ಬೆಳಗಾವಿ: ಮದುವೆ ಮುಗಿಸಿ ವಾಪಸ್ ಬರುವಾಗ ಮರಕ್ಕೆ ಕಾರು ಡಿಕ್ಕಿ; ಆರು ಮಂದಿ ದುರ್ಮರಣ

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದಿದ್ದು ಪರಿಣಾಮ ಸ್ಥಳದಲ್ಲೇ ಆರು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಅಪಘಾತದ ದೃಶ್ಯ
ಅಪಘಾತದ ದೃಶ್ಯ
Updated on

ಬೆಳಗಾವಿ: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದಿದ್ದು ಪರಿಣಾಮ ಸ್ಥಳದಲ್ಲೇ ಆರು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಮೃತರನ್ನು 30 ವರ್ಷದ ಕಾರು ಚಾಲಕ ಶಾರುಖ್ ಪೆಂಡಾರಿ, 50 ವರ್ಷದ ಇಕ್ಬಾಲ್ ಜಮಾದಾರ್, 37 ವರ್ಷದ ಶಬನಮ್ ಲಂಗೋಟಿ, 17 ವರ್ಷದ ಸಾನಿಯಾ ಲಂಗೋಟಿ, 12 ವರ್ಷದ ಉಮರ್ ಲಂಗೋಟಿ ಮತ್ತು 13 ವರ್ಷದ ಫರಾನ್ ಲಂಗೋಟಿ ಎಂದು ತಿಳಿದುಬಂದಿದೆ.

ಅಪಘಾತದ ದೃಶ್ಯ
ಕಲಬುರಗಿ: ಬೈಕ್ ನಲ್ಲಿ ಚೇಸ್ ಮಾಡಿ ಬಸ್ ಅಡ್ಡಗಟ್ಟಿ ಅಪ್ರಾಪ್ತೆಯ ಕತ್ತು ಕೊಯ್ದ ಅಪ್ರಾಪ್ತ ಬಾಲಕರು!

ಧಾರವಾಡ ಮೂಲದವರಾದ ಇವರು ಸ್ವಿಫ್ಟ್ ಕಾರಿನಲ್ಲಿ ಸುಮಾರು 10 ಮಂದಿ ಮದುವೆ ಮುಗಿಸಿ ವಾಪಸ್‌ ಮರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಮಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ನಾಲ್ವರು ಗಾಯಾಳುಗಳನ್ನು ಸ್ಥಳೀಯ ಹಾಗೂ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನಾ ಸ್ಥಳಕ್ಕೆ ಬೆಳಗಾವಿ ಎಸ್‌ಪಿ ಡಾ. ಭೀಮಾಶಂಕರ ಗುಳೇದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com