ಎರಡು ಹೊಸ ಮಾರ್ಗಗಳಲ್ಲಿ BMTC ಸಾರಿಗೆ ಸೇವೆ ವಿಸ್ತರಣೆ; ಮೆಟ್ರೋ ನಿಲ್ದಾಣದಲ್ಲಿ ಬಸ್ ಮಾಹಿತಿಗೆ QR ಕೋಡ್!

ಬಸ್ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (Bengaluru Metropolitan Transport Corporation)ಎರಡು ಹೊಸ ಮಾರ್ಗಗಳನ್ನು ಪರಿಚಯಿಸುತ್ತಿದೆ.
 ಬಿಎಂಟಿಸಿ ಬಸ್ ಗಳು
ಬಿಎಂಟಿಸಿ ಬಸ್ ಗಳುBMTC

ಬೆಂಗಳೂರು: ಬಸ್ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (Bengaluru Metropolitan Transport Corporation)ಎರಡು ಹೊಸ ಮಾರ್ಗಗಳನ್ನು ಪರಿಚಯಿಸುತ್ತಿದೆ.

ಹೌದು.. ಇದೇ ಫೆಬ್ರವರಿ 26ರಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ BMTC 500 CS ಮತ್ತು 505 ಸಂಖ್ಯೆಗಳಲ್ಲಿ ಎರಡು ಹೊಸ ಮಾರ್ಗಗಳನ್ನು ಪರಿಚಯಿಸುತ್ತಿದೆ. ಮಾರ್ಗ ಸಂಖ್ಯೆ 500 ಸಿಎಸ್ ಸರ್ಜಾಪುರದಿಂದ ದೊಮ್ಮಸಂದ್ರ, ಕೊಡತಿ ಗೇಟ್, ಕೈಕೊಡ್ರಹಳ್ಳಿ, ಇಬ್ಬಲೂರು ಜಂಕ್ಷನ್ ಮತ್ತು ಅಗರ ಮೂಲಕ ಸೆಂಟ್ರಲ್ ಸಿಲ್ಕ್ ಬೋರ್ಡ್‌ಗೆ ಕಾರ್ಯನಿರ್ವಹಿಸುತ್ತದೆ.

 ಬಿಎಂಟಿಸಿ ಬಸ್ ಗಳು
ಟಿಕೆಟ್ ರಹಿತ ಪ್ರಯಾಣ: 7.83 ಲಕ್ಷ ರೂ. ದಂಡ ವಸೂಲಿ ಮಾಡಿದ ಬಿಎಂಟಿಸಿ

ಅಂತೆಯೇ ಮಾರ್ಗ ಸಂಖ್ಯೆ 505 ಹೊಸರೋಡ್‌ನಿಂದ ವರ್ತೂರು ಕೋಡಿಗೆ ಕಸವನಹಳ್ಳಿ, ದೊಡ್ಡಕನ್ನಳ್ಳಿ, ಕೃಪಾನಿಧಿ ಕಾಲೇಜು, ಗುಂಜೂರು ಮತ್ತು ವರ್ತೂರು ಸ್ಟಾಪ್ ಗಳನ್ನು ಒಳಗೊಂಡಿದೆ. BMTC 500 CS ಮಾರ್ಗದಲ್ಲಿ 12 ನಿತ್ಯ ಟ್ರಿಪ್‌ಗಳನ್ನು ಮತ್ತು 505 ಮಾರ್ಗದಲ್ಲಿ 14 ಟ್ರಿಪ್‌ಗಳನ್ನು ನಿರ್ವಹಿಸುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೆಟ್ರೋ ನಿಲ್ದಾಣದಲ್ಲಿ QR Code ಸ್ಕ್ಯಾನ್ ಮೂಲಕ BMTC ಬಸ್ ವಿವರ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) 40 ಮೆಟ್ರೋ ನಿಲ್ದಾಣಗಳಲ್ಲಿ ಕ್ಯೂಆರ್ ಕೋಡ್ ಸೇವೆಗಳನ್ನು ಪರಿಚಯಿಸಿದ್ದು, ಪ್ರಯಾಣಿಕರು ಫೀಡರ್ ಬಸ್‌ಗಳ ಸಮಯ, ಲೈವ್ ಟ್ರ್ಯಾಕಿಂಗ್ ಮತ್ತು ಮುಂತಾದವುಗಳ ಬಗ್ಗೆ ಮಾಹಿತಿಯನ್ನು ಪಡೆಯಲು ಮೆಟ್ರೋ ನಿಲ್ದಾಣದಲ್ಲಿನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬಹುದಾಗಿದೆ. ಕ್ಯೂಆರ್ ಕೋಡ್ ಸೇವೆ ಫೆಬ್ರವರಿ 19 ರಂದು ಲೈವ್ ಆಗಿದ್ದು, ಪ್ರತಿದಿನ 2,000-3,000 ಪ್ರಯಾಣಿಕರು ಇದನ್ನು ಬಳಸಲು ಪ್ರಾರಂಭಿಸಿದ್ದಾರೆ ಎಂದು ಬಿಎಂಟಿಸಿ ತಿಳಿಸಿದೆ.

40 ಮೆಟ್ರೋ ನಿಲ್ದಾಣಗಳಲ್ಲಿ ಕ್ಯೂಆರ್ ಕೋಡ್ ಸೇವೆಗಳನ್ನು ಪರಿಚಯಿಸಿದ್ದು, ಪ್ರಯಾಣಿಕರು ಫೀಡರ್ ಬಸ್‌ಗಳ ಸಮಯ, ಲೈವ್ ಟ್ರ್ಯಾಕಿಂಗ್ ಮತ್ತು ಮುಂತಾದವುಗಳ ಬಗ್ಗೆ ಮಾಹಿತಿಯನ್ನು ಪಡೆಯಲು ಸ್ಕ್ಯಾನ್ ಮಾಡಬಹುದು. BMTC 43 ಮೆಟ್ರೋ ನಿಲ್ದಾಣಗಳನ್ನು ಒಳಗೊಂಡ 46 ಫೀಡರ್ ಮಾರ್ಗಗಳಲ್ಲಿ 158 ಬಸ್‌ಗಳನ್ನು ನಿರ್ವಹಿಸುತ್ತದೆ. BMTC ಪ್ರಕಾರ ಪ್ರತಿದಿನ 90,000 ಮತ್ತು ಒಂದು ಲಕ್ಷ ಪ್ರಯಾಣಿಕರು ಫೀಡರ್ ಬಸ್ ಸೇವೆಯನ್ನು ಬಳಸುತ್ತಾರೆ.

ಬಳಸುವುದು ಹೇಗೆ?

QR ಕೋಡ್ ಅನ್ನು ಸ್ಕ್ಯಾನ್ ಮಾಡಿದ ನಂತರ, ಪ್ರಯಾಣಿಕರು ತಮ್ಮ ಮೆಟ್ರೋ ನಿಲ್ದಾಣವನ್ನು ಆಯ್ಕೆ ಮಾಡಬೇಕಾಗುತ್ತದೆ. ವೆಬ್ ಪುಟವು ಆ ನಿಲ್ದಾಣದಿಂದ ಲಭ್ಯವಿರುವ ಫೀಡರ್ ಬಸ್‌ಗಳು, ಅವುಗಳ ನಿರ್ಗಮನ ಸಮಯ, ನಕ್ಷೆ ಮತ್ತು ಲೈವ್ ಸ್ಥಳವನ್ನು ತೋರಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com