ಜ.17 ಇಂಡಿಯಾ-ಅಫ್ಘಾನಿಸ್ತಾನ ಟಿ20 ಕ್ರಿಕೆಟ್​​: ಬಿಎಂಟಿಸಿಯಿಂದ ಹೆಚ್ಚುವರಿ ಬಸ್​​ ವ್ಯವಸ್ಥೆ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜನವರಿ 17 ರಂದು ಭಾರತ ಹಾಗೂ ಅಫ್ಘಾನಿಸ್ತಾನ ಟಿ20 ಹೊನಲು ಬೆಳಕಿನ ಪಂದ್ಯ ನಡೆಯಲಿದ್ದು. ಈ ಪಂದ್ಯ ವೀಕ್ಷಣೆಗೆ ಭಾಗವಹಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಬಿಎಂಟಿಸಿ ಹೆಚ್ಚುವರಿ ಬಸ್​ ಸೇವೆಯನ್ನು ಒದಗಿಸಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜನವರಿ 17 ರಂದು ಭಾರತ ಹಾಗೂ ಅಫ್ಘಾನಿಸ್ತಾನ ಟಿ20 ಹೊನಲು ಬೆಳಕಿನ ಪಂದ್ಯ ನಡೆಯಲಿದ್ದು. ಈ ಪಂದ್ಯ ವೀಕ್ಷಣೆಗೆ ಭಾಗವಹಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಬಿಎಂಟಿಸಿ ಹೆಚ್ಚುವರಿ ಬಸ್​ ಸೇವೆಯನ್ನು ಒದಗಿಸಲಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಿಂದ ನಗರದ 12 ಕಡೆಗಳಿಗೆ ಹೆಚ್ಚುವರಿ ಬಸ್​​​ ಕಾರ್ಯಾಚರಣೆ ನಡೆಸಲಿವೆ. ಚಿನ್ನಸ್ವಾಮಿ ಕ್ರೀಡಾಂಗಣದಿಂದ ಕಾಡುಗೋಡಿ, ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್​,​ ಕೆಂಗೇರಿ, ನೆಲಮಂಗಲ, ಯಲಹಂಕ 5ನೇ ಹಂತ 5ನೇ ಹಂತ, ಬಾಗಲೂರು, ಹೊಸಕೋಟೆಗೆ ಹೆಚ್ಚಿನ ಬಸ್ ವ್ಯವಸ್ಥೆ ಮಾಡಲಾಗಿದೆ.

ಮಾರ್ಗಸಂಖ್ಯೆ ಎಸ್‍ಬಿಎಸ್ -1ಕೆ ಬಸ್ ಎಚ್‍ಎಎಲ್ ಮಾರ್ಗವಾಗಿ ಕಾಡುಕೋಡಿ ತಲುಪಲಿದೆ. ಎಸ್‍ಬಿಎಸ್-13ಕೆ ನಂಬರಿನ ಬಸ್ ಹೂಡಿ ಮಾರ್ಗವಾಗಿ ಕಾಡುಗೋಡಿ ಬಸ್ ನಿಲ್ದಾಣ ತಲುಪಲಿದೆ. ಜಿ-2 ಬಸ್ ಅಗರ, ದೊಮ್ಮಸಂದ್ರ ಮಾರ್ಗವಾಗಿ ಸರ್ಜಾಪುರ, ಜಿ-3ಬಸ್ ಹೊಸೂರು ರಸ್ತೆ ಮಾರ್ಗವಾಗಿ ಎಲೆಕ್ಟ್ರಾನಿಕ್ ಸಿಟಿ, ಜಿ-4 ಜಯದೇವ ಆಸ್ಪತ್ರೆ ಮಾರ್ಗವಾಗಿ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ತಲುಪಲಿದೆ ಎಂದು ಬಿಎಂಟಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com