
ಬೆಂಗಳೂರು: ಅರಣ್ಯ ಸಂರಕ್ಷಣಾ ಕಾಯ್ದೆ 1980 ಅನ್ನು ಬದಲಾಯಿಸಲು ಕೇಂದ್ರ ಸರ್ಕಾರ ಮುಂದಾಗಬೇಕೆಂದು ಸಚಿವ ಈಶ್ವರ್ ಖಂಡ್ರೆಯವರು ಸೋಮವಾರ ಹೇಳಿದರು.
ವಿಧಾನಸಭೆಯಲ್ಲಿ ಮಾತನಾಡಿದ ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್ ಅವರು, ಭದ್ರಾ ಅಣೆಕಟ್ಟು ಭರ್ತಿಯಾಗಿರುವ ಕಾರಣ ಅರಣ್ಯ ಇಲಾಖೆ ನಿರಾಶ್ರಿತ ಕುಟುಂಬಗಳನ್ನು ಸ್ಥಳಾಂತರಿಸುತ್ತಿದೆ ಎಂದು ಹೇಳಿದರು.
ಇದಕ್ಕೆ ಉತ್ತರಿಸಿತ ಸಚಿವ ಈಶ್ವರ್ ಖಂಡ್ರೆ, ಒನ್ಸ್ ಎ ಫಾರೆಸ್ಟ್, ಆಲ್ವೇಸ್ ಎ ಫಾರೆಸ್ಟ್ ಎಂಬ ಸುಪ್ರೀಂ ಕೋರ್ಟ್ ಆದೇಶವಿದೆ. ಕಂದಾಯ ಇಲಾಖೆಯಿಂದ ಅರಣ್ಯ ಒತ್ತುವರಿ ಆದೇಶ ಬಂದಿಲ್ಲ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಜಲಸಂಪನ್ಮೂಲ, ಅರಣ್ಯ ಮತ್ತು ಕಂದಾಯ ಇಲಾಖೆಗಳ ಸಭೆ ಕರೆದು ಅರಣ್ಯವಾಸಿಗಳ ಹಿತಾಸಕ್ತಿ ಕಾಪಾಡುವ ಕುರಿತು ನಿರ್ಧಾರ ಕೈಗೊಳ್ಳುವುದಾಗಿಯೂ ತಿಳಿಸಿದರು. ಚರ್ಚೆ ವೇಳೆ ಪಕ್ಷಾತೀತವಾಗಿ ಶಾಸಕರು ಪಾಲ್ಗೊಂಡರು.
ಜೆಡಿಎಲ್‌ಪಿ ಮುಖಂಡ ಬಿ ಸುರೇಶ್‌ಬಾಬು ಮಾತನಾಡಿ, ಆಯಾ ಕ್ಷೇತ್ರಗಳಲ್ಲಿ ಜನರು ಮತ್ತು ಅರಣ್ಯವಾಸಿಗಳು ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆಂದು ಹೇಳಿದರು.
ಇದಕ್ಕೆ ಉತ್ತರಿಸಿದ ಸಚಿವರು, ಮೂರು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರನ್ನು ಸ್ಥಳಾಂತರಿಸದಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ರೈಲ್ವೆ ಬ್ಯಾರಿಕೇಡ್ ಯೋಜನೆ
ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿ, 120 ಕಿ.ಮೀ ಉದ್ದದ ರೈಲ್ವೆ ಹಳಿಗಳಿಗೆ ಬ್ಯಾರಿಕೇಡ್ ಹಾಕುವ ಕಾರ್ಯ ಪ್ರಗತಿಯಲ್ಲಿದೆ, ಒಳನುಸುಳುವ ಆನೆಗಳ ತಡೆಗೆ ಚಾಲನೆ ನೀಡಲಾಗಿದೆ. ಒಂದು ವರ್ಷದಿಂದ ಕಾಮಗಾರಿ ನಡೆಯುತ್ತಿದೆ. ಪ್ರತಿ ಕಿಲೋಮೀಟರ್‌ಗೆ ಸರ್ಕಾರ 1.5 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ ಎಂದು ಮಾಹಿತಿ ನೀಡಿದರು
Advertisement