ಜಿ. ಸತ್ಯವತಿ ಎತ್ತಂಗಡಿ: ಬಿಎಂಟಿಸಿ ನೂತನ ಎಂಡಿಯಾಗಿ‌ ರಾಮಚಂದ್ರನ್ ನೇಮಕ

ಬೆಂಗಳೂರು ಮಹಾನಗರ ಸಾರಿಗೆ ಎಂಡಿಯಾಗಿದ್ದ ಹಿರಿಯ ಐಎಎಸ್‌ ಅಧಿಕಾರಿ ಜಿ.ಸತ್ಯವತಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಒಂದೂವರೆ ವರ್ಷದಿಂದ ನಿಗಮದ ಎಂಡಿಯಾಗಿದ್ದ ಸತ್ಯವತಿ ಅವರಿಗೆ ಯಾವುದೇ ಹುದ್ದೆ ತೋರಿಸದೇ ವರ್ಗ ಮಾಡಲಾಗಿದೆ.
ರಾಮಚಂದ್ರನ್
ರಾಮಚಂದ್ರನ್
Updated on

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಎಂಡಿಯಾಗಿದ್ದ ಹಿರಿಯ ಐಎಎಸ್‌ ಅಧಿಕಾರಿ ಜಿ.ಸತ್ಯವತಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಒಂದೂವರೆ ವರ್ಷದಿಂದ ನಿಗಮದ ಎಂಡಿಯಾಗಿದ್ದ ಸತ್ಯವತಿ ಅವರಿಗೆ ಯಾವುದೇ ಹುದ್ದೆ ತೋರಿಸದೇ ವರ್ಗ ಮಾಡಲಾಗಿದೆ. ಅವರ ಜಾಗಕ್ಕೆ ಮತ್ತೊಬ್ಬ ಐಎಎಸ್‌ ಅಧಿಕಾರಿ ಸದ್ಯ ಬಿಬಿಎಂಪಿಯಲ್ಲಿ ವಿಶೇಷ ಆರ್ಥಿಕ ಆಯುಕ್ತರಾಗಿರುವ ಆರ್.ರಾಮಚಂದ್ರನ್‌ ಅವರನ್ನು ನೇಮಿಸಲಾಗಿದೆ.

ಸತ್ಯವತಿ ವಿರುದ್ಧ ಸಾರಿಗೆ ಸಚಿವರಿಗೆ ಸಾಕಷ್ಟು ದೂರು ಬಂದಿತ್ತು. ಹೀಗಾಗಿ ಜಿ.ಸತ್ಯವತಿರನ್ನು ವರ್ಗಾವಣೆ ಮಾಡುವಂತೆ ಸಚಿವರಿಗೆ ಕೆಎಸ್‌ಆರ್‌ಟಿಸಿ ಸ್ಟಾಪ್ ಆ್ಯಂಡ್ ವರ್ಕರ್ಸ್ ಫೆಡರೇಶನ್ ಮನವಿ ಮಾಡಿತ್ತು. ಈ ಆಧಾರದ ಮೇಲೆ ರಾಜ್ಯ ಸರ್ಕಾರ ಸತ್ಯವತಿ ಅವರಿಗೆ ಯಾವುದೇ ಹುದ್ದೆ ನೀಡದೆ ವರ್ಗಾವಣೆ ಮಾಡಿದೆ ಎಂದು ತಿಳಿದುಬಂದಿದೆ.

ಯಾವುದೇ ಹುದ್ದೆ ನೀಡದೇ ಸತ್ಯವತಿಯನ್ನ ವರ್ಗಾವಣೆ ಮಾಡಿದ ಸರ್ಕಾರ, ಬಿಎಂಟಿಸಿಯ ನೂತನ ಎಂಡಿಯಾಗಿ ರಾಮಚಂದ್ರನ್ ಆರ್ ಅವರನ್ನು ನೇಮಕ ಮಾಡಿದೆ. ರಾಮಚಂದ್ರನ್ ಅವರು ಈ ಹಿಂದೆ ಬಿಬಿಎಂಪಿ ವಿಶೇಷ ಆಯುಕ್ತರಾಗಿ (ಚುನಾವಣಾ) ಕರ್ತವ್ಯ ನಿರ್ವಹಿಸುತ್ತಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com