ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿದ್ದು, ಇಲ್ಲೋರ್ವ ವ್ಯಕ್ತಿಯ ಸ್ಕೂಟರ್ ಮೇಲೆ 300ಕ್ಕೂ ಅಧಿಕ ಬಾರಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿದ್ದು, 3 ಲಕ್ಷ ರೂ. ಗೂ ಅಧಿಕ ದಂಡ ಬಾಕಿ ಉಳಿದಿದೆ.
ಹೌದು.. ವೆಂಕಟ್ರಾಮನ್ ಎಂಬಾತನ ವಾಹನದ ಮೇಲೆ ಬರೋಬ್ಬರಿ 300ಕ್ಕೂ ಹೆಚ್ಚು ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಈ ವಾಹನ ಮಾರುಕಟ್ಟೆ ವ್ಯಾಲ್ಯೂನೇ 20 ಸಾವಿರ ರೂ ಇದ್ದು, ಆ ಗಾಡಿಯ ಮೇಲಿನ ದಂಡ ಮಾತ್ರ 3 ಲಕ್ಷ ರೂಗೂ ಅಧಿಕ ದಂಡ ಇದೆ ಎಂದು ತಿಳಿದುಬಂದಿದೆ.
ಸಂಚಾರಿ ಆಯುಕ್ತ ಅನುಚೇತ್ ಅವರು ಈ ಹಿಂದೆ 50 ಸಾವಿರದವರೆಗೆ ದಂಡವಿದ್ದಲ್ಲಿ ಅದನ್ನು ಮನೆಗೆ ಹೋಗಿ ವಸೂಲಿ ಮಾಡಿಕೊಳ್ಳಿ ಎಂದು ನಗರ ಸಂಚಾರ ಪೊಲೀಸರಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವೆಂಕಟರಾಮನ್ ಎಂಬಾತ ವಾಹನ ತಪಾಸಣೆ ಮಾಡಿದ್ದಾರೆ. ಈ ವೇಳೆ ಸಂಚಾರ ನಿಯಮ ಉಲ್ಲಂಘನೆ ಮಾಡಿರುವವರಲ್ಲಿ ಈತ ನಂಬರ್ ಒನ್ ಎನಿಸಿಕೊಂಡಿದ್ದಾನೆ.
ಈತನ ವಾಹನದ ಮೇಲೆ 300ಕ್ಕೂ ಹೆಚ್ಚು ಕೇಸ್‌ಗಳಿವೆ. ಒನ್ ವೇ ಸಂಚಾರ, ಸಿಗ್ನಲ್ ಜಂಪ್, ಗಾಡಿ ಓಡಿಸುತ್ತಾ ಮೊಬೈಲ್ ಬಳಕೆ, ಫುಟ್ ಪಾಥ್ ಮೇಲೆ ಸಂಚಾರ ಸೇರಿ 300ಕ್ಕೂ ಅಧಿಕ ಪ್ರಕರಣಗಳು ಬಾಕಿ ಇದೆ. ಎಸ್.ಆರ್ ನಗರ , ವಿಲ್ಸನ್ ಗಾರ್ಡನ್ ಸೇರಿದಂತೆ ಹಲವೆಡೆ ನಿಯಮ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ.
Advertisement