ಹೊಸ ವರ್ಷಾಚರಣೆಯ ಮೋಜು-ಮಸ್ತಿ: ಬೆಂಗಳೂರು ಕೇಂದ್ರ ಭಾಗದಲ್ಲಿ ಬರೋಬ್ಬರೀ 8 ಟನ್ ಕಸ ಸಂಗ್ರಹ!

2024ರ ಹೊಸ ವರ್ಷಾಚರಣೆಯಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬರೋಬ್ಬರಿ 8 ಸಾವಿರ ಕೆಜಿ ತ್ಯಾಜ್ಯವನ್ನು ಸಂಗ್ರಹಿಸಲಾಗಿದೆ. ಸಿವಿಕ್ ಬಾಡಿ ನಡೆಸುತ್ತಿರುವ ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಲಿಮಿಟೆಡ್ ಸೋಮವಾರ ನಗರದ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ ನಿಂದ 8 ಟನ್ ತ್ಯಾಜ್ಯವನ್ನು ಸಂಗ್ರಹಿಸಿದೆ ಎಂದು ಹೇಳಿದೆ.
ಕಸ ಸ್ವಚ್ಛಗೊಳಿಸುತ್ತಿರುವ ಬಿಬಿಎಂಪಿ ಸಿಬ್ಬಂದಿ
ಕಸ ಸ್ವಚ್ಛಗೊಳಿಸುತ್ತಿರುವ ಬಿಬಿಎಂಪಿ ಸಿಬ್ಬಂದಿ

ಬೆಂಗಳೂರು: 2024ರ ಹೊಸ ವರ್ಷಾಚರಣೆಯಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬರೋಬ್ಬರಿ 8 ಸಾವಿರ ಕೆಜಿ ತ್ಯಾಜ್ಯವನ್ನು ಸಂಗ್ರಹಿಸಲಾಗಿದೆ. ಸಿವಿಕ್ ಬಾಡಿ ನಡೆಸುತ್ತಿರುವ ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಲಿಮಿಟೆಡ್ ಸೋಮವಾರ ನಗರದ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ ನಿಂದ 8 ಟನ್ ತ್ಯಾಜ್ಯವನ್ನು ಸಂಗ್ರಹಿಸಿದೆ ಎಂದು ಹೇಳಿದೆ.

ಅಧಿಕಾರಿಗಳ ಪ್ರಕಾರ, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ರೆಸಿಡೆನ್ಸಿ ರಸ್ತೆ, ರಿಚ್ಮಂಡ್ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ ಮತ್ತು ಕಸ್ತೂರ್ಬಾ ರಸ್ತೆ ಸೇರಿದಂತೆ ಇತರೆಡೆಗಳಿಂದ ಅಪಾರ ಪ್ರಮಾಣದ ತ್ಯಾಜ್ಯ ಸಂಗ್ರಹವಾಗಿದೆ. ತ್ಯಾಜ್ಯ ಸಂಗ್ರಹಿಸಲು ಸುಮಾರು 80 ಪೌರ ಕಾರ್ಮಿಕರು, ಮೂವರು ಮೇಲ್ವಿಚಾರಕರು, ಒಂದು ಕಾಂಪ್ಯಾಕ್ಟರ್ ಮತ್ತು 7 ಆಟೋ ಟಿಪ್ಪರ್‌ಗಳನ್ನು ನಿಯೋಜಿಸಲಾಗಿತ್ತು.

80ಕ್ಕೂ ಹೆಚ್ಚು ಪೌರಕಾರ್ಮಿಕರು ಹಾಗೂ ಮೂವರು ಮೇಲ್ವಿಚಾರಕರು ಸೋಮವಾರ ಬೆಳಗಿನ ಜಾವ 3.30ಕ್ಕೆ ಸ್ವಚ್ಛತಾ ಕಾರ್ಯ ಆರಂಭಿಸಿ ಬೆಳಗ್ಗೆ 8 ಗಂಟೆ ಸುಮಾರಿಗೆ ಕೆಲಸ ಮುಗಿಸಿದರು. ಶಾಂತಿನಗರ ವಿಭಾಗದ ಘನತ್ಯಾಜ್ಯ ಇಲಾಖೆ ಕಾಮಗಾರಿ ನಿರ್ವಹಿಸಿದೆ.

ಬೆಳಗ್ಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ರಸ್ತೆಗಳಲ್ಲಿ ಟನ್‌ಗಟ್ಟಲೆ ತ್ಯಾಜ್ಯವನ್ನು ತೆರವುಗೊಳಿಸಲಾಯಿತು ಮತ್ತು ರಸ್ತೆಗಳನ್ನು ಸ್ವಚ್ಛಗೊಳಿಸಲಾಯಿತು. ಅಧಿಕಾರಿಗಳ ಪ್ರಕಾರ, ಒಂದು ತ್ಯಾಜ್ಯ ಸಂಗ್ರಹಿಸುವ ಕಾಂಪ್ಯಾಕ್ಟರ್ ಮತ್ತು ಏಳು ಆಟೋ ಟಿಪ್ಪರ್‌ಗಳನ್ನು ತ್ಯಾಜ್ಯ ಸಂಗ್ರಹಿಸಲು  ಬಳಕೆ ಮಾಡಲಾಗಿತ್ತು. ಪ್ಲಾಸ್ಟಿಕ್ ಕವರ್‌ಗಳು, ಪ್ಲಾಸ್ಟಿಕ್ ತ್ಯಾಜ್ಯಗಳು, ಚಪ್ಪಲಿಗಳು, ಗಾಜಿನ ಬಾಟಲಿಗಳು ಮತ್ತು ಇತರ ವಸ್ತುಗಳನ್ನು ರಸ್ತೆಗಳು ಮತ್ತು ಫುಟ್‌ಪಾತ್‌ಗಳಲ್ಲಿ ಎಸೆಯಲಾಯಿತು. ಸುಮಾರು ಎರಡು ಟನ್ ತ್ಯಾಜ್ಯವನ್ನು ಒಣ ತ್ಯಾಜ್ಯಕ್ಕೆ ಕಳುಹಿಸಲಾಗಿದೆ. ಬರೋಬ್ಬರಿ 8 ಟನ್ ಕಸ ಸಂಗ್ರಹಿಸಲಾಗಿದೆ.

ಹೊಸ ವರ್ಷಾಚರಣೆಗೆ ಸಂಬಂಧಿಸಿದಂತೆ ಬೆಂಗಳೂರಿನ ಪ್ರಮುಖ ಪ್ರದೇಶಗಳ ರಸ್ತೆಗಳಲ್ಲಿ ಡಸ್ಟ್‍ಬಿನ್‍ಗಳನ್ನು ಇರಿಸಲಾಗಿತ್ತು. ಆದರೆ ಹೊಸ ವರ್ಷವನ್ನು ಆಚರಿಸಲು ಸೇರಿದ್ದ ಲಕ್ಷಾಂತರ ಜನರು ಡಸ್ಟ್‍ಬಿನ್‍ಗಳಲ್ಲಿ ತ್ಯಾಜ್ಯವನ್ನು ಹಾಕದೆ ರಸ್ತೆಯಲ್ಲಿಯೇ ಹಾಕಿದ್ದಾರೆ. ಬಹುತೇಕ ವಿದ್ಯಾವಂತರು ಅನಿಸಿಕೊಂಡವರೇ ಈ ರೀತಿ ವರ್ತಿಸಿದ್ದಾರೆ. ಕಸದ ತೊಟ್ಟಿಗಳಲ್ಲಿ ಹಾಕದೆ ಹೊರಗಡೆ ತ್ಯಾಜ್ಯವನ್ನು ಎಸೆಯಲಾಗಿದೆ. ನಾವು ತ್ಯಾಜ್ಯವನ್ನು ಸಂಗ್ರಹಿಸದೇ ಇದ್ದಿದ್ದರೆ ಸೋಮವಾರ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿತ್ತು ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com