ಸರ್ಕಾರಿ ಕಾಲೇಜಿನ 3.7 ಎಕರೆ ಜಮೀನು ಕುರುಬರ ಸಂಘಕ್ಕೆ: ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ

ಕಲಬುರಗಿಯ ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ) ಸರ್ಕಾರಿ ಕಾಲೇಜಿಗೆ ಸೇರಿದ ಜಮೀನನ್ನು ಕರ್ನಾಟಕ ಪ್ರದೇಶ ಕುರುಬರ ಸಂಘದ ಕಲಬುರಗಿ ಶಾಖೆಗೆ ರಾಜ್ಯ ಸರ್ಕಾರ ಮಂಜೂರು ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಕಲಬುರಗಿ: ಕಲಬುರಗಿಯ ಸರ್ಕಾರಿ ಕಾಲೇಜಿಗೆ ಸೇರಿದ 3 ಎಕರೆ 7 ಗುಂಟೆ ಭೂಮಿಯನ್ನು ಕರ್ನಾಟಕ ಪ್ರದೇಶ ಕುರುಬರ ಸಂಘದ ಕಲಬುರಗಿ ಶಾಖೆಗೆ ಮಂಜೂರು ಮಾಡಿರುವ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧಗಳು ವ್ಯಕ್ತವಾಗುತ್ತಿವೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ, ವಿದ್ಯಾರ್ಥಿಗಳ ಭವಿಷ್ಯದ ಶೈಕ್ಷಣಿಕ ಹಿತದೃಷ್ಟಿಯಿಂದ ಕಲಬುರಗಿಯ ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ) ಸರ್ಕಾರಿ ಕಾಲೇಜಿಗೆ ಸೇರಿದ ಜಮೀನನ್ನು ಕರ್ನಾಟಕ ಪ್ರದೇಶ ಕುರುಬರ ಸಂಘದ ಕಲಬುರಗಿ ಶಾಖೆಗೆ ಮಂಜೂರು ಮಾಡುವಂತೆ ಪ್ರಸ್ತಾವೆ ಸಲ್ಲಿಕೆಯಾಗಿದ್ದು, ಈ ಪ್ರಸ್ತಾವನೆಯನ್ನು ಅಂಗೀಕರಿಸಲಾಗಿದೆ ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ ಹೇಳಿದ್ದಾರೆ. ಸರ್ಕಾರದ ಈ ನಿರ್ಧಾರಕ್ಕೆ ಶಿಕ್ಷಣ ತಜ್ಞರು ಹಾಗೂ ಶಿಕ್ಷಣ ಸಂಸ್ಥೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿವೆ.

ನಿವೃತ್ತ ಇತಿಹಾಸ ಪ್ರಾಧ್ಯಾಪಕ ಶಂಭುಲಿಂಗ ವಾಣಿ ಮಾತನಾಡಿ, ಕಳೆದ 4 ದಶಕಗಳಿಂದ ಸರಕಾರಿ ಕಾಲೇಜು 59 ಎಕರೆ ಜಮೀನು ಹೊಂದಿತ್ತು. ಆದರೆ, ಸುಮಾರು ಒಂದು ಶತಮಾನದಿಂದ ಸರ್ಕಾರಿ ಕಾಲೇಜಿನಲ್ಲಿ ಬೀರಪ್ಪನವರ ಸಣ್ಣ ದೇವಾಲಯವಿದೆ ಎಂದು ಹೇಳಿಕೊಂಡು ಕುರುಬರ ಸಂಘ ಸಮುದಾಯವು ಭೂಮಿಯ ಒಂದು ಭಾಗವನ್ನು ಅತಿಕ್ರಮಿಸಿದೆ. ಹಕ್ಕುಪತ್ರದ ಆಧಾರದ ಮೇಲೆ ಸಮೀಕ್ಷೆ ನಡೆಸಲು ಕಾಲೇಜು ಅಧಿಕಾರಿಗಳು ಪುರಾತತ್ವ ಇಲಾಖೆಯನ್ನು ಸಂಪರ್ಕಿಸಿದ್ದಾರೆ.

ಸಂಗ್ರಹ ಚಿತ್ರ
ರಾಜ್ಯಪಾಲರ ನೋಟಿಸ್ ಗೆ ಸಂಪುಟ ಸಭೆ ಆಕ್ಷೇಪ; ವಾಪಸ್ ಪಡೆಯುವಂತೆ ನಿರ್ಣಯ ಅಂಗೀಕಾರ

ಈ ದೇವಾಲಯವು ಸುಮಾರು 25 ವರ್ಷಗಳಷ್ಟು ಹಳೆಯದು ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ, ನಂತರ ಸಂಘವು ಸಮುದಾಯಕ್ಕೆ 3 ಎಕರೆ 7 ಗುಂಟಾ ಭೂಮಿಯನ್ನು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದೆ. ರಾಜಕಾರಣಿಯೊಬ್ಬರು ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದು, ರಾಜ್ಯವು ಕೆಲ ಭೂಮಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಾಗೂ ವಿಟಿಯು ಪ್ರಾದೇಶಿಕ ಕೇಂದ್ರಕ್ಕೆ ನೀಡಿದೆ. ಹೀಗಾಗಿ ಈ ಹಿಂದೆ 59 ಎಕರೆ ಜಮೀನು ಹೊಂದಿದ್ದ ಸರ್ಕಾರಿ ಕಾಲೇಜು (ಈಗ ಸ್ವಾಯತ್ತ ಕಾಲೇಜಾಗಿದೆ) ಭೂಮಿ ಇದೀಗ ಸುಮಾರು 30 ಎಕರೆ ಭೂಮಿಗೆ ತಲುಪಿದೆ. ಶಿಕ್ಷಣ ಸಂಸ್ಥೆಗೆ ಸೇರಿದ ಭೂಮಿಯನ್ನು ನಿರ್ದಿಷ್ಟ ಜಾತಿಯ ಸಂಘಟನೆಗೆ ಹಂಚುವುದು ಕೆಟ್ಟ ಬೆಳವಣಿಗೆ, ಇದರಿಂದ ಇತರ ಜಾತಿಗಳ ಜನರೂ ಕೂಡ ಸರ್ಕಾರಿ ಸಂಸ್ಥೆ ಭೂಮಿ ನೀಡುವಂತೆ ಒತ್ತಾಯಿಸುತ್ತಾರೆಂದು ಹೇಳಿದ್ದಾರೆ.

ಅಂಬೇಡ್ಕರ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಹಿರಿಯ ಶಿಕ್ಷಣ ತಜ್ಞ ಬಸವರಾಜ ಕುಮ್ನೂರ ಅವರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು.

ಸರ್ಕಾರಿ ಕಾಲೇಜಿಗೆ ಸ್ವಾಯತ್ತತೆ ದೊರೆತಿರುವುದರಿಂದ ವಿವಿಧ ವಿಭಾಗಗಳು ಮತ್ತು ಸಂಶೋಧನಾ ಚಟುವಟಿಕೆಗಳಿಗೆ ಭೂಮಿ ಬೇಕು. ಹೆಚ್ಚುವರಿ ಭೂಮಿಯನ್ನು ಸರ್ಕಾರ ವಿದ್ಯಾರ್ಥಿಗಳಿಗೆ ಆಟದ ಮೈದಾನ ನಿರ್ಮಿಸಲು ಬಳಸಬಹುದಿತ್ತು. ನಿರ್ದಿಷ್ಟ ಜಾತಿಗೆ ಜಮೀನು ಮಂಜೂರು ಮಾಡುವ ಸಚಿವ ಸಂಪುಟದ ನಿರ್ಧಾರವು ಕೆಟ್ಟ ಬೆಳವಣಿಗೆಯಾಗಿದೆ. ಇದು ಶೈಕ್ಷಣಿಕ ವಾತಾವರಣದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಲ್ಯಾಣ ಕರ್ನಾಟಕ ಹೋರಾಟಗಳ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಮಾತನಾಡಿ, ಸಚಿವ ಸಂಪುಟದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದರು.

ಇಂತಹ ನಿರ್ಧಾರದಿಂದ ಸಿದ್ದರಾಮಯ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಬರಲಿದೆ. ಕಾಲೇಜಿನ ಭೂಮಿ ಬದಲು ಬೇರೆಡೆ ಇರುವ ಜಾಗವನ್ನು ಕುರುಬರ ಸಂಘಕ್ಕೆ ಸರಕಾರ ನೀಡಬಹುದಿತ್ತು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com