ಬಂಡೀಪುರದ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿ ಗಣತಿಗೆ ಕ್ಯಾಮೆರಾ ಕೊರತೆ ಸಮಸ್ಯೆ!

ಬಂಡೀಪುರದ ರಾಷ್ಟ್ರೀಯ ಉದ್ಯಾನವನದಲ್ಲಿ ಕರ್ನಾಟಕ ಅರಣ್ಯ ಇಲಾಖೆ ನಡೆಸುತ್ತಿರುವ ಹುಲಿ ಗಣತಿಗೆ ಕ್ಯಾಮೆರಾಗಳ ಕೊರತೆಯು ಸಮಸ್ಯೆಯಾಗಿ ಪರಿಣಮಿಸಿದೆ.
ಬಂಡೀಪುರದಲ್ಲಿ ಹುಲಿ ಗಣತಿ (ಸಂಗ್ರಹ ಚಿತ್ರ)
ಬಂಡೀಪುರದಲ್ಲಿ ಹುಲಿ ಗಣತಿ (ಸಂಗ್ರಹ ಚಿತ್ರ)

ಮೈಸೂರು: ಬಂಡೀಪುರದ ರಾಷ್ಟ್ರೀಯ ಉದ್ಯಾನವನದಲ್ಲಿ ಕರ್ನಾಟಕ ಅರಣ್ಯ ಇಲಾಖೆ ನಡೆಸುತ್ತಿರುವ ಹುಲಿ ಗಣತಿಗೆ ಕ್ಯಾಮೆರಾಗಳ ಕೊರತೆಯು ಸಮಸ್ಯೆಯಾಗಿ ಪರಿಣಮಿಸಿದೆ.

ಬಂಡೀಪುರದ ರಾಷ್ಟ್ರೀಯ ಉದ್ಯಾನವನ 868 ಕಿಮೀ ವ್ಯಾಪಿಸಿದ್ದು, ಬಂಡೀಪುರದ 13 ರೇಂಜ್‌ ಅರಣ್ಯ ಪ್ರದೇಶವನ್ನು ಎರಡು ಬ್ಲಾಕ್‌ಗಳಾಗಿ ವಿಂಗಡಿಸಲಾಗಿದೆ. ಹುಲಿಗಣತಿಗಾಗಿ ಇಲಾಖೆಗೆ 1224 ಕ್ಯಾಮೆರಾಗಳ ಅಗತ್ಯವಿದ್ದು, ಆದರೆ 752 ಕ್ಯಾಮೆರಾಗಳನ್ನು ಮಾತ್ರ ಹೊಂದಿದೆ. ಹುಲಿಗಳ ಕ್ಯಾಮರಾ ಟ್ರ್ಯಾಪಿಂಗ್ ಮಾಡಲು ಪ್ರತಿ ಬ್ಲಾಕ್‌ನಲ್ಲಿ 612 ಕ್ಯಾಮೆರಾಗಳು ಬೇಕಾಗಿರುವುದರಿಂದ, ಹೊಸ ಕ್ಯಾಮೆರಾಕಗಳನ್ನು ಖರೀದಿಸಲು ಇಲಾಖೆ ಬಳಿ ಹಣವಿಲ್ಲ. ಇಲಾಖೆ ಸಿಬ್ಬಂದಿ ಅರಣ್ಯದಾದ್ಯಂತ ಕ್ಯಾಮೆರಾಗಳನ್ನು ಅಳವಡಿಸಿ ಕನಿಷ್ಠ 25 ದಿನಗಳ ಕಾಲ ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ಅದನ್ನು ತಮಿಳುನಾಡಿನ ಮದುಮಲೈ, ಕೇರಳ ರಾಜ್ಯದ ವಯನಾಡು ಮತ್ತು ಮೈಸೂರು ಜಿಲ್ಲೆಯ ನಾಗಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಿರುವ ಎರಡನೇ ಬ್ಲಾಕ್‌ಗೆ ಸ್ಥಳಾಂತರಿಸುತ್ತಾರೆ. ಹಾಳಾಗಿರುವ ಕ್ಯಾಮೆರಾಗಳನ್ನು ಬದಲಾಯಿಸುವುದೂ ಕಷ್ಟವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ದೈನಂದಿನ ಬೀಟ್‌ನಲ್ಲಿರುವ ಸಿಬ್ಬಂದಿಗಳು ಕ್ಯಾಮೆರಾ ಸ್ಪಾಟ್‌ಗಳಿಗೆ ಭೇಟಿ ನೀಡಿ ಹುಲಿಗಳ ಚಲನವಲನಗಳನ್ನು ದಾಖಲಿಸಲು ಅವುಗಳನ್ನು ಹೊಸ ಮೆಮೊರಿ ಕಾರ್ಡ್‌ನೊಂದಿಗೆ ಬದಲಾಯಿಸುತ್ತಾರೆ. ಹಿಂದಿನ ಗಣತಿಯು ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ 191 ಹುಲಿಗಳಿವೆ ಎಂದು ದೃಢಪಡಿಸಿದ್ದರೂ ಅವುಗಳಲ್ಲಿ 41 ಪಕ್ಕದ ರಾಷ್ಟ್ರೀಯ ಉದ್ಯಾನವನಗಳಿಂದ ಬಂದ ಹುಲಿಗಳಾಗಿವೆ. ನೀಲಗಿರಿ ಅರಣ್ಯ ಪ್ರದೇಶವು 700 ಹುಲಿಗಳು, ಮೂರು ಸಾವಿರ ಚಿರತೆಗಳು ಮತ್ತು ಸುಮಾರು 6000 ಆನೆಗಳನ್ನು ಹೊಂದಿದೆ.

ಈ ಬಗ್ಗೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸಂರಕ್ಷಣಾಧಿಕಾರಿ ರಮೇಶ್ ಕುಮಾರ್ ಅವರನ್ನು ಸಂಪರ್ಕಿಸಿದಾಗ, 'ಕ್ಯಾಮೆರಾಗಳ ಕೊರತೆಯಿಂದಾಗಿ ಎರಡು ಹಂತಗಳಲ್ಲಿ ಹುಲಿ ಗಣತಿಯನ್ನು ಮಾಡಲು ಮತ್ತು ಹೊಸ ಕ್ಯಾಮೆರಾಗಳನ್ನು ಖರೀದಿಸಲು ಪ್ರಯತ್ನಿಸುತ್ತಿದ್ದೇವೆ. ಅನೇಕ ಸಂದರ್ಭಗಳಲ್ಲಿ ಆನೆಗಳು ಕ್ಯಾಮೆರಾವನ್ನು ಪುಡಿಮಾಡಿರುವುದರಿಂದ ಹಾನಿಗೊಳಗಾದ ಕ್ಯಾಮೆರಾಗಳನ್ನು ಬದಲಾಯಿಸಲು ಹೆಚ್ಚುವರಿ ಕ್ಯಾಮೆರಾಗಳ ಅಗತ್ಯವಿದೆ ಎಂದು ಅವರು ಹೇಳಿದರು.

ಅಲ್ಲದೆ ಇಲ್ಲಿ ಕಾಪಿ ಮಾಡಲು ಯಾವುದೇ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಫೋಟೋ-ರೆಕಗ್ನಿಷನ್ ಸಾಫ್ಟ್‌ವೇರ್ ಹುಲಿಗಳನ್ನು ಅವುಗಳ ಪಟ್ಟೆಗಳಿಂದ ಗುರುತು ಪತ್ತೆ ಮಾಡುತ್ತದೆ ಮತ್ತು ಬದಲಾಗದ ಮಾದರಿಯು ಹುಲಿಯನ್ನು ಪತ್ತೆಹಚ್ಚಲು ಸುಲಭವಾಗುತ್ತದೆ ಎಂದು ಹೇಳಿದರು.

ಆದರೆ, ಅರಣ್ಯಾಧಿಕಾರಿಗಳು ಮತ್ತು ಅರಣ್ಯದ ಅಂಚಿನಲ್ಲಿ ವಾಸಿಸುವ ಜನರು ಇಲಾಖೆಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನವನ್ನು ಹೆಚ್ಚಿಸುವುದರಿಂದ ಹೊಸ ಕ್ಯಾಮೆರಾಗಳು ಮತ್ತು ರೈಲು ಬೇಲಿಗಳನ್ನು ತ್ವರಿತವಾಗಿ ನಿರ್ಮಿಸಲು ಸಹಾಯ ಮಾಡುತ್ತದೆ ಮತ್ತು ಮಾನವ-ಪ್ರಾಣಿ ಸಂಘರ್ಷಕ್ಕೆ ಕಾರಣವಾಗುವ ಗ್ರಾಮಗಳಲ್ಲಿ ಆನೆಗಳು ಪ್ರವೇಶಿಸುವುದನ್ನು ತಡೆಯಲು ಕಂದಕಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com