ಸ್ವಚ್ಛ ಭಾರತ ಸರ್ವೇಕ್ಷಣೆ: 125ನೇ ಸ್ಥಾನಕ್ಕೆ ಇಳಿದ ಬೆಂಗಳೂರು ನಗರ

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಬಿಡುಗಡೆ ಮಾಡಿದ ಅಖಿಲ ಭಾರತ ಸ್ವಚ್ಛ ಸರ್ವೇಕ್ಷಣಾ 2023 ವರದಿಯಲ್ಲಿ ಬೆಂಗಳೂರು 125 ನೇ ಸ್ಥಾನದಲ್ಲಿದೆ. ಒಟ್ಟಾರೆಯಾಗಿ, ಒಂದು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ನಗರಗಳ ಸ್ವಚ್ಛತೆ ಸ್ಪರ್ಧೆಯಲ್ಲಿ 446 ನಗರಗಳು ಭಾಗವಹಿಸಿದ್ದವು.
ಬೆಂಗಳೂರಿನ ರಸ್ತೆಬದಿಯಲ್ಲಿ ಕಸದ ರಾಶಿ ಹಾಕಿರುವುದು
ಬೆಂಗಳೂರಿನ ರಸ್ತೆಬದಿಯಲ್ಲಿ ಕಸದ ರಾಶಿ ಹಾಕಿರುವುದು

ಬೆಂಗಳೂರು: ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಬಿಡುಗಡೆ ಮಾಡಿದ ಅಖಿಲ ಭಾರತ ಸ್ವಚ್ಛ ಸರ್ವೇಕ್ಷಣಾ 2023 ವರದಿಯಲ್ಲಿ ಬೆಂಗಳೂರು 125 ನೇ ಸ್ಥಾನದಲ್ಲಿದೆ. ಒಟ್ಟಾರೆಯಾಗಿ, ಒಂದು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ನಗರಗಳ ಸ್ವಚ್ಛತೆ ಸ್ಪರ್ಧೆಯಲ್ಲಿ 446 ನಗರಗಳು ಭಾಗವಹಿಸಿದ್ದವು. 2022 ರ ಸ್ವಚ್ಛ ಸರ್ವೇಕ್ಷಣ ಶ್ರೇಯಾಂಕದಲ್ಲಿ, ನಗರವು 43ನೇ ಸ್ಥಾನದಲ್ಲಿತ್ತು. 2021ರಲ್ಲಿ 28ನೇ ಮತ್ತು 2020ರಲ್ಲಿ 37ನೇ ಸ್ಥಾನದಲ್ಲಿತ್ತು.

ಸ್ವಚ್ಛ ಸರ್ವೇಕ್ಷಣ 2023ರ ವರದಿಯ ಪ್ರಕಾರ, ಕರ್ನಾಟಕದ ಒಂದು ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಜನಸಂಖ್ಯೆಯ ವರ್ಗದಲ್ಲಿರುವ 25 ನಗರಗಳಲ್ಲಿ, ಬಿಬಿಎಂಪಿ ಮೂರನೇ ಸ್ಥಾನದಲ್ಲಿದೆ. ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಮೈಸೂರು ಮತ್ತು ಹುಬ್ಬಳ್ಳಿ-ಧಾರವಾಡ ನಗರಗಳು ಪಡೆದುಕೊಂಡಿವೆ.

ವರದಿಯ ಪ್ರಕಾರ, ಮೂಲದಲ್ಲಿ ತ್ಯಾಜ್ಯವನ್ನು ಬೇರ್ಪಡಿಸುವ ವಿಭಾಗದಲ್ಲಿ ಬೆಂಗಳೂರು ಶೇಕಡಾ 99ರಷ್ಟು ಸಾಧಿಸಿದೆ. ಆದರೆ ತ್ಯಾಜ್ಯ ವಿಲೇವಾರಿ ಪರಿಹಾರದಲ್ಲಿ ಶೂನ್ಯ ಸಾಧನೆ ಮಾಡಿದೆ. ನಗರವು ಸೇವಾ ಮಟ್ಟದ ಪ್ರಗತಿ ವಿಭಾಗದಲ್ಲಿ 4,830 ಅಂಕಗಳಿಗೆ 2,805.32 ಅಂಕಗಳು, ಪ್ರಮಾಣೀಕರಣ ವಿಭಾಗದಲ್ಲಿ 2,500ರಲ್ಲಿ 1,125 ಮತ್ತು ನಾಗರಿಕರ ಧ್ವನಿ ವಿಭಾಗದಲ್ಲಿ 2,170 ರಲ್ಲಿ 1,589.82 ಅಂಕಗಳನ್ನು ಗಳಿಸಿದೆ.

ಮೊದಲು ಎಲ್ಲಾ ನಗರಗಳು, ಒಂದು ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ನಗರಗಳನ್ನು ಸಹ ಒಂದು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯ ವರ್ಗದ ಅಡಿಯಲ್ಲಿ ಒಟ್ಟಿಗೆ ಸೇರಿಸಲಾಗುತ್ತಿತ್ತು. ಆದರೆ ಈಗ ವರ್ಗಾವಣೆ ವಿಧಾನ ಬದಲಾಗಿದೆ. ಹೀಗಾಗಿ ಕಳೆದ ವರ್ಷ ಬಿಬಿಎಂಪಿ ಉತ್ತಮ ಸ್ಥಾನದಲ್ಲಿತ್ತು.

ಈ ವರ್ಷ, ಅವರು ಮತ್ತೆ ಹಳೆಯ ಸ್ವರೂಪಕ್ಕೆ ಮರಳಿದ್ದಾರೆ. ಆದ್ದರಿಂದ, ನಾವು ಕಡಿಮೆ ಸ್ಥಾನ ಪಡೆದಿದ್ದೇವೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ), ಹರೀಶ್ ಕುಮಾರ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು. 

ಬಿಬಿಎಂಪಿಯ ಕಾರ್ಯಕ್ಷಮತೆ ರಾಜ್ಯದಲ್ಲಿ ಉನ್ನತ ಮಟ್ಟದಲ್ಲಿದೆ. ಕಸ ಮುಕ್ತ ವಿಭಾಗದಲ್ಲಿ ಸ್ಟಾರ್ ರೇಟಿಂಗ್ ಹೊರತುಪಡಿಸಿ ರಾಷ್ಟ್ರೀಯ ಸರಾಸರಿ ಅಂಕಗಳನ್ನು ಒಳಗೊಳ್ಳುತ್ತವೆ. ಬಿಬಿಎಂಪಿ ಪ್ರಮಾಣೀಕರಣದ ಪ್ಯಾರಾಮೀಟರ್‌ನಲ್ಲಿ ಬಯಲು ಶೌಚ ಮುಕ್ತ (ODF)++ ನಿಂದ ವಾಟರ್ ಪ್ಲಸ್ ಸಿಟಿಗೆ ಅಪ್‌ಗ್ರೇಡ್ ಮಾಡಿದೆ. ಇದು ಗಮನಾರ್ಹ ವಿಷಯವಾಗಿದೆ. ದ್ರವ ತ್ಯಾಜ್ಯ ನಿರ್ವಹಣೆಯಲ್ಲೂ ಉತ್ತಮ ಸಾಧನೆ ಮಾಡಿದ್ದೇವೆ. ನಾಗರಿಕರ ಧ್ವನಿ ವಿಭಾಗದಲ್ಲಿ ಕಳೆದ ವರ್ಷ ಶೇಕಡಾ 43ರಿಂದ ಶೇಕಡಾ 30ಕ್ಕೆ ಜಿಗತ ಕಂಡಿದೆ. 

ಈಗ ದ್ರವ ತ್ಯಾಜ್ಯ ನಿರ್ವಹಣೆಯನ್ನು ಗುರಿಯಾಗಿಸಲಾಗುತ್ತಿದೆ ಎಂದು ಕುಮಾರ್ ಹೇಳಿದರು. ರಾಜ್ಯ ಸರ್ಕಾರವು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಕೆಲಸ ಮಾಡುತ್ತಿದೆ ಮತ್ತು ನಗರವನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com