
ಬೆಂಗಳೂರು: ಟ್ರಾಫಿಕ್ ಸಮಸ್ಯೆಯಿಂದ ತುಂಬಿರುವ ಬೆಂಗಳೂರಿನಲ್ಲಿ ಮತ್ತೊಂದು Road Rage ಪ್ರಕರಣ ವರದಿಯಾಗಿದ್ದು, ರಾಂಗ್ ವೇ ನಲ್ಲಿ ಬಂದ SUV ಚಾಲಕನ ಪ್ರಶ್ನಿಸಿದ ಬೈಕ್ ಸವಾರನಿಗೆ ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋ ವೈರಲ್ ಆಗುತ್ತಿದೆ.
ಬೆಂಗಳೂರಿನ ಕೊಡಿಗೇಹಳ್ಳಿ ಜಂಕ್ಷನ್ ನಲ್ಲಿ ಇಂದು ರಾತ್ರಿ 7 ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿದ್ದು, ಮಳೆ ನಡುವೆಯೇ ಹಳದಿ ಬೋರ್ಡ್ ಸ್ಕಾರ್ಪಿಯೋ ವಾಹನವೊಂದು ರಾಂಗ್ ವೇನಲ್ಲಿ ನುಗ್ಗಿದ್ದು ಇದರಿಂದ ತೀವ್ರ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಈ ವೇಳೆ ಅದೇ ಮಾರ್ಗದಲ್ಲಿ ಸಾಗಿದ್ದ ಬೈಕ್ ಸವಾರನೋರ್ವ ಸ್ಕಾರ್ಪಿಯೋ ವಾಹನದಲ್ಲಿದ್ದವರನ್ನು ಪ್ರಶ್ನಿಸಿದ್ದು, ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ಸ್ಕಾರ್ಪಿಯೋ ವಾಹನದಲ್ಲಿದ್ದ ಮತ್ತಿಬ್ಬರು ಇಳಿದು ಏಕಾಏಕಿ ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿದ್ದಾರೆ.
ಸ್ಕಾರ್ಪಿಯೋದಲ್ಲಿದ್ದ ಮೂವರೂ ಪಾನಮತ್ತರಾಗಿದ್ದು, ಬೈಕ್ ಸವಾರನಿಗೆ ರಸ್ತೆ ಮೇಲೆಯೇ ಥಳಿಸಿದ್ದಾರೆ. ಈ ವೇಳೆ ಓರ್ವ ಪೊಲೀಸ್ ಸ್ಥಳಕ್ಕಾಗಮಿಸಿ ಇಬ್ಬರನ್ನೂ ಬಿಡಿಸುವ ಕೆಲಸ ಮಾಡಿದ್ದು, ಅದಕ್ಕೂ ಬಗ್ಗದ ಕಾರಿನಲ್ಲಿದ್ದವರು ಪೊಲೀಸ್ ಸಿಬ್ಬಂದಿಯೊಂದಿಗೂ ವಾಗ್ವಾದ ನಡೆಸಿದ್ದಾರೆ. ಈ ಕುರಿತ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಸ್ಕಾರ್ಪಿಯೋ ಕಾರಿನ ಮೇಲೆ Govt of india ಎಂಬ ನಾಮಫಲಕ ಇರುವುದು ಕಂಡುಬಂದಿದೆ.
Advertisement