ಬೆಂಗಳೂರು: ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಯುವಕರ ಸ್ಕೂಟರ್ ಗಳನ್ನು ಮೇಲ್ಸೇತುವೆಯಿಂದ ಕೆಳಗೆ ಎಸೆದವರ ವಿರುದ್ಧವೂ ಮಾದನಾಯಕನಹಳ್ಳಿ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಆಗಸ್ಟ್ 15ರಂದು ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಯುವಕರು ವ್ಹೀಲಿಂಗ್ ಮಾಡುತ್ತಿದ್ದರು. ಇದರಿಂದ ಆಕ್ರೋಶಗೊಂಡ ಕೆಲವರು ಅಡಕಮಾರನಹಳ್ಳಿಯ ಮೇಲ್ಸೇತುವೆಯಿಂದ ವಾಹನಗಳನ್ನು ಕೆಳಗೆ ಎಸೆದಿದ್ದರು.
ಘಟನೆ ಬೆನ್ನಲ್ಲೇ ವಾಹನ ಸಂಖ್ಯೆಗಳನ್ನು ಹಾಗೂ ಆ ವಾಹನಗಳ ಮಾಲೀಕರನ್ನು ಪತ್ತೆಹಚ್ಚಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಯಿತು. ವಿಚಾರಣೆಗೆ ಹಾಜರಾದ ಮಾಲೀಕರೊಬ್ಬರಿಗೆ ತಮ್ಮ ಮಗನನ್ನು ಕರೆತರುವಂತೆ ಸೂಚಿಸಲಾಯಿತು. ಬಳಿಕ ಅವರ ವಿರುದ್ಧ ಐಎಂವಿ ಕಾಯ್ದೆ ಸೆಕ್ಷನ್ 184, 187 ಮತ್ತು 189 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಯುವಕರು ಬೈಕ್ ಸ್ಟಂಟ್ ಮಾಡುವ ವೇಳೆ ಸಣ್ಣ ಅಪಘಾತ ಸಂಭವಿಸಿದೆ. ಇದರಿಂದ ಆಕ್ರೋಶಗೊಂಡ ಕೆಲವರು ಎರಡೂ ಸ್ಕೂಟರ್ ಗಳನ್ನು ಫ್ಲೈಓವರ್ ನಿಂದ 20 ಕೆಳಗಿನ ಸರ್ವಿಸ್ ರಸ್ತೆಗೆ ಎಸೆದಿದ್ದಾರೆ. ಬಳಿಕ ಭಯಭೀತರಾದ ಯುವಕರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ವಾಹನಗಳನ್ನು ವಶಕ್ಕ ಪಡೆದಿದ್ದರು.
ಇದೀಗ ಮಾದನಾಯಕನಹಳ್ಳಿ ಪೊಲೀಸರು ವಾಹನಗಳನ್ನು ಮೇಲ್ಸೇತುವೆಯಿಂದ ಕೆಳಗೆ ಎಸೆದಿದ್ದಕ್ಕಾಗಿ ಬಿಎನ್‌ಎಸ್‌ನ ಅನೇಕ ಸೆಕ್ಷನ್‌ಗಳ ಅಡಿಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement