
ಗದಗ: ಟೊಮೆಟೋ ಬೆಳೆಗೆ ದಿಢೀರನೆ ಬೆಲೆ ಕುಸಿದ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಸಗಟು ಮಾರುಕಟ್ಟೆಗೆ ಹೋಗುವ ರಸ್ತೆಗಳಲ್ಲಿ ಟೊಮೆಟೋ ಸುರಿದ ರೈತರು, ವರ್ತಕರ ಮೇಲೆ ಆಕ್ರೋಶಗೊಂಡ ವ್ಯಕ್ತಪಡಿಸಿದರು.
ಲಾಭದ ನಿರೀಕ್ಷೆಯಲ್ಲಿ ಲಕ್ಷ್ಮೇಶ್ವರ, ಶಿರಹಟ್ಟಿ ಹಾಗೂ ಸಮೀಪದ ಇತರೆ ಗ್ರಾಮಗಳ ಅನೇಕ ರೈತರು ಬೆಳಗ್ಗೆಯೇ ಮಾರುಕಟ್ಟೆಗೆ ಟೊಮೆಟೊ ತಂದಿದ್ದರು. ಆದರೆ, ಒಂದು ಕ್ರೇಟ್ ಟೊಮೇಟೊ ಬೆಲೆ 20 ರಿಂದ 30 ರೂ.ವರೆಗೆ ಇದೆ ಎಂದು ವ್ಯಾಪಾರಿಗಳು ಹೇಳಿದಾಗ, ಆಘಾತಕ್ಕೊಳಗಾದರು.
ಇದರಿಂದ ಅಕ್ರೋಶಗೊಂಡ ರೈತರು, ಟೊಮೆಟೋವನ್ನು ರಸ್ತೆಗೆ ಸಿರಿದು ಆಕ್ರೋಶ ವ್ಯಕ್ತಪಡಿಸಿದರು. ಒಂದು ಕ್ರೇಟ್ 25 ಕೆಜಿ ಟೊಮೆಟೊವನ್ನು ಹೊಂದಿರುತ್ತದೆ.
ಕಳೆದ ವಾರ ಟೊಮೇಟೊ ಕೆಜಿಗೆ 30 ರೂ.ಗೆ ಮಾರಾಟವಾಗಿದ್ದು, ಮಳೆಯಿಂದಾಗಿ ಬೆಲೆ ಕುಸಿಯಲಾರಂಭಿಸಿಗೆ, ಮಳೆ ಮುಂದುವರಿದರೆ ಫಸಲು ಕೈ ತಪ್ಪುತ್ತದೆ ಎಂಬ ಆತಂಕದಿಂದ ಹಲವರು ಬುಧವಾರದಿಂದಲೇ ಸಗಟು ಮಾರುಕಟ್ಟೆಗೆ ಟೊಮೆಟೊ ತರಲು ಆರಂಭಿಸಿದ್ದಾರೆ.
ಗದಗ ಜಿಲ್ಲೆಯಾದ್ಯಂತ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಇದರಿಂದಾಗಿ ಗುಣಮಟ್ಟವಿಲ್ಲದ ಟೊಮೆಟೋಗಳನ್ನು ಖರೀದಿ ಮಾಡು ಸಗಟು ಮಾರುಕಟ್ಟೆಯಲ್ಲಿನ ವ್ಯಾಪಾರಿಗಳು ಹಿಂದೇಟು ಹಾಕುತ್ತಿದ್ದಾರೆಂದು ಮೂಲಗಳು ತಿಳಿಸಿವೆ.
ಗದಗ ಮತ್ತು ಇತರ ಪಟ್ಟಣಗಳ ಸಗಟು ಮಾರುಕಟ್ಟೆಗಳಲ್ಲಿಯೂ ಕೂಡ ಟೊಮೆಟೊ ಬೆಲೆ ಕೆಜಿಗೆ 3-5 ರೂ.ಗೆ ಕುಸಿದಿದೆ.
ಬೆಲೆ ಕುಸಿತ ಹಿನ್ನೆಲೆಯಲ್ಲಿ ಬಂದ ಹಣ ಸಾಗಾಣಿಕೆ ವೆಚ್ಚಕ್ಕೂ ಬಾರದೇ ಇರುವುದರಿಂದ ರೈತರು ಇದೀಗ ಗದಗ ಮಾರುಕಟ್ಟೆಗೆ ಟೊಮೆಟೋ ತರುವುದನ್ನೇ ನಿಲ್ಲಿಸಿದ್ದಾರೆಂದು ಮೂಲಗಳು ತಿಳಿಸಿವೆ.
Advertisement