ನಾಮಫಲಕಗಳಲ್ಲಿ ಬೆಳಗಾಂವ, ಬೆಳಗಾಮ್ ಬೇಡ; ಬೆಳಗಾವಿ ಬಳಸಿ: ಸರ್ಕಾರದ ಆದೇಶ ಬೆನ್ನಲ್ಲೇ ಅಂಗಡಿಗಳಿಗೆ ಪಾಲಿಕೆ ನೋಟಿಸ್!

ಬೆಳಗಾವಿ ಮಹಾನಗರದ ಎಲ್ಲ ಅಂಗಡಿ/ಮುಗ್ಗಟ್ಟುಗಳ ನಾಮಫಲಕಗಳಲ್ಲಿ ಶೇ60 ರಷ್ಟು ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು. ಜೊತೆಗೆ ವಿಳಾಸದಲ್ಲಿ ಬೆಳಗಾಂವ, ಬೆಳಗಾಮ್ ಅಲ್ಲದೆ, ಬೆಳಗಾವಿ ಎಂದು ನಮೋದಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದ್ದು, ಇದರ ಬೆನ್ನಲ್ಲೇ ಬೆಳಗಾವಿ ಮಹಾನಗರ ಪಾಲಿಕೆಯು ಸುಮಾರು 2000 ಅಂಗಡಿಗಳಿಗೆ ನೋಟಿಸ್ ಜಾರಿ ಮಾಡಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಬೆಳಗಾವಿ ಮಹಾನಗರದ ಎಲ್ಲ ಅಂಗಡಿ/ಮುಗ್ಗಟ್ಟುಗಳ ನಾಮಫಲಕಗಳಲ್ಲಿ ಶೇ60 ರಷ್ಟು ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು. ಜೊತೆಗೆ ವಿಳಾಸದಲ್ಲಿ ಬೆಳಗಾಂವ, ಬೆಳಗಾಮ್ ಅಲ್ಲದೆ, ಬೆಳಗಾವಿ ಎಂದು ನಮೋದಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದ್ದು, ಇದರ ಬೆನ್ನಲ್ಲೇ ಬೆಳಗಾವಿ ಮಹಾನಗರ ಪಾಲಿಕೆಯು ಸುಮಾರು 2000 ಅಂಗಡಿಗಳಿಗೆ ನೋಟಿಸ್ ಜಾರಿ ಮಾಡಿದೆ ಎಂದು ತಿಳಿದುಬಂದಿದೆ.

ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರು ಎರಡು ಸಾವಿರ ಅಂಗಡಿಗಳಿಗೆ ನೋಟಿಸ್ ನೀಡಿದ್ದಾರೆ. ನಗರದ ಕೆಲವು ಅಂಗಡಿ ಮಾಲಿಕರು ಬೆಳಗಾವಿ ಬದಲು ಬೆಳಗಾಂವ, ಬೆಳಗಾಂ ಎಂದು ನಾಮಫಲಕಗಳಲ್ಲಿ ಬರೆಸಿದ್ದು, ಈ ಹಿನ್ನೆಲೆಯಲ್ಲಿ ಆಯಕ್ತರು ನೋಟಿಸ್​ ಜಾರಿ ಮಾಡಿದ್ದಾರೆ.

ನಾಮಫಲಕಗಳನ್ನು ಶೇಕಡಾ 60 ರಷ್ಟು ಬಳಸಬೇಕೆಂದು ಸರ್ಕಾರ ಹೇಳಿದ ಬೆನ್ನಲ್ಲೇ ಆಯಕ್ತರು ಬೆಳ್ಳಂಬೆಳಿಗ್ಗೆ ನಗರ ಸಂಚಾರ ಕೈಗೊಂಡರು. ಈ ವೇಳೆ ನಗರದ ಹಲವು ಅಂಗಡಿಗಳಲ್ಲಿ ಕನ್ನಡ ಬಳಕೆ ತೀರ ವಿರಳವಾಗಿತ್ತು. ಮತ್ತು ವಿಳಾಸದ ಸ್ಥಳದಲ್ಲಿ ಬೆಳಗಾಂವ, ಬೆಳಗಾಮ್​ ಎಂದು ಬರೆಸಿರುವುದು ಕಂಡು ಬಂದಿತ್ತು. ಇದನ್ನು ಮನಗಂಡ ಆಯುಕ್ತರು ಅಂಗಡಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ರಾಜ್ಯ ಸರ್ಕಾರ ನಗರಪಾಲಿಕೆ/ಜಿಲ್ಲೆಯಾದ್ಯಂತ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಗಡಿ/ಮುಂಗಟ್ಟುಗಳು/ವಾಣಿಜ್ಯ ಸಂಕಿರ್ಣಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಭಾಗವನ್ನು ಕನ್ನಡವನ್ನು ಬಳಸತಕ್ಕದ್ದು. ಜೊತೆಗೆ ವಿಳಾಸದಲ್ಲಿ “ಬೆಳಗಾವಿ” ಎಂದು ನಮೂದಿಸಬೇಕಾಗಿರುತ್ತದೆ. ಆದರೆ ಪಾಲಿಕೆ ವ್ಯಾಪ್ತಿಯಲ್ಲಿ ಹಲವು ಉದ್ದಿಮೆದಾರರು ತಮ್ಮ ಉದ್ದಿಮೆಯ ನಾಮಫಲಕದಲ್ಲಿ ಬೆಳಗಾಂವ ಅಥವಾ ಬೆಳಗಾಮ್ ಎಂದು ನಮೂದಿಸಿದ್ದು. ಶೇ.50 ರಷ್ಟು ಭಾಗವನ್ನು ಕನ್ನಡ ಭಾಷೆಗೆ ಪ್ರಥಮಾಧ್ಯತೆ ನೀಡದೇ ನಾಮಫಲಕವನ್ನು ಉಪಯೋಸುತ್ತಿರುವುದು ಕಂಡುಬಂದಿದೆ.

ಇಂತಹ ಉದ್ದಿಮೆದಾರರಿಗೆ ನೀಡಿದ ಪರವಾನಿಗೆಯನ್ನು ರದ್ದುಗೊಳಿಸಿ ಅಂಗಡಿಯನ್ನು ಬಂದ್​ ಅಥವಾ ಸೀಲ್ ಮಾಡಲಾಗುದು ಎಂದು ನೋಟಿಸ್ ನಲ್ಲಿ ಎಚ್ಚರಿಸಿದ್ದಾರೆ.

ಆದೇಶ ಪ್ರತ್ರದಲ್ಲಿ ಏನಿದೆ?
ರಾಜ್ಯ ಸರ್ಕಾರ ನಗರಪಾಲಿಕೆ/ಜಿಲ್ಲೆಯಾದ್ಯಂತ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಗಡಿ/ಮುಂಗಟ್ಟುಗಳು/ವಾಣಿಜ್ಯ ಸಂಕಿರ್ಣಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಭಾಗವನ್ನು ಕನ್ನಡವನ್ನು ಬಳಸತಕ್ಕದ್ದು ಎಂದು ನಿರ್ದೇಶಿಸಿದೆ. ಜೊತೆಗೆ ವಿಳಾಸದಲ್ಲಿ “ಬೆಳಗಾವಿ” ಎಂದು ನಮೂದಿಸಬೇಕಾಗಿರುತ್ತದೆ. ಆದರೆ ಪಾಲಿಕೆ ವ್ಯಾಪ್ತಿಯಲ್ಲಿ ಹಲವು ಉದ್ದಿಮೆದಾರರು ತಮ್ಮ ಉದ್ದಿಮೆಯ ನಾಮಫಲಕದಲ್ಲಿ ಬೆಳಗಾಂವ ಅಥವಾ ಬೆಳಗಾಮ್ ಎಂದು ನಮೂದಿಸಿದ್ದು ಹಾಗೂ ಶೇ.50 ರಷ್ಟು ಭಾಗವನ್ನು ಕನ್ನಡ ಭಾಷೆಗೆ ಪ್ರಥಮಾಧ್ಯತೆ ನೀಡದೇ ನಾಮಫಲಕವನ್ನು ಉಪಯೋಸುತ್ತಿದ್ದು ಕಂಡುಬಂದಿದೆ.

ಇಂತಹ ಉದ್ದಿಮೆದಾರರಿಗೆ ನೀಡಿದ ಪರವಾನಿಗೆಯನ್ನು ರದ್ದುಗೊಳಿಸಿ ಅಂಗಡಿಯನ್ನು ಬಂದ್​ ಅಥವಾ ಸೀಲ್ ಮಾಡಲಾಗುವುದು ಎಂದು ಆದೇಶ ಹೊರಡಿಸಿದ್ದಾರೆ.

ಶಿವಸೇನೆ ಆಕ್ರೋಶ
ಈ ನಡುವೆ ಬೆಳಗಾವಿಯ ಅಂಗಡಿಗಳ ನಾಮಫಲಕದಲ್ಲಿ ಕನ್ನಡ ಕಡ್ಡಾಯಗೊಳಿಸುತ್ತಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಶಿವಸೇನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಶಿವಸೇನೆ (ಉದ್ಧವ್ ಠಾಕ್ರೆ) ಕಾರ್ಯಕರ್ತರು ಶುಕ್ರವಾರ ಮಹಾರಾಷ್ಟ್ರದ ಕೊಲ್ಲಾಪುರದ ಕನ್ನೇರಿ ಮಠದ ಬಳಿ ಅಳವಡಿಸಲಾಗಿದ್ದ ಕನ್ನಡ ನಾಮಫಲಕವನ್ನು ಕಿತ್ತು ಹಾಕಿ, ಬೆಂಕಿ ಹಚ್ಚಿ ಉದ್ಧಟತನ ಪ್ರದರ್ಶಿಸಿದ್ದಾರೆ.

ಕೊಲ್ಲಾಪುರದ ಗೋಕುಲ, ಶಿರಗಾಂವ ಪ್ರದೇಶಗಳಲ್ಲಿ ಕೆಲ ಶಿವಸೇನೆ ಕಾರ್ಯಕರ್ತರು ಕನ್ನಡ ನಾಮಫಲಕಗಳ ಕಿತ್ತೆಸೆದು ಉದ್ಧಟತನ ಪ್ರದರ್ಶಿಸಿದ್ದಾರೆ. ಶಿವಸೇನೆ ಮುಖಂಡ ಕೊಲ್ಲಾಪುರದ ಸಂಜಯ್ ಪವಾರ್ ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದರು ಎಂದು ತಿಳಿದುಬಂದಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿವಸೇನೆಯ (ಉದ್ಧವ್ ಠಾಕ್ರೆ) ಕಾರ್ಯಕರ್ತರು, ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಇನ್ನೂ ನ್ಯಾಯಾಲಯದ ಅಂಗಳದಲ್ಲಿದೆ. ಬೆಳಗಾವಿಯ ವಿವಾದಿತ ಪ್ರದೇಶ ಯಾವಾಗ ಬೇಕಾದರೂ ಮಹಾರಾಷ್ಟ್ರದೊಂದಿಗೆ ವಿಲೀನವಾಗಬಹುದು. ಹೀಗಾಗಿ ಪ್ರದೇಶದಲ್ಲಿ ಕನ್ನಡ ನಾಮಫಲಕಗಳನ್ನು ಕಡ್ಡಾಯಗೊಳಿಸಬಾರದು ಎಂದು ಹೇಳಿದ್ದಾರೆ.

ಈ ನಡುವೆ ತಮ್ಮ ಸರ್ಕಾರದ ನಡೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮರ್ಥಿಸಿಕೊಂಡಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರೂ ಕೂಡ ಸರ್ಕಾರದ ನಡೆಯಲ್ಲಿ ಯಾವುದೇ ತಪ್ಪಿಲ್ಲ. ಅಂಗಡಿ, ವಾಣಿಜ್ಯ ಸಂಸ್ಥೆಗಳ ಮಾಲೀಕರು ನಾಮಫಲಕಗಳಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com