ಬೆಂಗಳೂರು: ಹಿಂದಿನ ದಾಖಲೆಗಳನ್ನೆಲ್ಲಾ ಮುರಿದಿರುವ ನಮ್ಮ ಮೆಟ್ರೋ ಆಗಸ್ಟ್ 6 ರಂದು ಹೊಸ ರೆಕಾರ್ಡ್ ಮಾಡಿದೆ. ನಮ್ಮ ಮೆಟ್ರೋ ಪ್ರಯಾಣಕ್ಕೆ ಬೇಡಿಕೆ ಸಾಕಷ್ಟು ಹೆಚ್ಚಳವಾಗುತ್ತಿದೆ, ಹೊಸ ದಾಖಲೆ ಸೃಷ್ಟಿಯಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಎಂಆರ್‌ಸಿಎಲ್, ಹಿಂದಿನ ರೈಡರ್‌ಶಿಪ್‌ಗಳ ದಾಖಲೆಯನ್ನು ಮೀರಿಸಿ ಆಗಸ್ಟ್ 6 ರಂದು (ಮಂಗಳವಾರ) ದಿನವಿಡೀ ನಮ್ಮ ಮೆಟ್ರೋ ರೈಲುಗಳಲ್ಲಿ 8.26 ಲಕ್ಷ ಮಂದಿ ಪ್ರಯಾಣ ಮಾಡಿದ್ದಾರೆ. ಇದು ಈ ಹಿಂದಿನ ರೈಡರ್‌ಶಿಪ್‌ಗಳಿಗೆ ಹೊಲಿಸಿದರೆ ಅತಿ ಹೆಚ್ಚು. ಈ ಮೂಲಕ ಹೊಸ ದಾಖಲೆಯಾಗಿದೆ ಎಂದು ತಿಳಿಸಿದೆ.
ಬೆಂಗಳೂರಿನಲ್ಲಿ ಹೆಚ್ಚು ಜನ ಸಾರ್ವಜನಿಕ ಸಾರಿಗೆ ಸೇವೆಯಾದ ನಮ್ಮ ಮೆಟ್ರೋ ಬಳಸುತ್ತಿರುವುದು ವಾಯುಮಾಲಿನ್ಯ ತಗ್ಗಿಸುವಲ್ಲಿ ಅತ್ಯಂತ ಸಹಕಾರಿಯಾಗಿದೆ. ವಾತಾವರಣದಲ್ಲಿ ಇಂಗಾಲ ತಗ್ಗಿಸಲು ಸಹಕಾರಿಯಾದ ಪ್ರಯಾಣಿಕರಿಗೆ ನಮ್ಮ ಮೆಟ್ರೋ ರೈಲು ನಿಗಮ ಧನ್ಯವಾದ ಹೇಳಿದೆ. ಆಗಸ್ಟ್ 15, 2022 ರಂದು 8.25 ಲಕ್ಷ ಪ್ರಯಾಣಿಕರು ಸಂಚರಿಸಿದ್ದರ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement