ಮಾನವ-ಆನೆ ಸಂಘರ್ಷ ತಡೆಗೆ 9 ಕಾರ್ಯಪಡೆ ರಚನೆ: ಸಿಎಂ ಸಿದ್ದರಾಮಯ್ಯ

'ಉಪ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ರಚಿಸಲಾಗಿರುವ ಈ ಕಾರ್ಯಪಡೆ ಕಳೆದ ಒಂದು ವರ್ಷದಲ್ಲಿ 1,200 ಕ್ಕೂ ಹೆಚ್ಚು ಸಂಘರ್ಷದ ಘಟನೆಗಳನ್ನು ತಡೆದು ಆನೆಗಳನ್ನು ಸುರಕ್ಷಿತವಾಗಿ ಅವುಗಳ ಆವಾಸ ಸ್ಥಾನಗಳಿಗೆ ಕಳುಹಿಸಿದೆ'
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ರಾಜ್ಯದಲ್ಲಿ ಮಾನವ-ಆನೆ ಸಂಘರ್ಷವನ್ನು ತಡೆಯಲು ರಾಜ್ಯ ಸರ್ಕಾರ ಹೆಚ್ಚಿನ ಗಮನ ಹರಿಸಿದ್ದು, ರಾಜ್ಯದಲ್ಲಿ ೯ ಆನೆ ಕಾರ್ಯಪಡೆಗಳನ್ನು ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.

ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿಂದು ಅರಣ್ಯ ಜೀವಿ ಶಾಸ್ತ್ರ ಮತ್ತು ಪರಿಸರ ಇಲಾಖೆ ಆಯೋಜಿಸಿದ್ದ ಮಾನವ ಆನೆ ಸಂಘರ್ಷ ನಿರ್ವಹಣೆ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಉಪ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ರಚಿಸಲಾಗಿರುವ ಈ ಕಾರ್ಯಪಡೆ ಕಳೆದ ಒಂದು ವರ್ಷದಲ್ಲಿ 1,200 ಕ್ಕೂ ಹೆಚ್ಚು ಸಂಘರ್ಷದ ಘಟನೆಗಳನ್ನು ತಡೆದು ಆನೆಗಳನ್ನು ಸುರಕ್ಷಿತವಾಗಿ ಅವುಗಳ ಆವಾಸ ಸ್ಥಾನಗಳಿಗೆ ಕಳುಹಿಸಿದೆ ಎಂದರು.

ರಾಜ್ಯದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಮಾನವ-ಆನೆ ಸಂಘರ್ಷದ 2,500 ಕ್ಕೂ ಹೆಚ್ಚು ಘಟನೆಗಳು ನಡೆದಿವೆ. 350 ಕ್ಕೂ ಹೆಚ್ಚು ಮಾನವ ಸಾವುಗಳಾಗಿವೆ. ಗಣನೀಯ ಪ್ರಮಾಣದಲ್ಲಿ ಬೆಳೆ ನಷ್ಟವೂ ಆಗಿದೆ. ಇವೆಲ್ಲವನ್ನು ತಡೆಯಲು ಆನೆ ಕಾರ್ಯಪಡೆಯನ್ನು ರಚಿಸಿದ್ದೇವೆ. ಆನೆಗಳ ಜನಸಂಖ್ಯೆ ಮತ್ತು ಆವಾಸ ಸ್ಥಾನಗಳನ್ನು ರಕ್ಷಿಸುವತ್ತಲೂ ಗಮನ ನೀಡಿದ್ದೇವೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಮಾನವ-ಆನೆ ಸಂಘರ್ಷದ 2,500 ಕ್ಕೂ ಹೆಚ್ಚು ಘಟನೆಗಳು ನಡೆದಿವೆ. 350 ಕ್ಕೂ ಹೆಚ್ಚು ಮಾನವ ಸಾವುಗಳಾಗಿವೆ. ಗಣನೀಯ ಪ್ರಮಾಣದಲ್ಲಿ ಬೆಳೆ ನಷ್ಟವೂ ಆಗಿದೆ. ಇವೆಲ್ಲವನ್ನು ತಡೆಯಲು ಆನೆ ಕಾರ್ಯಪಡೆಯನ್ನು ರಚಿಸಿದ್ದೇವೆ. ಆನೆಗಳ ಜನಸಂಖ್ಯೆ ಮತ್ತು ಆವಾಸ ಸ್ಥಾನಗಳನ್ನು ರಕ್ಷಿಸುವತ್ತಲೂ ಗಮನ ನೀಡಿದ್ದೇವೆ ಎಂದು ಅವರು ಹೇಳಿದರು.

ಸರ್ಕಾರ ಮಾನವ-ಆನೆ ಸಂಘರ್ಷಗಳನ್ನು ತಡೆಯಲು ಹೆಚ್ಚಿನ ಹಣಕಾಸು ತಾಂತ್ರಿಕ ಆವಿಷ್ಕಾರಗಳು ಸಮುದಾಯದ ತೊಡಗಿಸಿಕೊಳ್ಳುವ ಪ್ರಯತ್ನಗಳು ನಡೆಸಿವೆ. ಸೌರ ಬೇಲಿಗಳನ್ನು ನಿರ್ಮಿಸಲು ಸಂಪನ್ಮೂಲಗಳು ಮತ್ತ ಸಬ್ಸಿಡಿಗಳನ್ನು ಒದಗಿಸಲು ರೈತರ ಸಬಲೀಕರಣಕ್ಕೂ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ಸಿಎಂ ಸಿದ್ದರಾಮಯ್ಯ
ಕೇಂದ್ರ ಸರ್ಕಾರ ಅರಣ್ಯ ಸಂರಕ್ಷಣಾ ಕಾಯ್ದೆ ಬದಲಾಯಿಸಬೇಕು: ಸಚಿವ ಈಶ್ವರ್ ಖಂಡ್ರೆ

ಕರ್ನಾಟಕ ಅರಣ್ಯ ಸಾಮರಸ್ಯ ಯೋಜನೆಯಡಿ ಉದ್ದೇಶಿತ ಅರಣ್ಯ ಪ್ರದೇಶಗಳಲ್ಲಿ ಶೂನ್ಯ ಮಾನವ ಪ್ರಾಣಿ ಸಂಘರ್ಷ ಮೌಲ್ಯಗಳನ್ನ ಸ್ಥಾಪಿಸುವ ಗುರಿ ಹೊಂದಿದೆ. ಈ ಸಮಗ್ರ ಯೋಜನೆಯು ನೀರಿನ ಭದ್ರತೆ, ಆವಾಸ ಸ್ಥಾನಗಳ ಸುಧಾರಣೆ ಮತ್ತು ಸಕ್ರಿಯ ಸಮುದಾಯ ಭಾಗವಹಿಸುವಿಕೆಯ ತಂತ್ರಗಳನ್ನು ಒಳಗೊಂಡಿದೆ ಎಂದರು.

ರಾಜ್ಯದಲ್ಲಿ ಸಾವಿರಾರು ವರ್ಷಗಳಿಂದ ಜನರು ಆನೆಗಳೊಂದಿಗೆ ಸಹಬಾಳ್ವೆ ನಡೆಸುತ್ತಿದ್ದಾರೆ. ಆದರೆ ಇತ್ತೀಚೆಗೆ ನಗರೀಕರಣ ಹೆದ್ದಾರಿ, ಗಣಿಗಾರಿಕೆ ಕೈಗಾರಿಕಾ ಬೆಳವಣಿಗೆಗಳು ಮಾನವನ ವ್ಯಾಪ್ತಿಯನ್ನು ವಿಸ್ತರಿಸಿವೆ. ಹೀಗಾಗಿ ತಲೆದೋರಿರುವ ಮಾನವ-ಆನೆ ಸಂಘರ್ಷಗಳನ್ನು ತಡೆಯಲು ರೈಲ್ವೆ ಹಳಿಗಳನ್ನು ಬಳಸಿ ಬೇಲಿಗಳನ್ನು ಹಾಕಲಾಗುತ್ತಿದೆ. ಈ ಸಮ್ಮೇಳನದ ಮೂಲಕ ಮಾನವರು ಆನೆಗಳ ನಡುವೆ ಸಾಮರಸ್ಯದ ಸಹ ಬಾಳ್ವೆಗೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ಆ ಕ್ರಮಗಳು ರೂಪಿತವಾಗಲಿ. ನವೀನ ವೈಜ್ಞಾನಿಕ ಪರಿಹಾರಗಳನ್ನು ಅನ್ವೇಷಿಸಲು ವೇದಿಕೆಯಾಗಲಿ ಎಂದು ಮುಖ್ಯಮಂತ್ರಿಗಳು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com