಾವಾರು ಅನೇಕ ನಗರ ಭಾರತೀಯ ನಗರಗಳಲ್ಲಿಯೂ ಕಂಡುಬಂದಿದೆ. ನಗರ, ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಜನರು ಮತದಾನದಲ್ಲಿ ಆಸಕ್ತಿ ಕಡಿಮೆಯಾಗಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com