ಆನೆ ದಾಳಿಗೆ ಮೃತಪಟ್ಟ ಕೇರಳದ ವ್ಯಕ್ತಿ ಕುಟುಂಬಕ್ಕೆ ಪರಿಹಾರ; ಅರಣ್ಯ ಸಚಿವರ ವಿರುದ್ಧ ಅಧಿಕಾರಿಗಳು, ತಜ್ಞರು ಅಸಮಾಧಾನ

ಕೇರಳದಲ್ಲಿ ಆನೆ ದಾಳಿಗೆ ಬಲಿಯಾದ ವ್ಯಕ್ತಿಯ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ವಯನಾಡು ಸಂಸದ ರಾಹುಲ್ ಗಾಂಧಿ ಅವರಿಗೆ ಬರೆದಿರುವ ಪತ್ರವನ್ನು ಇಲಾಖೆ ಅಧಿಕಾರಿಗಳು ಮತ್ತು ತಜ್ಞರು ಪ್ರಶ್ನಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಕೇರಳದಲ್ಲಿ ಆನೆ ದಾಳಿಗೆ ಬಲಿಯಾದ ವ್ಯಕ್ತಿಯ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ವಯನಾಡು ಸಂಸದ ರಾಹುಲ್ ಗಾಂಧಿ ಅವರಿಗೆ ಬರೆದಿರುವ ಪತ್ರವನ್ನು ಇಲಾಖೆ ಅಧಿಕಾರಿಗಳು ಮತ್ತು ತಜ್ಞರು ಪ್ರಶ್ನಿಸಿದ್ದಾರೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಉದ್ದಕ್ಕೂ ರಾಜ್ಯವು ವೈಯನಾಡ್‌ನೊಂದಿಗೆ 79 ಕಿಮೀ ಮತ್ತು ನಾಗರಹೊಳೆ ಉದ್ದಕ್ಕೂ 40 ಕಿಮೀ ಗಡಿಯನ್ನು ಹಂಚಿಕೊಂಡಿದೆ. 'ಆನೆಗಳು ಸ್ವತಂತ್ರ ಪ್ರಾಣಿಗಳಾಗಿದ್ದು, ಅವುಗಳಿಗೆ ಯಾವುದೇ ರಾಜಕೀಯ ಗಡಿಗಳು ತಿಳಿದಿಲ್ಲ. ಸಂಸದರು ನೀಡಿರುವ ಸಲಹೆಗೆ ಖಂಡ್ರೆ ಅವರು ಒಪ್ಪಿಗೆ ಸೂಚಿಸಿರುವುದು ಅವರು ಏನನ್ನು ಯೋಚಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ. ಅರಣ್ಯದ ಗಡಿ ಕುಗ್ಗುತ್ತಿರುವುದನ್ನು ಖಂಡ್ರೆ ಅವರು ಪತ್ರದಲ್ಲಿ ಒಪ್ಪಿಕೊಂಡಿದ್ದಾರೆ' ಎಂದು ಸರ್ಕಾರದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿರುವ ತಜ್ಞರು ಹೇಳಿದ್ದಾರೆ.

ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಮಾತನಾಡಿ, 'ವಯನಾಡಿನಲ್ಲಿ ಕಂಡುಬಂದ ಆನೆಯು ಕರ್ನಾಟಕದ್ದು ಎಂಬುದನ್ನು ರೇಡಿಯೊ ಕಾಲರ್‌ ಮೂಲಕ ಗುರುತಿಸಲಾಗಿದೆ. ಇದರರ್ಥ ಕರ್ನಾಟಕವು ಆ ಆನೆಯನ್ನು ಹೊಂದಿದೆ ಎಂದಲ್ಲ. ಇದು ಸಾಮಾನ್ಯವಾಗಿ ಉದ್ರೇಕಗೊಂಡ ಮತ್ತು ಜ್ಞಾನವಿಲ್ಲದ ಹಳ್ಳಿಗರು ಹೇಳುವುದಾಗಿದೆ. ಬೆಳೆ ನಷ್ಟ ಅಥವಾ ಸಾವು ಸಂಭವಿಸಿದಾಗ ನಿಮ್ಮ ಆನೆ ಅಥವಾ ಹುಲಿಯನ್ನು ಕರೆದುಕೊಂಡು ಹೋಗಿ ಎಂದು ಅವರು ನಮಗೆ ಹೇಳುತ್ತಾರೆ. ಆದರೆ, ರಾಜಕಾರಣಿಗಳು ಕೂಡ ಇದೇ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ' ಎಂದು ಅವರು ಹೇಳಿದರು.

ಪ್ರಾತಿನಿಧಿಕ ಚಿತ್ರ
ಕೇರಳದಲ್ಲಿ ಆನೆ ದಾಳಿಗೆ ಬಲಿಯಾದ ವ್ಯಕ್ತಿಗೆ ಪರಿಹಾರ ನೀಡಲು ಕರ್ನಾಟಕ ಸರ್ಕಾರ ನಿರ್ಧಾರ

ಕೇರಳ ಮತ್ತು ತಮಿಳುನಾಡಿನ ಆನೆಗಳು ಸಹ ಕರ್ನಾಟಕಕ್ಕೆ ಬರುತ್ತವೆ ಮತ್ತು ತಿರುಗುತ್ತಿರುತ್ತವೆ. ಆದರೆ, ಅವುಗಳಿಗೆ ಯಾವುದೇ ರೇಡಿಯೊ ಕಾಲರ್ ಅಳವಡಿಸಿಲ್ಲ ಎಂದು ಮತ್ತೋರ್ವ ಅಧಿಕಾರಿ ಹೇಳಿದರು. 'ನಾವು ಕ್ಯಾಮೆರಾ ಟ್ರ್ಯಾಪ್ ಚಿತ್ರಗಳ ಮೂಲಕ ಮಾಹಿತಿಯನ್ನು ಖಚಿತಪಡಿಸಿಕೊಳ್ಳುತ್ತೇವೆಎಂದರು.

ಇತ್ತೀಚೆಗೆ, ಕೊಯಮತ್ತೂರಿನಲ್ಲಿ ಸೆರೆಹಿಡಿದ ಮತ್ತು ಬಿಡುಗಡೆಯಾದ ಆನೆಯು ಕರ್ನಾಟಕದಲ್ಲಿ ಒಬ್ಬ ವ್ಯಕ್ತಿಯನ್ನು ಕೊಂದಿತ್ತು. 'ರಾಜ್ಯ ಅರಣ್ಯ ಇಲಾಖೆ ಆನೆಯನ್ನು ಸೆರೆಹಿಡಿದಿದೆ ಮತ್ತು ಶಿಬಿರಕ್ಕೆ ಸ್ಥಳಾಂತರಿಸಿದೆ. ಇನ್ನೊಂದು ಪ್ರಕರಣದಲ್ಲಿ, ಬಂಡೀಪುರದ ರಾಮಾಪುರ ಶಿಬಿರಕ್ಕೆ ಕೇರಳದಿಂದ ಕಳುಹಿಸಲಾಗಿದ್ದ ಆನೆ ಮಾರ್ಗಮಧ್ಯೆಯೇ ಸಾವಿಗೀಡಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಅದು ಹೃದಯಾಘಾತದಿಂದ ಸಾವಿಗೀಡಾಗಿದೆ ಎಂದು ತಿಳಿದುಬಂದಿದೆ. ನಾವು ಯಾವುದೇ ಪರಿಹಾರ ಕೇಳಿಲ್ಲ. ಸುಮಾರು 80 ಆನೆಗಳಿಗೆ ರೇಡಿಯೋ ಕಾಲರ್ ಹಾಕಲಾಗಿದೆ' ಎಂದು ಅವರು ಹೇಳಿದರು.

'ವನ್ಯಜೀವಿ ನಿರ್ವಹಣೆ ಕುರಿತು ಕೇರಳ ಮತ್ತು ತಮಿಳುನಾಡು ಅಧಿಕಾರಿಗಳೊಂದಿಗೆ ನಾವು ನಿಯಮಿತವಾಗಿ ಸಭೆ ನಡೆಸುತ್ತೇವೆ. ಕರ್ನಾಟಕದ ಪ್ರಾಣಿಗಳು ದಾರಿತಪ್ಪಿ ಆ ರಾಜ್ಯಗಳಿಗೆ ಹೋಗುತ್ತವೆ ಎಂಬ ಮಾತು ಬರಲೇ ಇಲ್ಲ' ಎಂದು ಮತ್ತೊಬ್ಬ ಅಧಿಕಾರಿ ಹೇಳಿದರು.

ಪ್ರಾತಿನಿಧಿಕ ಚಿತ್ರ
ಕನ್ನಡಿಗರ ತೆರಿಗೆ ಹಣ ರಾಹುಲ್ ಗಾಂಧಿ ಜೇಬು ಸೇರುತ್ತಿದೆ: ಸರ್ಕಾರದ ವಿರುದ್ಧ ಆರ್ ಅಶೋಕ, ಸಿಟಿ ರವಿ ಕಿಡಿ

'ಘರ್ಷಣೆ ವಲಯದಿಂದ ಆನೆಯನ್ನು ಬಿಡುಗಡೆ ಮಾಡುವುದು ಸೂಕ್ತವೇ ಮತ್ತು ಬಿಡುಗಡೆಯಾದ ಆನೆಯನ್ನು ಪತ್ತೆಹಚ್ಚಲು ಸದ್ಯ ಸರಿಯಾದ ಕ್ರಮಗಳು ಜಾರಿಯಲ್ಲಿವೆಯೇ ಎಂಬುದರ ಕುರಿತು ತನಿಖೆ ನಡೆಸಬೇಕು. ಆನೆಗಳಿಗೆ ಸಂಬಂಧಿಸಿದಂತೆ ನೀಡಿದ ಪ್ರಮುಖ ತೀರ್ಪಿನಲ್ಲಿ ಹೈಕೋರ್ಟ್‌ನ ನಿರ್ದಿಷ್ಟ ನಿರ್ದೇಶನಗಳ ಅನುಷ್ಠಾನವಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕು' ಎಂದು ವೈಲ್ಡ್‌ಲೈಫ್ ಫಸ್ಟ್ ಟ್ರಸ್ಟಿ ಪ್ರವೀಣ್ ಭಾರ್ಗವ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com