ಮರ-ಗಿಡಕ್ಕೆ ಸಂಪ್ರದಾಯಬದ್ಧವಾಗಿ ಮದುವೆ; ಗ್ರಾಮಸ್ಥರು ಹಾಗೆ ಮಾಡಿದ್ದು ಯಾಕೆ?

ಎಲ್ಲೆಡೆ ಈಗ ಮದುವೆ ಸೀಸನ್. ನಿತ್ಯ ನೂರರು ಮದುವೆ-ಮುಂಜಿಗಳು ನಡೆಯುತ್ತಲೇ ಇದೆ. ಆದರೆ, ಮಡಿಕೇರಿಯ ಈ ಗ್ರಾಮದಲ್ಲಿ ಅಪರೂಪದ ಮದುವೆಯೊಂದು ನಡೆಯಿತು. ಆದರೆ, ಇಲ್ಲಿ ವಧುವರರು ಮಾತ್ರ ಮನುಷ್ಯರಲ್ಲ. ಬದಲಾಗಿ ಮರ ಮತ್ತು ಗಿಡಗಳು. ಇದೇ ಈ ಮದುವೆ ವಿಶೇಷ.
ಅಶ್ವತ್ಥ ಮರ ಹಾಗೂ ನೆಲ್ಲಿಕಾಯಿ ಗಿಡಕ್ಕೆ ವಿವಾಹ ನೆರವೇರಿಸುತ್ತಿರುವುದು.
ಅಶ್ವತ್ಥ ಮರ ಹಾಗೂ ನೆಲ್ಲಿಕಾಯಿ ಗಿಡಕ್ಕೆ ವಿವಾಹ ನೆರವೇರಿಸುತ್ತಿರುವುದು.
Updated on

ಮಡಿಕೇರಿ: ಎಲ್ಲೆಡೆ ಈಗ ಮದುವೆ ಸೀಸನ್. ನಿತ್ಯ ನೂರರು ಮದುವೆ-ಮುಂಜಿಗಳು ನಡೆಯುತ್ತಲೇ ಇದೆ. ಆದರೆ, ಮಡಿಕೇರಿಯ ಈ ಗ್ರಾಮದಲ್ಲಿ ಅಪರೂಪದ ಮದುವೆಯೊಂದು ನಡೆಯಿತು. ಆದರೆ, ಇಲ್ಲಿ ವಧುವರರು ಮಾತ್ರ ಮನುಷ್ಯರಲ್ಲ. ಬದಲಾಗಿ ಮರ ಮತ್ತು ಗಿಡಗಳು. ಇದೇ ಈ ಮದುವೆ ವಿಶೇಷ.

ಮಡಿಕೇರಿಯ ಕಡಗದಾಳು ಎಂಬ ಗ್ರಾಮದಲ್ಲಿ ಸೋಮವಾರ ಸಂಭ್ರಮದ ವಾತಾವರಣ. ತೆಂಗಿನ ಗರಿಗಳಿಂದ, ವಿವಿಧ ಪುಷ್ಪಗಳಿಂದ ಸಿಂಗರಿಸಿದ್ದ ಆ ಮಂಟಪ ಮದುವೆ ಮಂಟಪವಲ್ಲ, ಅದು ಅಶ್ವಥ್ಥ ಮರದ ಕಟ್ಟೆ. ಅಲ್ಲಿ ಇದ್ದಿದ್ದು ಮಾಮೂಲಿ ಪೂಜೆಯಲ್ಲ, ಬದಲಾಗಿ ಅಶ್ವಥ್ಥ ಮರ ಹಾಗೂ ನೆಲ್ಲಿಕಾಯಿ ಗಿಡಕ್ಕೆ ವಿವಾಹ ಕಾರ್ಯಕ್ರಮ ಮಾಡುವ ಧಾರ್ಮಿಕ ಕಾರ್ಯಕ್ರಮ.

ಗ್ರಾಮದ ಬೊಟ್ಲಪ್ಪ ಯುವಕ ಸಂಘದ ವತಿಯಿಂದ ಮದುವೆ ಸಮಾರಂಭವನ್ನು ಏರ್ಪಡಿಸಲಾಗಿತ್ತು.ಕಾಸರಗೋಡು ಜಿಲ್ಲೆಯ ಅರ್ಚಕರ ನೇತೃತ್ವದಲ್ಲಿ ಗ್ರಾಮದ ಕಲ್ಯಾಣ (ಒಳಿತಿಗಾಗಿ)ಕ್ಕಾಗಿ ಅಶ್ವತ್ಥ ಮರ ಹಾಗೂ ನೆಲ್ಲಿಕಾಯಿ ಗಿಡದ ವಿವಾಹ ನೆರವೇರಿತು. ಈ ಕಾರ್ಯಕ್ರಮಕ್ಕೆ ನೂರಾರು ಮಂದಿ ಪಾಲ್ಗೊಂಡಿದ್ದರು.

ಬೊಟ್ಲಪ್ಪ ಯುವಕ ಸಂಘ 1993ರಲ್ಲಿ ಸ್ಥಾಪನೆಗೊಂಡಿದ್ದು, 2003ಕ್ಕೆ 10 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಂಘದ ಸದಸ್ಯರು ಗ್ರಾಮದ ಗ್ರಾಮದಲ್ಲಿ ಅಶ್ವತ್ಥ್ ಮರವನ್ನು ನೆಟ್ಟಿದ್ದರು. ಜ್ಯೋತಿಷಿಗಳು ಮರ ನೆಟ್ಟು 21 ವರ್ಷಗಳಾದ ಬಳಿಕ ವಿವಾಹ ಕಾರ್ಯಕ್ರಮ ನೆರವೇರಿಸುವಂತೆ ಸಲಹೆ ನೀಡಿದ್ದರು.

ಇದರಂತೆ ವಿವಾಹ ಕಾರ್ಯಕ್ರಮ ನೆರವೇರಿಸಲಾಗಿದೆ. ಅಶ್ವತ್ಥ ಮರದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ ಇರುತ್ತಾರೆಂಬು ನಂಬಲಾಗಿದೆ. ಈ ಮರದ ಕುರಿತು ಸಾಕಷ್ಟು ಆಧ್ಯಾತ್ಮಿಕ ಭಾವನೆಗಳೂ ಕೂಡ ಇದೆ. ಮರವನ್ನು ವರ ಎಂದ ಹಾಗೂ ನೆಲ್ಲಿಕಾಯಿ ಗಿಡವನ್ನು ವಧಿ ಎಂಬು ನಂಬಿ ವಿವಾಹ ನೆರವೇರಿಸಲಾಗಿದೆ. ಹಿಂದೂ ವಿವಾಹದಂತೆ ಕನ್ಯಾದಾನ ಸೇರಿ ಇತರೆ ಆಚರಣೆಗಳನ್ನೂ ಕೂಡ ನೆರವೇರಿಸಲಾಗಿದೆ ಎಂದು ಸಂಘದ ಸದಸ್ಯರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com