ಬೆಂಗಳೂರು: ಮತ ಚಲಾಯಿಸುವಾಗ ಬೀಪ್ ಸೌಂಡ್ ಕೇಳಿಸಲಿಲ್ಲ; ಮತದಾರರ ಆರೋಪ

ಮತದಾನ ಮಾಡುವಾದ ಬೀಪ್ ಸೌಂಡ್ ಕೇಳಿ ಬರಲಿಲ್ಲ ಎಂದು ಹಲವು ಮತದಾರರು ಆರೋಪ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮತದಾನ ಮಾಡುವಾದ ಬೀಪ್ ಸೌಂಡ್ ಕೇಳಿ ಬರಲಿಲ್ಲ ಎಂದು ಹಲವು ಮತದಾರರು ಆರೋಪ ಮಾಡಿದ್ದಾರೆ.

ಹಲಸೂರಿನ ಕೇಂಬ್ರಿಡ್ಜ್ ರಸ್ತೆಯ ಸೇಂಟ್ ಆನ್ಸ್ ಶಾಲೆಯಲ್ಲಿ ಮತ ಚಲಾಯಿಸಿದ ವಿನ್ಸೆಂಟ್ ಪಿಂಟೋ ಎಂಬುವವರು ಮಾತಾಡಿ, ಮತದಾನದ ವೇಳೆ ಬಟನ್ ಒತ್ತಿದ 7 ಸೆಕೆಂಡ್ ಗಳ ಕಾಲ ಬೀಪ್ ಸೌಂಡ್ ಕೇಳಿ ಬರಬೇಕು. ಇದಕ್ಕಾಗಿ ನಾನು ಕಾದು ನಿಂತಿದ್ದೆ. ಆದರೆ, ಶಬ್ಧ ಬರಲಿಲ್ಲ. ಈ ಬಗ್ಗೆ ಚುನಾವಣಾಧಿಕಾರಿಗೆ ದೂರು ನೀಡಿದೆ. ಬಳಿಕ ಅವರು ಎರಡನೇ ಬಾರಿ ಮತ ಚಲಾಯಿಸುವಂತೆ ಸೂಚಿಸಿದರು. ಮತ್ತೆ ಒತ್ತಿದೆ. ನಂತರವೂ ಸೌಂಡ್ ಬರಲಿಲ್ಲ. ನಂತರ ಯಂತ್ರ ಪರಿಶೀಲಿಸಿದ ಅಧಿಕಾರಿಗಳು, ಮೂರನೇ ಬಾರಿ ಒತ್ತುವಂತೆ ತಿಳಿಸಿದರು. ಈ ವೇಳೆ ಸೌಂಡ್ ಬಂದಿತ್ತು. ನಾನು ನಿವೃತ್ತ ಎಲೆಕ್ಟ್ರಾನಿಕ್ಸ್ ಇಂಜಿನಿಯರ್, ನನಗಿಂತ ಮೊದಲು ಇನ್ನೂ 10-12 ಜನರು ಮತ ಚಲಾಯಿಸಿದ್ದಾರೆ, ಅವರಲ್ಲಿ ಹೆಚ್ಚಿನವರು ಹಿರಿಯ ನಾಗರಿಕರಾಗಿದ್ದರು. ಅವರು ಮತ ಚಲಾಯಿಸುವಾಗ ಸೌಂಡ್ ಬಂದಿರಲಿಲ್ಲ. ಇದು ಉದ್ದೇಶಪೂರ್ವಕ ವಂಚನೆಯಂತೆ ಕಾಣುತ್ತಿದೆ. ಈ ಬಗ್ಗೆ ಭಾರತೀಯ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಧ್ವನಿ ಎತ್ತಿದ್ದೇನೆಂದು ಹೇಳಿದ್ದಾರೆ.

ಸಂಗ್ರಹ ಚಿತ್ರ
ಲೋಕಸಭಾ ಚುನಾವಣೆ 2024: ಮತದಾನಕ್ಕೆ ಸಿಲಿಕಾನ್ ಸಿಟಿ ಜನತೆಯಿಂದ ನೀರಸ ಪ್ರತಿಕ್ರಿಯೆ, ಶೇ.52.81ರಷ್ಟು ಮತದಾನ!

ಬೆಂಗಳೂರು ಉತ್ತರದ ಕೆಂಗೇರಿಯಲ್ಲಿರುವ ಎಸ್‌ಬಿಎಸ್‌ ಬಂಡಿಮಠ ಶಾಲೆಯಲ್ಲಿ ಮತದಾನ ಮಾಡಿದ ಎಸ್‌ ಪರಮೇಶ್ವರಿ ಅವರು ಮಾತನಾಡಿ, ಮತದಾನ ಮಾಡುವಾಗ ಬೀಪ್‌ ಶಬ್ದ ಕೇಳಲಿಲ್ಲ. ಈ ಬಗ್ಗೆ ಮತಗಟ್ಟೆ ಅಧಿಕಾರಿಗೆ ದೂರು ನೀಡಿದೆ, ಆದರೆ ಸಬ್-ಇನ್‌ಸ್ಪೆಕ್ಟರ್ ಮತ್ತು ಪೋಲ್ ಅಧಿಕಾರಿಗಳು ನನ್ನೊಂದಿಗೆ ಅಸಭ್ಯವಾಗಿ ಮಾತನಾಡಿದರು, ಮತ ಚಲಾಯಿಸಬೇಕೆಂದರೆ ಮಾಡಿ, ಇಲ್ಲದಿದ್ದರೆ ನೀವು ಹೋಗಿ ಎಂದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಶೈಲಾ ಅವರು ಸಿವಿ ರಾಮನ್ ನಗರದ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ, ಮತಯಂತ್ರದ ಬಟನ್ ಒತ್ತಿ 10-15 ಸೆಕೆಂಡುಗಳ ಕಾಲವಾದರೂ ಬೀಪ್ ಸೌಂಡ್ ಕೇಳಿಸಲಿಲ್ಲ. ಈ ಬಗ್ಗೆ ದೂರು ನೀಡಿದ್ದೆ. ಅಧಿಕಾರಿಯೊಬ್ಬರು ಮತ್ತೊೂಬ್ಬ ಅಧಿಕಾರಿಗೆ ಬಟನೆ ಬಟನ್ ಒತ್ತುವಂತೆ ಹೇಳಿದರು. ಈ ವೇಳೆ ಬೀಪ್ ಸೌಂಡ್ ಬಂದಿತ್ತು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com