ಬೆಂಗಳೂರಿನ ಶಾಲೆಗಳಲ್ಲಿ ಪುಸ್ತಕ ಓದುವ ಒಂದು ಪೀರಿಯಡ್ ಮೀಸಲಿಡುವಂತೆ ಶಿಕ್ಷಣ ಇಲಾಖೆ ಸೂಚನೆ

ಈ ಹಿಂದೆ, ಶಾಲೆಯ ಮೂಲಸೌಕರ್ಯವನ್ನು ಅವಲಂಬಿಸಿ ಗ್ರಂಥಾಲಯ ಪೀರಿಯಡ್ಸ್ ಅನ್ನು ವೇಳಾಪಟ್ಟಿಯಲ್ಲಿ ಸೇರಿಸಲಾಗಿತ್ತು. ಆದರೆ ಈಗ ಇಲಾಖೆಯು ರಾಜ್ಯದ ಎಲ್ಲಾ ಬೋರ್ಡ್ ಶಾಲೆಗಳಿಗೆ ಇದನ್ನು ಕಡ್ಡಾಯಗೊಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಪಠ್ಯಕ್ರಮದ ಹೊರತಾಗಿ ಪುಸ್ತಕಗಳನ್ನು ಓದುವ ಬಲವಾದ ಅಭ್ಯಾಸ ಬೆಳೆಸುವ ಪ್ರಯತ್ನದ ಭಾಗವಾಗಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ(ಡಿಎಸ್ಇಎಲ್) ರಾಜ್ಯದ ಎಲ್ಲಾ ಶಾಲೆಗಳಲ್ಲಿ ವಾರಕ್ಕೆ ಒಂದು ಗ್ರಂಥಾಲಯ ಪೀರಿಯಡ್ ನಿಗದಿ ಮಾಡುವಂತೆ ನಿರ್ದೇಶಿಸಿದೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ತೆರಳಿ, ಶಾಲಾ ಗ್ರಂಥಾಲಯದಲ್ಲಿ ಓದುವ ಹವ್ಯಾಸ ಬೆಳೆಸಿಕೊಳ್ಳಬಹುದು ಎಂದು ಹೇಳಿದೆ.

ಇದು ರಾಜ್ಯದ 1 ರಿಂದ 10 ನೇ ತರಗತಿವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆ. ಓದುವ ಹವ್ಯಾಸ ಮತ್ತು ಜ್ಞಾನಾಭಿವೃದ್ಧಿ’ ಕಾರ್ಯಕ್ರಮದಡಿಯಲ್ಲಿ ವಿದ್ಯಾರ್ಥಿಗಳು ಕಾಲ್ಪನಿಕ, ಕಾಲ್ಪನಿಕವಲ್ಲದ, ಜಾನಪದ, ಕವನ ಮತ್ತು ಕಾಮಿಕ್ಸ್‌ನಂತಹ ವಿವಿಧ ಪ್ರಕಾರದ ಪುಸ್ತಕಗಳನ್ನು ಓದಬಹುದು.

ಈ ಹಿಂದೆ, ಶಾಲೆಯ ಮೂಲಸೌಕರ್ಯವನ್ನು ಅವಲಂಬಿಸಿ ಗ್ರಂಥಾಲಯ ಪೀರಿಯಡ್ಸ್ ಅನ್ನು ವೇಳಾಪಟ್ಟಿಯಲ್ಲಿ ಸೇರಿಸಲಾಗಿತ್ತು. ಆದರೆ ಈಗ ಇಲಾಖೆಯು ರಾಜ್ಯದ ಎಲ್ಲಾ ಬೋರ್ಡ್ ಶಾಲೆಗಳಿಗೆ ಇದನ್ನು ಕಡ್ಡಾಯಗೊಳಿಸಿದೆ.

ಸಾಂದರ್ಭಿಕ ಚಿತ್ರ
ಶಿವಮೊಗ್ಗ: ಮುಚ್ಚುವ ಹಂತದಲ್ಲಿದ್ದ ಸರ್ಕಾರಿ ಶಾಲೆ ಉಳಿಸಿದ ಗ್ರಾಮಸ್ಥರು!

“ಓದುವಿಕೆಯು ಮಕ್ಕಳ ಶಬ್ದಕೋಶ, ನಿರರ್ಗಳತೆ, ಗ್ರಹಿಕೆ, ಏಕಾಗ್ರತೆ, ಭಾಷೆ ಮತ್ತು ಸೃಜನಶೀಲ ಬರವಣಿಗೆಯನ್ನು ಸುಧಾರಿಸುತ್ತದೆ. ಇದು ವಿಮರ್ಶಾತ್ಮಕ ಚಿಂತನೆ, ತಾರ್ಕಿಕತೆ, ವಿಶ್ಲೇಷಣಾತ್ಮಕ ಸಾಮರ್ಥ್ಯ, ಸಾರಾಂಶ, ಕಲ್ಪನೆ, ಸೃಜನಶೀಲತೆ ಮತ್ತು ಪರಾನುಭೂತಿಯಂತಹ ಬೌದ್ಧಿಕ ಕೌಶಲ್ಯಗಳನ್ನು ಸಹ ಅಭಿವೃದ್ಧಿಪಡಿಸುತ್ತದೆ ಎಂದು ಶಿಕ್ಷಣ ಇಲಾಖೆ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಶಾಲೆಗಳು ಸಮಗ್ರ ಶಿಕ್ಷಣ ಕರ್ನಾಟಕ(ಎಸ್‌ಎಸ್‌ಕೆ) ವಾರ್ಷಿಕವಾಗಿ ನೀಡುವ ಗ್ರಂಥಾಲಯ ಅನುದಾನ ಮತ್ತು ವಿದ್ಯಾರ್ಥಿಗಳಿಂದ ಸಂಗ್ರಹಿಸುವ ವಾಚನಾಲಯ(ಆರ್‌ಆರ್) ಫಂಡ್ ಅಡಿಯಲ್ಲಿ ಲಭ್ಯವಿರುವ ಅನುದಾನವನ್ನು ಬಳಸಬೇಕು. ಈ ಅನುದಾನವನ್ನು ಬಳಸಿಕೊಂಡು, ಗ್ರಂಥಾಲಯಗಳಿಗೆ ಶೈಕ್ಷಣಿಕ ವರ್ಷದಲ್ಲಿ ಮಕ್ಕಳಿಗೆ ಗುಣಮಟ್ಟದ ಓದುವ ಸಾಮಗ್ರಿಗಳನ್ನು ಖರೀದಿಸಬೇಕು. ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಗುಣಮಟ್ಟದ ಪುಸ್ತಕಗಳ ಪಟ್ಟಿಯನ್ನು DSEL ಶಿಫಾರಸು ಮಾಡಿದೆ. ಅಗತ್ಯವಿರುವ ಪುಸ್ತಕಗಳನ್ನು ಶಾಲೆಗಳು ಆಯ್ಕೆ ಮಾಡಿ ಖರೀದಿಸಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com