ಅಕ್ರಮವಾಗಿ ಭಾರತೀಯ ಮಾರುಕಟ್ಟೆ ಪ್ರವೇಶಿಸಲು ಚೀನಾದ ಬೆಳ್ಳುಳ್ಳಿ ಪ್ರಯತ್ನ; ತಜ್ಞರು ಹೇಳಿದ್ದೇನು?

ಇತ್ತೀಚಿನ ದಿನಗಳಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಅದೆಷ್ಟೇ ಮುಂಜಾಗ್ರತೆ ತೆಗೆದುಕೊಂಡರೂ ನಕಲಿ ಪದಾರ್ಥಗಳ ಹಾವಳಿ ಮಾತ್ರ ನಿಲ್ಲುವುದೇ ಇಲ್ಲ. ಚೀನಾದ ಅದೆಷ್ಟೋ ನಕಲಿ ವಸ್ತುಗಳು ಅರಿವಿಲ್ಲದಂತೆಯೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿ ಸುಲಭವಾಗಿ ಜರ ಕೈಗೆಟುಕುತ್ತಿವೆ. ಇದೀಗ ಆ ಸಾಲಿಗೆ ಸೇರಿರುವುದು ಚೀನಾದ ಬೆಳ್ಳುಳ್ಳಿ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಅದೆಷ್ಟೇ ಮುಂಜಾಗ್ರತೆ ತೆಗೆದುಕೊಂಡರೂ ನಕಲಿ ಪದಾರ್ಥಗಳ ಹಾವಳಿ ಮಾತ್ರ ನಿಲ್ಲುವುದೇ ಇಲ್ಲ. ಚೀನಾದ ಅದೆಷ್ಟೋ ನಕಲಿ ವಸ್ತುಗಳು ಅರಿವಿಲ್ಲದಂತೆಯೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿ ಸುಲಭವಾಗಿ ಜರ ಕೈಗೆಟುಕುತ್ತಿವೆ. ಇದೀಗ ಆ ಸಾಲಿಗೆ ಸೇರಿರುವುದು ಚೀನಾದ ಬೆಳ್ಳುಳ್ಳಿ.

ಇನ್ಮುಂದೆ ನೀವು ಪ್ರತಿ ಬಾರಿ ನೀವು ಬೆಳ್ಳುಳ್ಳಿ ಖರೀದಿಸುವಾಗಲೂ ಅದರ ವಾಸನೆಯನ್ನು ಪರಿಶೀಲಿಸಿ ಖರೀದಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈಗಾಗಲೇ ಭಾರತ ಸರ್ಕಾರ ನಿಷೇಧಿಸಿರುವ ಚೀನಾದ ಬೆಳ್ಳುಳ್ಳಿ ಭಾರತೀಯ ಮಾರುಕಟ್ಟೆ ಪ್ರವೇಶಿಸಲು ಪ್ರಯತ್ನಿಸುತ್ತಿದೆ.

ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಬೆಳ್ಳುಳ್ಳಿಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಸುಮಾರು 10 ವರ್ಷಗಳ ಹಿಂದೆಯೇ ಚೀನಾದ ಬೆಳ್ಳುಳ್ಳಿಯನ್ನು ನಿಷೇಧಿಸಿದೆ. ಆದರೆ, ಚೀನಾದ ಬೆಳ್ಳುಳ್ಳಿ ಅಕ್ರಮವಾಗಿ ಮಾರುಕಟ್ಟೆ ಪ್ರವೇಶಿಸಲು ಯತ್ನಿಸುತ್ತಿದ್ದು, ಕೆಲವೆಡೆ ಸ್ಥಳೀಯ ಬೆಳ್ಳುಳ್ಳಿಯೊಂದಿಗೆ ಕಲಬೆರಕೆಯಾಗುತ್ತಿದೆ ಎನ್ನಲಾಗಿದೆ.

'ಈ ಚೀನಾದ ಬೆಳ್ಳುಳ್ಳಿ ಬಿಳಿ ಮತ್ತು ದೊಡ್ಡದಾಗಿ ಕಾಣುತ್ತದೆ. ಆದರೆ, ಸಿಪ್ಪೆ ಸುಲಿದ ನಂತರ, ಅದರಿಂದ ಯಾವುದೇ ವಾಸನೆ ಬರುವುದಿಲ್ಲ ಅಥವಾ ತ್ವರಿತವಾಗಿ ಕೊಳೆಯಲು ಪ್ರಾರಂಭಿಸಿಸುತ್ತಿದೆ. ಇದಕ್ಕೆ ಕಾರಣವೇನೆಂದರೆ, ಇದು ಚೈನೀಸ್ ಬೆಳ್ಳುಳ್ಳಿಯಾಗಿದೆ. ಇದು ಈಶಾನ್ಯ ಮತ್ತು ಉತ್ತರ ಭಾರತದ ಭಾಗಗಳಲ್ಲಿ ಕಂಡುಬರುತ್ತದೆ. ಇದು ದೊಡ್ಡದಾಗಿರುವ ಬೆಳ್ಳುಳ್ಳಿಯಾಗಿದ್ದು, ದಕ್ಷಿಣ ಭಾರತದಲ್ಲಿ ಬೆಳೆಯುವ ಬೆಳ್ಳುಳ್ಳಿ ಚಿಕ್ಕದಾಗಿರುತ್ತದೆ. ಚೈನೀಸ್ ಬೆಳ್ಳುಳ್ಳಿ ನಮ್ಮ ಮಾರುಕಟ್ಟೆಯನ್ನು ಪ್ರವೇಶಿಸುವ ಮುನ್ನವೇ, ಇತರ ಚೀನೀ ವಸ್ತುಗಳಂತೆ ಇದನ್ನು ನಿಲ್ಲಿಸಬೇಕು' ಎಂದು ಹೆಸರು ಹೇಳಲು ಇಚ್ಛಿಸದ ತಜ್ಞರೊಬ್ಬರು ಹೇಳಿದರು.

ಪ್ರಾತಿನಿಧಿಕ ಚಿತ್ರ
ಬೆಳ್ಳುಳ್ಳಿ ಬೆಲೆ ಗಗನಕ್ಕೆ: ಪೂರೈಕೆಯಲ್ಲಿ ಶೇ. 50 ರಷ್ಟು ಕುಸಿತ, ಪ್ರತಿ ಕೆಜಿ 350 ರೂ.ಗೆ ಏರಿಕೆ!

ಯಾವುದೇ ಬೇರುಗಳಿಲ್ಲದ ಈ ಬೆಳ್ಳುಳ್ಳಿಯನ್ನು ಗುರುತಿಸುವುದು ತುಂಬಾ ಸುಲಭ. ಕೆಲವು ಸಂದರ್ಭಗಳಲ್ಲಿ, ಈ ಬೆಳ್ಳುಳ್ಳಿ ಬಿಳಿಯಾಗಿ ಕಾಣುವಂತೆ ಮಾಡಲು ಕ್ಲೋರಿನ್‌ನಿಂದ ತೊಳೆಯಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಶಿಲೀಂಧ್ರಗಳ ಬೆಳವಣಿಗೆಯನ್ನು ಕಡಿಮೆ ಮಾಡಲು ಮೀಥೈಲ್ ಬ್ರೋಮೈಡ್ನೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ ಎಂದರು.

ಬೆಂಗಳೂರು ಸಗಟು ಬೆಳ್ಳುಳ್ಳಿ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ದೀಪಕ್ ಜೆ ಶಾ ಮಾತನಾಡಿ, ಚೀನಾದ ಬೆಳ್ಳುಳ್ಳಿ ಮತ್ತು ಚೈನೀಸ್ ಬಿಳಿ ಈರುಳ್ಳಿ ನಮ್ಮ ಮಾರುಕಟ್ಟೆ ಪ್ರವೇಶಿಸಲು ನಾವು ಬಿಡುವುದಿಲ್ಲ. ಇದನ್ನು ನಿಷೇಧಿಸಲಾಗಿದ್ದು, ಮಾರಾಟ ಮಾಡಲು ಅನುಮತಿಯಿಲ್ಲ. ಇದು ಯಾವುದೇ ಆರೋಗ್ಯ ಪ್ರಯೋಜನಗಳನ್ನು ಹೊಂದಿಲ್ಲ. ಇದು ಅಕ್ರಮವಾಗಿ ಮಾರುಕಟ್ಟೆಗೆ ಬಂದರೆ ಅನಾಹುತವಾಗುತ್ತದೆ ಎಂದು ಅವರು ಹೇಳಿದರು.

ಚೈನೀಸ್ ಬೆಳ್ಳುಳ್ಳಿ ಯಾವುದೇ ಕಟುವಾದ ವಾಸನೆ ಅಥವಾ ಕಟುವಾದ ರುಚಿಯನ್ನು ಹೊಂದಿಲ್ಲ. ಆದರೆ, ನೋಡಲು ಉತ್ತಮವಾಗಿ ಕಾಣುತ್ತದೆ. ಭಾರತದಲ್ಲಿ ಬೆಳೆಯುವ ಬೆಳ್ಳುಳ್ಳಿಗೆ ಸದ್ಯ ಮಾರುಕಟ್ಟೆ ಉತ್ತಮವಾಗಿದ್ದು, ಉತ್ಪಾದನೆಯು ಅಧಿಕವಾಗಿದೆ. ಪ್ರತಿ ಕೆಜಿ ಬೆಳ್ಳುಳ್ಳಿಯ ಸಗಟು ದರ 100 ರಿಂದ 250 ರೂ. ಆಗಿದೆ ಎಂದು ತಿಳಿಸಿದರು.

ಸಾಮಾನ್ಯವಾಗಿ, ಬೆಳ್ಳುಳ್ಳಿ ರೋಗನಿರೋಧಕ ಶಕ್ತಿಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಇದು ನೈಸರ್ಗಿಕ ಪ್ರತಿಜೀವಕವಾಗಿದೆ ಮತ್ತು ಔಷಧೀಯ ಗುಣಗಳನ್ನು ಹೊಂದಿದೆ.

ಪ್ರಾತಿನಿಧಿಕ ಚಿತ್ರ
ಈರುಳ್ಳಿ ನಂತರ ಇದೀಗ ಗ್ರಾಹಕರಲ್ಲಿ ಕಣ್ಣೀರು ತರಿಸುತ್ತಿದೆ ಬೆಳ್ಳುಳ್ಳಿ

ಖ್ಯಾತ ಆಹಾರ ವಿಮರ್ಶಕ ಅಸ್ಲಾಮ್ ಗಫೂರ್ ಮಾತನಾಡಿ, ಸರ್ಕಾರವು ನಿಷೇಧಿಸಿರುವ ಯಾವುದಾದರೂ ಆಹಾರ ಪದಾರ್ಥಗಳು ಅಥವಾ ಮದ್ಯವಾಗಿದ್ದರೂ, ಅದನ್ನು ಯಾವುದೇ ರೆಸ್ಟೋರೆಂಟ್ ಅಥವಾ ಹೋಟೆಲ್‌ನಲ್ಲಿ ಮಾರಾಟ ಮಾಡಲಾಗುವುದಿಲ್ಲ ಅಥವಾ ಬಳಸಲಾಗುವುದಿಲ್ಲ. ಆದರೆ, ಅಸಂಘಟಿತ ವಲಯವಾಗಿರುವ ಬೀದಿ ವ್ಯಾಪಾರಿಗಳ ಬಗ್ಗೆ ಹೇಳಲಾಗುವುದಿಲ್ಲ. ಇದು ನೈರ್ಮಲ್ಯ ಸಮಸ್ಯೆಗಳನ್ನು ಸಹ ಹೊಂದಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕಿದೆ ಎಂದರು.

ಕ್ರೈಸ್ಟ್ ಯೂನಿವರ್ಸಿಟಿಯ ಹೋಟೆಲ್ ಮ್ಯಾನೇಜ್‌ಮೆಂಟ್ ವಿಭಾಗದ ಮುಖ್ಯಸ್ಥ ಡಾ ಕೆರ್ವಿನ್ ಸವಿಯೋ ನಿಗ್ಲಿ ಮಾತನಾಡಿ, ಸ್ಥಳೀಯ ಭಾರತೀಯ ಬೆಳ್ಳುಳ್ಳಿ ಚಿಕ್ಕದಾಗಿದೆ, ಜಿಗುಟು ಮತ್ತು ಸಿಪ್ಪೆ ತೆಗೆಯಲು ಕಷ್ಟ. ಆದರೆ ಚೈನೀಸ್ ಬೆಳ್ಳುಳ್ಳಿ ಸಿಪ್ಪೆ ಸುಲಿಯುವುದು ಸುಲಭ. ದಕ್ಷಿಣ ಭಾರತದಲ್ಲಿ, ಮಲೈ ಪೂಂಡು ಅಥವಾ ಬೆಟ್ಟದ ಬೆಳ್ಳುಳ್ಳಿ ಎಂದು ಕರೆಯಲ್ಪಡುವ ಮತ್ತೊಂದು ವಿಧವಿದೆ. ಇದು ಗಾತ್ರದಲ್ಲಿ ಚಿಕ್ಕದಾಗಿದೆ ಮತ್ತು ತುಂಬಾ ಕಟುವಾದ ವಾಸನೆಯನ್ನು ಹೊಂದಿರುತ್ತದೆ. ಇದು ಕಾಲೋಚಿತವಾಗಿದೆ ಮತ್ತು ಚೈನೀಸ್ ಬೆಳ್ಳುಳ್ಳಿಯನ್ನು ಇದರೊಂದಿಗೆ ಬೆರೆಸಿದರೆ ಅದನ್ನು ಸುಲಭವಾಗಿ ಗುರುತಿಸಬಹುದು. ಹೆಚ್ಚುತ್ತಿರುವ ಒತ್ತಡದಿಂದಾಗಿ ಚೈನೀಸ್ ಬೆಳ್ಳುಳ್ಳಿ ಮತ್ತೆ ಬರಬಹುದು.

ಫುಡ್ ಸೇಫ್ಟಿ ಸ್ಟ್ಯಾಂಡರ್ಡ್ ಅಥಾರಿಟಿ ಆಫ್ ಇಂಡಿಯಾದ ಅಧಿಕಾರಿಯೊಬ್ಬರು, ಈ ವಿಷಯವನ್ನು ಸಚಿವಾಲಯವು ಪರಿಶೀಲಿಸುತ್ತಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com