ರಾತ್ರಿ 10 ಗಂಟೆವರೆಗೂ ಪಾರ್ಕ್ ತೆರೆಯೋದು ಬೇಡ: ಬೆಂಗಳೂರು ಬಿಜೆಪಿ ಶಾಸಕರಿಂದ BBMP ಅಯುಕ್ತರಿಗೆ ಮನವಿ

ಕಾರ್ಮಿಕರು ಮೂರು ಪಾಳಿಯಲ್ಲಿ ಕೆಲಸ ಮಾಡಬೇಕು. ಉದ್ಯಾನವನಗಳು ದಿನವಿಡೀ ತೆರೆದಿರಲು ಅವಕಾಶ ನೀಡಿದರೆ ಸ್ವಚ್ಛತೆ ಮತ್ತು ನಿರ್ವಹಣೆ ಹೆಚ್ಚುವರಿ ಹೊರೆಯಾಗಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಗೆ ಬರವ 1,000 ಬೃಹತ್ ಉದ್ಯಾನವನಗಳನ್ನು ಬೆಳಿಗ್ಗೆ 5 ರಿಂದ ರಾತ್ರಿ 10 ರವರೆಗೆ ತೆರೆದಿರಬೇಕೆಂಬ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಸ್ತಾವನೆಗೆ ನಗರದ ಬಿಜೆಪಿ ಶಾಸಕರು ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೆಳಿಗ್ಗೆ ಮತ್ತು ಸಂಜೆ ಮಾತ್ರ ಉದ್ಯಾನವನಗಳನ್ನು ತೆರೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಉದ್ಯಾನವನಗಳಿಗೆ ಬೆಳಿಗ್ಗೆ 5 ರಿಂದ ರಾತ್ರಿ 10 ರವರೆಗೆ ಗಡುವು ವಿಧಿಸಿರುವುದನ್ನು ವಿರೋಧಿಸಿ ಇತ್ತೀಚೆಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಜಯನಗರ ಶಾಸಕ ಸಿ.ಕೆ ರಾಮಮೂರ್ತಿ ನೇತೃತ್ವದ ನಿಯೋಗ ಮನವಿ ಸಲ್ಲಿಸಿದೆ. ಅನೇಕ ಉದ್ಯಾನವನಗಳಲ್ಲಿ ಸಿಬ್ಬಂದಿ ಮತ್ತು ಸಿಸಿಟಿವಿಗಳ ಕೊರತೆಯಿದ್ದು ಭದ್ರತಾ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಿಳಿಸಿದ್ದಾರೆ.

ಪಾರ್ಕ್ ಗಳನ್ನು ಹೆಚ್ಚಿನ ಕಾಲ ತೆರೆದಿಡುವುದರಿಂದ ಸಮಾಜ ವಿರೋಧಿ ಶಕ್ತಿಗಳಿಗೆ ಅವಕಾಶ ನೀಡಿದಂತಾಗುತ್ತದೆ. "ನಾವು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದೇವೆ ಮತ್ತು ಹಳೆಯ ನಿಯಮಗಳಿಗೆ ಬದ್ಧರಾಗಿರಬೇಕೆಂದು ಪಾಲಿಕೆಯನ್ನು ಕೇಳಿದ್ದೇವೆ. ಬೆಳಿಗ್ಗೆ 5 ರಿಂದ 10 ರವರೆಗೆ ಮತ್ತು ಸಂಜೆ 4 ರಿಂದ ರಾತ್ರಿ 8 ರವರೆಗೆ ಮಾತ್ರ ಉದ್ಯಾನವನಗಳನ್ನು ತೆರೆಯಿರಿ ಮತ್ತು ಮಧ್ಯಾಹ್ನದ ಸಮಯವನ್ನು ನಿರ್ವಹಣೆಗೆ ಬಳಸಿಕೊಳ್ಳಿ" ಎಂದು ರಾಮಮೂರ್ತಿ ಹೇಳಿದರು.

ಸಾಂದರ್ಭಿಕ ಚಿತ್ರ
BBMP ವಲಯದ ಎಲ್ಲಾ ಪಾರ್ಕ್ ಗಳು ಇನ್ಮುಂದೆ ದಿನಪೂರ್ತಿ ಸಾರ್ವಜನಿಕರಿಗೆ ಮುಕ್ತ: ಡಿಸಿಎಂ ಆದೇಶ

ಪಾರ್ಕ್ ನಿರ್ವಹಣೆಯಲ್ಲಿ ತೊಡಗಿರುವ ಗುತ್ತಿಗೆದಾರರಿಗೆ ಇದು ಸುಮಾರು 24 ಗಂಟೆಗಳ ಕೆಲಸವಾಗಿರುವುದರಿಂದ ಕಠಿಣವಾಗಬಹುದು ಮತ್ತು ಪ್ರಸ್ತುತ ಟೆಂಡರ್ ಷರತ್ತುಗಳು ಮತ್ತು ಒಪ್ಪಂದದಲ್ಲಿ ಉಲ್ಲೇಖಿಸಲಾದ ಮೊತ್ತವು ನಿರ್ವಹಣಾ ಕಾರ್ಯವನ್ನು ತೆಗೆದುಕೊಳ್ಳದಂತೆ ತಡೆಯಬಹುದು. ಇದರಿಂದ ಅವರಿಗೆ ನಷ್ಟವಾಗುತ್ತದೆ. ಅದೇ ಸಮಯದಲ್ಲಿ, ಉದ್ಯಾನವನಗಳ ನಿಯಮಿತ ನಿರ್ವಹಣೆ ಮತ್ತು ಭದ್ರತೆಗೂ ಕೂಜ ಸಮಸ್ಯೆಯಾಗುತ್ತದೆ ಎಂದು ಶಾಸಕ ಗೋಪಾಲಯ್ಯ ಹೇಳಿದ್ದಾರೆ.

ಕಾರ್ಮಿಕರು ಮೂರು ಪಾಳಿಯಲ್ಲಿ ಕೆಲಸ ಮಾಡಬೇಕು. ಉದ್ಯಾನವನಗಳು ದಿನವಿಡೀ ತೆರೆದಿರಲು ಅವಕಾಶ ನೀಡಿದರೆ ಸ್ವಚ್ಛತೆ ಮತ್ತು ನಿರ್ವಹಣೆ ಹೆಚ್ಚುವರಿ ಹೊರೆಯಾಗಲಿದೆ. ಜತೆಗೆ ಅಕ್ರಮ ಚಟುವಟಿಕೆಗಳು ನಡೆಯುತ್ತವೆ. ನನ್ನ ವಿಧಾನಸಭೆಯಲ್ಲಿ 53 ಉದ್ಯಾನಗಳಿವೆ. ಡಾ.ಶಿವಕುಮಾರಸ್ವಾಮೀಜಿ ಪಾರ್ಕ್, ಕೆಂಪೇಗೌಡ ಪಾರ್ಕ್, ನವನಂದಿನಿ, ಸ್ವಾಮಿ ವಿವೇಕಾನಂದ ಪಾರ್ಕ್, ಡಾ.ಬಾಲಗಂಗಾಧರನಾಥ ಸ್ವಾಮೀಜಿ ಪಾರ್ಕ್ ನಿರ್ವಹಣೆಗೆ ಒಂದು ರೂಪಾಯಿಯೂ ಸಿಗುತ್ತಿಲ್ಲ.

ಸರ್ಕಾರ ನೀಡುವ 10 ಕೋಟಿ ರೂ.ಗಳು ಗೊಬ್ಬರ ಮತ್ತು ನೀರಿಗಾಗಿ ಮಾತ್ರವೇ ಹೊರತು ನಿಯಮಿತ ನಿರ್ವಹಣೆಗೆ ಒಳಪಡುವುದಿಲ್ಲ. ಉದ್ಯಾನವನದ ಸಮಯವನ್ನು ಬದಲಾಯಿಸುವ ಬದಲು, ಹಸಿರು ಸ್ಥಳವನ್ನು ಕಾಪಾಡಿಕೊಳ್ಳಲು ಸರ್ಕಾರ ಹೆಚ್ಚಿನ ಹಣವನ್ನು ನೀಡಬೇಕು ಎಂದು ಗೋಪಾಲಯ್ಯ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com