ರಾಜ್ಯದ ಶೇ 54ರಷ್ಟು ಕುಟುಂಬಗಳಲ್ಲಿ ಕನಿಷ್ಠ ಒಬ್ಬರಲ್ಲಿ ಕೋವಿಡ್ ಸೋಂಕು ಇದೆ!

ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜ್ಯದ ಶೇ 54ರಷ್ಟು ಕುಟುಂಬಗಳ ಕನಿಷ್ಠ ಒಬ್ಬರು ಕೋವಿಡ್​​ನಿಂದ ಬಳಲುತ್ತಿದ್ದಾರೆ ಎಂದು ಸಮೀಕ್ಷಾ ವರದಿಯೊಂದು ತಿಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜ್ಯದ ಶೇ 54ರಷ್ಟು ಕುಟುಂಬಗಳ ಕನಿಷ್ಠ ಒಬ್ಬರು ಕೋವಿಡ್​​ನಿಂದ ಬಳಲುತ್ತಿದ್ದಾರೆ ಎಂದು ಸಮೀಕ್ಷಾ ವರದಿಯೊಂದು ತಿಳಿಸಿದೆ.

ರಾಜ್ಯದ ಹೆಚ್ಚಿನ ಕುಟುಂಬಗಳಲ್ಲಿ ಒಬ್ಬರು ಅಥವಾ ಅದಕ್ಕಿಂತ ಹೆಚ್ಚು ಮಂದಿ ಕೋವಿಡ್ ಅಥವಾ ಇತರ ವೈರಲ್, ಜ್ವರದಂತಹ ರೋಗಲಕ್ಷಣ ಹೊಂದಿದ್ದಾರೆ ಎಂದು ಲೋಕಲ್ ಸರ್ಕಲ್ಸ್ ಸಮೀಕ್ಷೆ ತಿಳಿಸಿದೆ.

ಕೋವಿಡ್/ ಫ್ಲೂ /ವೈರಲ್ ಜ್ವರದ ಲಕ್ಷಣಗಳಾದ ಮೂಗು ಸ್ರವಿಸುವಿಕೆ, ಗಂಟಲು ನೋವು, ಕೆಮ್ಮು, ತಲೆನೋವು, ಕೀಲು ನೋವು, ದೇಹ ನೋವು, ಉಸಿರಾಟದ ಸಮಸ್ಯೆಗಳನ್ನು ಕುಟುಂಬದ ಸದಸ್ಯರು ಹೊಂದಿರುವುದಾಗಿ ಎಂದು ವರದಿಯಲ್ಲಿ ಹೇಳಿದೆ.

ಸಮೀಕ್ಷೆಯಲ್ಲಿ ಒಟ್ಟು 3,000 ಮಂದಿ ಭಾಗವಹಿಸಿದ್ದು, ಈ ಪೈಕಿ ಶೇ.62 ಪುರುಷರು ಮತ್ತು ಶೇ.38 ರಷ್ಟು ಮಂದಿ ಮಹಿಳೆಯರು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.  ಶೇ 23 ರಷ್ಟು ಜನರು ತಮ್ಮ ಮನೆಯಲ್ಲಿ ಮನೆಯಲ್ಲಿ ‘ನಾಲ್ಕು ಮಂದಿ ಅಥವಾ ಅದಕ್ಕಿಂತಲೂ ಹೆಚ್ಚಿನ ಜನರಲ್ಲಿ  ಕೋವಿಡ್ / ವೈರಲ್ ಜ್ವರ ಲಕ್ಷಣಗಳನ್ನು ಹೊಂದಿದ್ದಾರೆ ಎಂದು ತಿಳಿಸಿದ್ದಾರೆಂದು ವರದಿಯಲ್ಲಿ ತಿಳಿಸಿದೆ.

ಕೊರೊನಾ ವೈರಸ್​​ನ ಒಮಿಕ್ರಾನ್ ರೂಪಾಂತರ ಜೆಎನ್​.1 ಹರಡುವಿಕೆ ತೀವ್ರಗೊಂಡ ಬೆನ್ನಲ್ಲೇ ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com