ನಗರದಲ್ಲಿ ಹೆಚ್ಚಿದ ಸರಗಳ್ಳರ ಹಾವಳಿ: ಚಾಮುಂಡಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮಹಿಳೆಯ ಮಂಗಳಸೂತ್ರ ಕಿತ್ತು ಪರಾರಿ!

ನಗರದಲ್ಲಿ ಸರಗಳ್ಳರ ಹಾವಳಿ ಹೆಚ್ಟಾಗಿದೆ. ಖದೀಮನೊಬ್ಬ ಮೈಸೂರಿಗೆ ತೆರಳುತ್ತಿದ್ದ ಮಹಿಳೆಯೊಬ್ಬರ 3 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಮಂಗಳಸೂತ್ರವನ್ನು ದೋಚಿ ಪರಾರಿಯಾಗಿರುವ ಘಟನೆ ಚಾಮುಂಡಿ ಎಕ್ಸ್‌ಪ್ರೆಸ್‌ನಲ್ಲಿ (Chamundi Express) ಶನಿವಾರ ರಾತ್ರಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಗರದಲ್ಲಿ ಸರಗಳ್ಳರ ಹಾವಳಿ ಹೆಚ್ಟಾಗಿದೆ. ಖದೀಮನೊಬ್ಬ ಮೈಸೂರಿಗೆ ತೆರಳುತ್ತಿದ್ದ ಮಹಿಳೆಯೊಬ್ಬರ 3 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಮಂಗಳಸೂತ್ರವನ್ನು ದೋಚಿ ಪರಾರಿಯಾಗಿರುವ ಘಟನೆ ಚಾಮುಂಡಿ ಎಕ್ಸ್‌ಪ್ರೆಸ್‌ನಲ್ಲಿ (Chamundi Express) ಶನಿವಾರ ರಾತ್ರಿ ನಡೆದಿದೆ.

ಎನ್ ಮಂಜುಳಾ (52) ಸರ ಕಳೆದುಕೊಂಡ ಮಹಿಳೆಯಾಗಿದ್ದಾರೆ. ಗೃಹಿಣಿಯಾಗಿರುವ ಮಂಜುಳಾ ಅವರು ಸಂಬಂಧಿಕರೊಬ್ಬರ ಮದುವೆ ಹಿನ್ನೆಲೆಯಲ್ಲಿ ಶಾಪಿಂಗ್ ಮಾಡಲು ಬೆಂಗಳೂರಿಗೆ ತಮ್ಮ (ನಿಷ್ಕಲಾ) ಮಗಳೊಂದಿಗೆ ಬಂದಿದ್ದರು. ಶಾಪಿಂಗ್ ಮುಗಿಸಿ ಸಂಜೆ 6.15ರ ಸುಮಾರಿಗೆ ಮೆಜೆಸ್ಟಿಕ್ ನಿಲ್ದಾಣದಿಂದ (ಕೆಎಸ್ಆರ್ ಬೆಂಗಳೂರು) ಚಾಮುಂಡಿ ಎಕ್ಸ್‌ಪ್ರೆಸ್'ನಲ್ಲಿ ಮೈಸೂರಿಗೆ ತೆರಳುತ್ತಿದ್ದರು. ಜ್ಞಾನಭಾರತಿ ನಿಲ್ದಾಣದ ಕ್ರಾಸಿಂಗ್ ಬಳಿ ಚಾಕು ತೋರಿಸಿ, ಬೆದರಿಸಿ ಚಿನ್ನದ ಸರವನ್ನು ಕಸಿದು, ಪರಾರಿಯಾಗಿದ್ದಾನೆ.

ಬಾಗಿಲ ಬಳಿ ವ್ಯಕ್ತಿಯೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ. ಇದನ್ನು ತಾಯಿ ಗಮನಿಸುತ್ತಿದ್ದರು. ಈ ಬಗ್ಗೆ ನನ್ನ ಬಳಿ ಹೇಳಿದ್ದರು. ರೈಲು ಜ್ಞಾನಭಾರತಿ ನಿಲ್ದಾಣದ ಕ್ರಾಸಿಂಗ್ ಬಳಿ ತೆರಳುತ್ತಿದ್ದಂತೆಯೇ ಕತ್ತಲು ಆವರಿಸಿದ್ದು. ಈ ವೇಳೆ ತಾಯಿ ಬಳಿಗೆ ಬಂದ ದುಷ್ಕರ್ಮಿ ಬ್ಲೇಡ್ ತೋರಿಸಿ, ಬೆದರಿಸಿದ. ಭಯದಿಂದ ನಾವು ಕೂಗಲು ಆರಂಭಿಸಿದ್ದೆವು. ಕೆಲವೇ ಸೆಕೆಂಡ್ ಗಳಲ್ಲಿ ಆತ ಸರವನ್ನು ಕತ್ತರಿಸಿ ಬಾಗಿಲಿನಿಂದ ಕೆಳಗೆ ಜಿಗಿದಿದ್ದ. ಘಟನೆ ಬಳಿಕ ನಾವು ಅಳಲು ಆರಂಭಿಸಿದ್ದೆವು. ನಾವಿದ್ದ ಭೋಗಿಯಲ್ಲಿ ಇಬ್ಬರು ಪುರುಷರಷ್ಟೇ ಇದ್ದರು. ಸಹ ಪ್ರಯಾಣಿಕರು ತುರ್ತು ಸರಪಳಿಯನ್ನು ಎಳೆಯುವಂತೆ ತಿಳಿಸಿದ್ದರು. ನಾವು ಎಳೆದಿದ್ದವು. 500 ಮೀಟರ್ ಮುಂದಕ್ಕೆ ರೈಲು ನಿಂತಿತ್ತು. ಬಳಿಕ ರೈಲ್ವೇ ಪೊಲೀಸರು ನಮ್ಮ ಬಳಿಗೆ ಬಂದು ಹೇಳಿಕೆಯನ್ನು ದಾಖಲಿಸಿಕೊಂಡರು. ಚಾಮುಂಡಿ ಎಕ್ಸ್ ಪ್ರೆಸ್ ರೈಲಿನಲ್ಲಿ ಈ ರೀತಿಯ ಘಟನೆ ನಡೆಯುವುದು ಅತ್ಯಂತ ವಿರಳ. ವರ್ಷಗಳ ಹಿಂದೆ ಇಂತಹ ಘಟನೆ ನಡೆದಿತ್ತು. ಮರಳಿ ಬೆಂಗಳೂರಿಗೆ ಹೋಗಿ ದೂರು ದಾಖಲಿಸುವಂತೆ ಪೊಲೀಸರು ಸಲಹೆ ನೀಡಿದ್ದಾರೆಂದು ನಿಷ್ಕಲಾ ಅವರು ಹೇಳಿದ್ದಾರೆ.

ರಾಮನಗರವರೆಗೆ ತೆರಳಿದ್ದ ನಾವು ಮತ್ತೆ ಬೆಂಗಳೂರಿಗೆ ರಾತ್ರಿ 10.15ರ ಸುಮಾರಿಗೆ ಹೋಗಿ, ಅಲ್ಲಿಯೂ ದೂರು ನೀಡಿದೆವು. ದೂರನ್ನು ಇದೀಗ ಎಫ್ಐಆರ್ ಆಗಿ ಪರಿವರ್ತಿಸಲಾಗಿದೆ. ಈ ವರೆಗೂ ಯಾವುದೇ ಪ್ರಗತಿಗಳು ಕಂಡು ಬಂದಿಲ್ಲ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com