Weather Report: ಬೆಂಗಳೂರಿನಲ್ಲಿ ದಾಖಲೆ ತಾಪಮಾನ, 'ಉದ್ಯಾನ ನಗರಿ' ಇತಿಹಾಸದಲ್ಲೇ 2ನೇ ಗರಿಷ್ಠ Temperature

ಉದ್ಯಾನ ನಗರಿ ಬೆಂಗಳೂರಿನಲ್ಲಿ ಬೇಸಿಗೆ ಧಗೆ ಮುಂದುವರೆದಿದ್ದು, ನಗರದಲ್ಲಿನ ತಾಪಮಾನ ಏರಿಕೆ ಮತ್ತೊಂದು ದಾಖಲೆಯನ್ನೇ ನಿರ್ಮಿಸಿದೆ.
Bengaluru Temperature
ಬೆಂಗಳೂರಿನಲ್ಲಿ ದಾಖಲೆ ಬರೆದ ತಾಪಮಾನ
Updated on

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಬೇಸಿಗೆ ಧಗೆ ಮುಂದುವರೆದಿದ್ದು, ನಗರದಲ್ಲಿನ ತಾಪಮಾನ ಏರಿಕೆ ಮತ್ತೊಂದು ದಾಖಲೆಯನ್ನೇ ನಿರ್ಮಿಸಿದೆ.

ಹೌದು.. ರಾಜಧಾನಿ ಬೆಂಗಳೂರಿನಲ್ಲಿ ನಿರಂತರವಾಗಿ ಬಿಸಿಲ ಬೇಗೆ ಹೆಚ್ಚುತ್ತಲೇ ಇದ್ದು, ಜನರನ್ನು ಹೈರಾಣಾಗಿಸಿದೆ. ಭಾನುವಾರ ಸಿಲಿಕಾನ್‌ ಸಿಟಿಯಲ್ಲಿ ದಾಖಲೆಯ 38.5 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದ್ದು, ಇದು ಬೆಂಗಳೂರು ಇತಿಹಾಸದಲ್ಲೇ 2ನೇ ಗರಿಷ್ಠ ತಾಪಮಾನ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Bengaluru Temperature
Hottest day for Bengaluru: ನಿನ್ನೆಯ ದಾಖಲೆ ಮುರಿದ ಬೆಂಗಳೂರು, ಇಂದಿನ ತಾಪಮಾನ ಎಷ್ಟು ಗೊತ್ತಾ?

ರಾಜಧಾನಿ ಬೆಂಗಳೂರಿನಲ್ಲಿ ಕಳೆದ 50 ವರ್ಷಗಳಲ್ಲಿ ಏಪ್ರಿಲ್‌ ತಿಂಗಳಲ್ಲಿ ದಾಖಲಾದ ಎರಡನೇ ಅತಿ ಹೆಚ್ಚು ಹಾಗೂ ಒಟ್ಟಾರೆ ಮೂರನೇ ಅತಿ ಹೆಚ್ಚು ತಾಪಮಾನವಾಗಿದೆ. ಈ ಹಿಂದೆ 2016 ಏಪ್ರಿಲ್‌ 25 ರಂದು ನಗರದಲ್ಲಿ 39.2 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು. ಇದಕ್ಕೂ ಮೊದಲು 1931ರ ಮೇ 22 ರಂದು 38.9 ಡಿಗ್ರಿ ಹಾಗೂ 1931 ರ ಏಪ್ರಿಲ್‌ 30ರಂದು 38.3 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು.

40 ಡಿಗ್ರಿಗೆ ಏರಿಕೆ ಸಾಧ್ಯತೆ

ಹವಮಾನ ಇಲಾಖೆಯ ಮೂಲಗಳ ಪ್ರಕಾರ ಬೆಂಗಳೂರಿನ ಹಾಲಿ ಪರಿಸ್ಥಿತಿ ಅವಲೋಕಿಸಿದರೆ, ಬೆಂಗಳೂರಿನಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ. ಸದ್ಯಕ್ಕಂತೂ ಬೆಂಗಳೂರಿನಲ್ಲಿ ಮಳೆ ಅಥವಾ ತಂಪುಗಾಳಿಯ ಯಾವುದೇ ಸುಳಿವಿಲ್ಲದೇ ಇರುವುದು ಬೆಂಗಳೂರಿಗರನ್ನು ಹೈರಾಣಾಗಿಸಿದೆ. ಹವಾಮಾನ ಇಲಾಖೆ ಕೂಡ ಸದ್ಯಕ್ಕಂತೂ ಬೆಂಗಳೂರಿನಲ್ಲಿ ಮಳೆ ಸಾಧ್ಯತೆ ಇಲ್ಲ ಎಂದು ಹೇಳಿರುವುದು ನಗರ ನಿವಾಸಿಗಳು ಮತ್ತಷ್ಟು ಪರಿತಪಿಸುವಂತೆ ಮಾಡಿದೆ.

ಇಂದೂ ಕೂಡ ದಾಖಲೆಯ ತಾಪಮಾನ

ನಿನ್ನೆಯಷ್ಟೇ ಅಲ್ಲ.. ಇಂದೂ ಕೂಡ ಬೆಂಗಳೂರಿನಲ್ಲಿ 38.5 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದ್ದು, ಈ ಬಗ್ಗೆ ಹವಮಾನ ಇಲಾಖೆ ತನ್ನ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದೆ. ಬೆಂಗಳೂರು ನಗರದಲ್ಲಿ ಇಂದು 38.5 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದ್ದು, ಎಚ್ ಎಎಲ್ ಭಾಗದಲ್ಲಿ 37.6 ಡಿಗ್ರಿ ತಾಪಮಾನ ದಾಖಲಾಗಿದೆ. ಅಂತೆಯೇ ಕೆಂಪೇಗೌಡ ವಿಮಾನ ನಿಲ್ದಾಣದ ಭಾಗದಲ್ಲಿ ಇಂದು 38.2 ಡಿಗ್ರಿ ತಾಪಮಾನ ದಾಖಲಾಗಿದ್ದು, ಜಿಕೆವಿಕೆ ಭಾಗದಲ್ಲಿ 37 ಡಿಗ್ರಿ ತಾಪಮಾನ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com