ನಾಲ್ಕು ಗ್ರಾಮ ಪಂಚಾಯತ್ ಗಳು: BBMP ವ್ಯಾಪ್ತಿಗೆ ತರುವ ಸಾಧ್ಯತೆ

ಕಳೆದ ಗುರುವಾರ ನಡೆದ ಸಮಾರಂಭದಲ್ಲಿ ಸೋಮಶೇಖರ್ ಅವರು ಅಭಿವೃದ್ಧಿಗಾಗಿ ಕುಂಬಳಗೋಡು ಗ್ರಾಮ ಪಂಚಾಯತ್ ನ್ನು ಪಾಲಿಕೆ ವ್ಯಾಪ್ತಿಗೆ ತರಲು ಒಲವು ತೋರಿದ್ದಾರೆ ಎಂದು ಹೇಳಿದರು. ಈ ಹಿಂದೆ ಕೆ.ಗೊಲ್ಲಹಳ್ಳಿ, ಎಚ್.ಗೊಲ್ಲಹಳ್ಳಿ, ಸೂಳಿಕೆರೆ ಮತ್ತು ಕುಂಬಳಗೋಡು ಪ್ರದೇಶಗಳನ್ನು ಒಳಗೊಂಡ ಪ್ರತ್ಯೇಕ ಪಟ್ಟಣ ಪುರಸಭೆಯನ್ನು ಅವರು ಬಯಸಿದ್ದರು.
ನಾಲ್ಕು ಗ್ರಾಮ ಪಂಚಾಯತ್ ಗಳು: BBMP ವ್ಯಾಪ್ತಿಗೆ ತರುವ ಸಾಧ್ಯತೆ
Updated on

ಬೆಂಗಳೂರು: ಮೈಸೂರು ರಸ್ತೆಯ ಬಿಡದಿ ಮತ್ತು ಕೆಂಗೇರಿ ನಡುವೆ ಇರುವ ಕುಂಬಳಗೋಡು ಗ್ರಾಮ ಪಂಚಾಯಿತಿ, ಎಲೆಕ್ಟ್ರಾನಿಕ್ಸ್ ಸಿಟಿ ಬಳಿಯ ಶಾಂತಿಪುರ ಗ್ರಾಮ ಪಂಚಾಯಿತಿ, ಕೋನಪ್ಪನ ಅಗ್ರಹಾರ ಗ್ರಾಮ ಪಂಚಾಯಿತಿ ಮತ್ತು ಸರ್ಜಾಪುರ ಗ್ರಾಮ ಪಂಚಾಯಿತಿಗಳು ಬಿಬಿಎಂಪಿ ವ್ಯಾಪ್ತಿಗೆ ಬರುವ ಸಾಧ್ಯತೆ ಇದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

ಯಶವಂತಪುರ ಶಾಸಕ ಎಸ್‌ಟಿ ಸೋಮಶೇಖರ್‌ ಅವರು ಇತ್ತೀಚೆಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಕುಂಬಳಗೋಡು ಗ್ರಾಮ ಪಂಚಾಯತ್ ನ್ನು ಪಾಲಿಕೆ ವ್ಯಾಪ್ತಿಗೆ ತರುವಂತೆ ಮನವಿ ಮಾಡಿದ್ದಾರೆ ಎಂದು ಬಿಬಿಎಂಪಿ ಪುನರ್‌ರಚನಾ ಸಮಿತಿಯ ಮೂಲಗಳು ತಿಳಿಸಿವೆ. ಇದಲ್ಲದೇ ಕೋನಪ್ಪನ ಅಗ್ರಹಾರ, ಸರ್ಜಾಪುರ, ಶಾಂತಿಪುರ ಮತ್ತು ಮಾದಾವರ ಗ್ರಾಮ ಪಂಚಾಯತ್ ಗಳನ್ನು ಪಾಲಿಕೆ ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದೆ.

ಕಳೆದ ಗುರುವಾರ ನಡೆದ ಸಮಾರಂಭದಲ್ಲಿ ಸೋಮಶೇಖರ್ ಅವರು ಅಭಿವೃದ್ಧಿಗಾಗಿ ಕುಂಬಳಗೋಡು ಗ್ರಾಮ ಪಂಚಾಯತ್ ನ್ನು ಪಾಲಿಕೆ ವ್ಯಾಪ್ತಿಗೆ ತರಲು ಒಲವು ತೋರಿದ್ದಾರೆ ಎಂದು ಹೇಳಿದರು. ಈ ಹಿಂದೆ ಕೆ.ಗೊಲ್ಲಹಳ್ಳಿ, ಎಚ್.ಗೊಲ್ಲಹಳ್ಳಿ, ಸೂಳಿಕೆರೆ ಮತ್ತು ಕುಂಬಳಗೋಡು ಪ್ರದೇಶಗಳನ್ನು ಒಳಗೊಂಡ ಪ್ರತ್ಯೇಕ ಪಟ್ಟಣ ಪುರಸಭೆಯನ್ನು ಅವರು ಬಯಸಿದ್ದರು. ಆದರೆ ಈ ಪ್ರದೇಶಗಳು ಕ್ಷಿಪ್ರ ಬೆಳವಣಿಗೆಗೆ ಸಾಕ್ಷಿಯಾಗಿದ್ದು, ಈಗ ಅವುಗಳನ್ನು ಪಾಲಿಕೆಯೊಂದಿಗೆ ವಿಲೀನಗೊಳಿಸಬೇಕೆಂದು ಶಾಸಕರು ಬಯಸಿದ್ದಾರೆ ಎಂದು ಕುಂಬಳಗೋಡು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಜಿ.ಬಿ.ಬಸವರಾಜು ಹೇಳಿದ್ದಾರೆ.

ಅದೇ ರೀತಿ ಕೋನಪ್ಪನ ಅಗ್ರಹಾರ ಗ್ರಾ.ಪಂ.ನ ಅಧಿಕಾರಿಗಳು ತಮ್ಮ ಪ್ರದೇಶ ಮಿತಿಯಲ್ಲಿ ಜನಸಂಖ್ಯೆ 50,000 ಮೀರಿದ್ದು, ಕ್ಷಿಪ್ರ ಕೈಗಾರಿಕೀಕರಣ ನಡೆಯುತ್ತಿದೆ. ಈ ಗ್ರಾಮ ಪಂಚಾಯತ್ ಅಡಿಯಲ್ಲಿ ಬರುವ ಪ್ರದೇಶಗಳನ್ನು ಪಾಲಿಕೆಯೊಂದಿಗೆ ವಿಲೀನಗೊಳಿಸಿದರೆ, ತೆರಿಗೆಯ ಮೂಲಕ ಹೆಚ್ಚಿನ ಆದಾಯವನ್ನು ಗಳಿಸಬಹುದು. ಇದಲ್ಲದೆ, ಈ ಪ್ರದೇಶಗಳ ಜನರು ಒಳಚರಂಡಿ, ಕುಡಿಯುವ ನೀರು ಮತ್ತು ರಸ್ತೆಗಳಂತಹ ಸೌಕರ್ಯಗಳನ್ನು ಪಡೆಯುತ್ತಾರೆ ಎಂದು ಅವರು ಹೇಳಿದರು.

ಶಾಂತಿಪುರ ಗ್ರಾಮ ಪಂಚಾಯತ್ ನ ಅಧಿಕಾರಿಯೊಬ್ಬರು, 2011ರಲ್ಲಿ ಪಂಚಾಯಿತಿ 12 ಸಾವಿರ ಜನಸಂಖ್ಯೆ ಹೊಂದಿತ್ತು. ಈಗ ಅದು 40,000 ದಾಟಿರಬಹುದು. ಈ ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳು ಅಭಿವೃದ್ಧಿಯಾಗಿಲ್ಲ. ಪಾಲಿಕೆ ವ್ಯಾಪ್ತಿಗೆ ತಂದರೆ ಅಭಿವೃದ್ಧಿಯಾಗುತ್ತದೆ. ಟಾರ್ ರಸ್ತೆ, ಚರಂಡಿ, ಕುಡಿಯುವ ನೀರಿನ ಕೊರತೆಯಂತಹ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರು.

ಬೃಹತ್ ಬೆಂಗಳೂರು ಪ್ರಾಧಿಕಾರವು 10 ಮಹಾನಗರ ಪಾಲಿಕೆಗಳನ್ನು ಹೊಂದಲು ಉದ್ದೇಶಿಸಿರುವುದರಿಂದ ಈ ಪ್ರದೇಶಗಳು ಮಾತ್ರವಲ್ಲದೆ ನಗರದ ಹೊರವಲಯದಲ್ಲಿರುವ ಹಲವಾರು ಗ್ರಾಮ ಪಂಚಾಯಿತಿಗಳನ್ನು ಪಾಲಿಕೆ ವ್ಯಾಪ್ತಿಗೆ ತರಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಪಾಲಿಕೆಯು ಈಗ 857 ಚ.ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ(GBA) ಅಸ್ತಿತ್ವಕ್ಕೆ ಬಂದರೆ, ಅದು 1,400 ಚದರ ಕಿಮೀ ಪ್ರದೇಶವನ್ನು ಹೊಂದಿರುತ್ತದೆ. ಜಿಬಿಎ ಮಸೂದೆಯನ್ನು ಇತ್ತೀಚೆಗೆ ಸದನ ಸಮಿತಿಗೆ ಉಲ್ಲೇಖಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com