ಬೆಂಗಳೂರು: ತಾತನೊಂದಿಗೆ ಶಾಲಾ ಬಸ್‌ಗಾಗಿ ಕಾಯುತ್ತಿದ್ದ ಏಳು ವರ್ಷದ ಬಾಲಕನನ್ನು ಆತನ ತಾಯಿ ಮತ್ತು ಆಕೆಯ ಪುರುಷ ಸ್ನೇಹಿತ ಸೇರಿ ಶುಕ್ರವಾರ ಬೆಳಗ್ಗೆ ಕೆಆರ್ ಪುರಂನಲ್ಲಿ ಕಿಡ್ನಾಪ್ ಮಾಡಿದ್ದಾರೆ. ಈ ಸಂಬಂಧ ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಡಿಗೆಹಳ್ಳಿಯ ಕಾಸಾ ಗ್ರ್ಯಾಂಡ್ ಅಪಾರ್ಟ್‌ಮೆಂಟ್ ಬಳಿ ಅಪಹರಣ ನಡೆದಿದ್ದು ಮಗುವನ್ನು ಕರೆದೊಯ್ಯುತ್ತಿರುವ ದೃಶ್ಯ ಸಿಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಗುವಿನ ಅಜ್ಜ ಸುಂದರ್ ರಾಜ್ ಎಂಬುವವರು ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ಧಾರೆ. ಮಗುವಿನ ತಾತ ಶಾಲೆಗೆ ಕಳುಹಿಸಲು ಬಂದಾಗ ಆರು ವರ್ಷದ ಬಾಲಕನನ್ನು ಅಪಹರಣ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದದಾರೆ.
ಬಾಲಕನ ತಂದೆ ಸಿದ್ಧಾರ್ಥ ಅವರು ಚೆನ್ನೈನ ನ್ಯಾಯಾಲಯಕ್ಕೆ ಗುರುವಾರ ತೆರಳಿದ್ದರು. ಹೀಗಾಗಿ ಸಿದ್ಧಾರ್ಥ್ ಅವರ ತಂದೆ ಸುಂದರ್ ರಾಜ್ ಮೊಮ್ಮಗನನ್ನು ಎಂದಿನಂತೆ ಶಾಲೆಗೆ ಬಿಡಲು ಅಪಾರ್ಟ್‌ಮೆಂಟ್ ಮುಂಭಾಗದಲ್ಲಿ ಬಸ್‌ಗಾಗಿ ಕಾಯುತ್ತಿದ್ದರು. ಮಗುವಿನ ತಾಯಿ ಅನುಪಮಾ ಬೆಳಿಗ್ಗೆ 7 ಗಂಟೆ ವೇಳೆಗೆ ತನ್ನ ಸ್ನೇಹಿತ ನೀಲಕಂಠ ಎಂಬುವವರ ಜೊತೆಗೆ ಕಾರಿನಲ್ಲಿ ಬಂದು ಮಗುವನ್ನು ಅಪಹರಣ ಮಾಡಿಕೊಂಡು ಹೋಗಿದ್ದಾರೆ ಎಂದು ದೂರು ನೀಡಲಾಗಿದೆ. ಬಾಲಕ ಮತ್ತು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಕೌಟುಂಬಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಮಹಿಳೆ ತನ್ನ ಪತಿ ವಿರುದ್ಧ ಚೆನ್ನೈ ಮತ್ತು ಬೆಂಗಳೂರಿನಲ್ಲಿ ದೂರು ದಾಖಲಿಸಿದ್ದಳು ಎನ್ನಲಾಗಿದೆ.
Advertisement