
ಬೆಂಗಳೂರು: ವಿಧಾನಸೌಧದಲ್ಲಿ ಅರ್ಜಿ ಪರಿಶೀಲನೆ ಮಾಡುವ ವೇಳೆ ಸಿಎಂ ಸಿದ್ದರಾಮಯ್ಯ ಅವರ ಕೈಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.
ವಿಧಾನಸೌಧದ ಕೊಠಡಿಯಲ್ಲಿ ಸಿಎಂ ಸಿದ್ದರಾಮಯ್ಯ ಕೈಗೆ ಗುಂಡು ಸೂಚಿ ಚುಚ್ಚಿದ್ದು, ಇದನ್ನು ಕಂಡ ಅಧಿಕಾರಿಗಳು ತಬ್ಬಿಬ್ಬಾಗಿದ್ದಾರೆ. ನಂತರ ಸಿಎಂ ಕೈಗೆ ಔಷಧಿ ಹಚ್ಚಿದ್ದಾರೆ.
ಮೂಲಗಳ ಪ್ರಕಾರ ಕಚೇರಿಯಲ್ಲಿ ಅರ್ಜಿಗಳ ಪರೀಶೀಲನೆಯಲ್ಲಿ ತೊಡಗಿರುವಾಗ ಅರ್ಜಿಯಲ್ಲಿದ್ದ ಗುಂಡು ಸೂಜಿ ಸಿದ್ದರಾಮಯ್ಯ ಅವರ ಕೈಗೆ ಚುಚ್ಚಿದೆ. ಇದರಿಂದ ಅವರ ಕೈಗೆ ಗಾಯವಾಗಿದೆ ಎಂದು ಹೇಳಲಾಗಿದೆ. ಮೊದಲು ಗಾಯದ ಬಗ್ಗೆ ಮಾಹಿತಿ ಇಲ್ಲದೇ ಅಧಿಕಾರಿಗಳು, ವೈದ್ಯರು ಶಾಕ್ ಆಗಿ ಸಿಎಂ ಸಿದ್ದರಾಮಯ್ಯಗೆ ಚಿಕಿತ್ಸೆ ನೀಡಲು ಧಾವಿಸಿದ್ದರು. ಆದರೆ ಕೊನೆಗೆ ಇದು ಗುಂಡು ಪಿನ್ನು ಚುಚ್ಚಿದ ಗಾಯ ಎಂಬುದು ತಿಳಿದು ಬಂದಿದೆ.
ವಿಧಾನಸೌಧದ (Vidhansoudha) ಸಮಿತಿ ಕೊಠಡಿ 313 ರಿಂದ ಜನಸ್ಪಂದನೆ ಕಾರ್ಯಕ್ರಮ ಬರುತ್ತಿರುವ ವೇಳೆ ಗುಂಡು ಸೂಜಿ ಚುಚ್ಚಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಗೆ ಗಾಯವಾಗಿದೆ. ಈ ವೇಳೆ ಮುಖ್ಯಮಂತ್ರಿಗಳು ಬೆರಳಿಗೆ ಕರ್ಚೀಫ್ ಸುತ್ತಿಕೊಂಡು ಸಭೆಗೆ ತೆರಳಿದರು. ಕೂಡಲೆ ಸ್ಥಳಕ್ಕೆ ಆಗಮಿಸಿದ ವೈದ್ಯರು ಬೆರಳಿಗೆ ಸಿದ್ದರಾಮಯ್ಯ ತಪಾಸಣೆ ಮಾಡಿದ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದರು.
Advertisement