ಸಾಂದರ್ಭಿಕ ಚಿತ್ರ
ರಾಜ್ಯ
ಬಳ್ಳಾರಿ: ನಿಂತಿದ್ದ ಎತ್ತಿನ ಗಾಡಿಗೆ ಬೈಕ್ ಡಿಕ್ಕಿ: ಇಬ್ಬರು ಮಕ್ಕಳು ಸೇರಿ ಮೂವರ ದುರ್ಮರಣ
ಬಳ್ಳಾರಿ ಜಿಲ್ಲೆಯ ಹೊಸ ದರೋಜಿ ಸಮೀಪ ನಿಂತಿದ್ದ ಎತ್ತಿನ ಬಂಡಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ, ಇಬ್ಬರು ಮಕ್ಕಳು ಮೃತ ಪಟ್ಟಿರುವ ಘಟನೆ ನಡೆದಿದೆ.
ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಹೊಸ ದರೋಜಿ ಸಮೀಪ ನಿಂತಿದ್ದ ಎತ್ತಿನ ಬಂಡಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ, ಇಬ್ಬರು ಮಕ್ಕಳು ಮೃತ ಪಟ್ಟಿರುವ ಘಟನೆ ನಡೆದಿದೆ.
ಮೃತರನ್ನು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಜಂಬುನಾಥ ಹಳ್ಳಿಯ 45 ವರ್ಷದ ವೆಂಕಟೇಶ್, 8 ವರ್ಷದ ಆಶಾ ಮತ್ತು 6 ವರ್ಷದ ಅಖಿಲಾ ಎಂದು ಗುರುತಿಸಲಾಗಿದೆ.
ಬೈಕ್ ನಿಂತ ಎತ್ತಿನ ಬಂಡಿಗೆ ಡಿಕ್ಕಿ ಹೊಡೆದಿದ್ದರಿಂದ ಮೂವರು ಮೃತ ಪಟ್ಟಿದ್ದಾರೆ. ಜಂಬಕ್ಕ ಮತ್ತು ಸರಸ್ವತಿಗೆ ಗಾಯಗಳಾಗಿದ್ದು ವಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕುಡತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ