ಅಯೋಧ್ಯೆ ರಾಮಮಂದಿರವನ್ನು ರಾಜಕೀಯ ಜೂಜಾಟಕ್ಕೆ ಬಳಸಬಾರದು: ದೇವನೂರು ಮಹಾದೇವ

ದೇಶದ ಹಳ್ಳಿ ಹಳ್ಳಿಯಲ್ಲಿರುವ ರಾಮ ಮಂದಿರಗಳು ಸಾಮಾನ್ಯವಾಗಿ ಜೂಜಾಟದ ಕೇಂದ್ರಗಳಾದಿಜ್ಜು. ಅಯೋಧ್ಯೆಯಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ರಾಮಮಂದಿರವೂ ಜೂಜಾಟದ ಕೇಂದ್ರವಾಗಬಾರದು ಎಂದು ಹಿರಿಯ  ಸಾಹಿತಿ ದೇವನೂರ ಮಹಾದೇವ ಅವರು ಹೇಳಿದರು.
ಸಾಹಿತಿ ದೇವನೂರ ಮಹಾದೇವ
ಸಾಹಿತಿ ದೇವನೂರ ಮಹಾದೇವ

ಮೈಸೂರು: ದೇಶದ ಹಳ್ಳಿ ಹಳ್ಳಿಯಲ್ಲಿರುವ ರಾಮ ಮಂದಿರಗಳು ಸಾಮಾನ್ಯವಾಗಿ ಜೂಜಾಟದ ಕೇಂದ್ರಗಳಾದಿಜ್ಜು. ಅಯೋಧ್ಯೆಯಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ರಾಮಮಂದಿರವೂ ಜೂಜಾಟದ ಕೇಂದ್ರವಾಗಬಾರದು ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಹೇಳಿದರು.

ಶ್ರಮಣ ಸಂಸ್ಕೃತಿ ಟ್ರಸ್ಟ್ ಮತ್ತು ಬಯಲು ಬಳಗ ಸಹಯೋಗದಲ್ಲಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್  ರಾಜ್ ಸಂಸ್ಥೆಯಲ್ಲಿ ನಡೆದ 90ರ ನಂತರದ ಕರ್ನಾಟಕ ರಾಜ್ಯ ಮಟ್ಟದ ವಿಚಾರ ಕಮ್ಮಟ 2ನೇ ದಿನದ ಗೋಷ್ಠಿಯಲ್ಲಿ ಮಾತನಾಡಿದ ಅವರು,  ಭಾರತರ ನಿರ್ಣಾಯಕ ಲೋಕಸಭಾ ಚುನಾವಣೆ ನಮ್ಮ ಮುಂದಿದೆ. ನಮ್ಮ ಬುಡಕಟ್ಟು ಜನಾಂಗದವರು ದೇವರನ್ನು ಮೌಲ್ಯಮಾಪನಕ್ಕೆ ಒಳಪಡಿಸುವಂತೆ ನಾವು ಕೂಡ 2024ನೇಯ ಲೋಕಸಭೆಯ ಸಂಸತ್ ಸದಸ್ಯರನ್ನು ಮೌಲ್ಯಮಾಪನ ಮಾಡಿ ಆಯ್ಕೆ ಮಾಡಬೇಕು ಎಂದು ಹೇಳಿದರು.

“ಛತ್ತೀಸ್‌ಗಡದಲ್ಲಿ ಆದಿವಾಸಿ ಜನಾಂಗದವರು ದೇವರುಗಳನ್ನೇ ಮೌಲ್ಯಮಾಪನ ಮಾಡುತ್ತಾರೆ. ನಾವು ಮನುಷ್ಯರನ್ನು ಮೌಲ್ಯಮಾಪನ ಮಾಡುತ್ತಿಲ್ಲ. ಹೀಗಾಗಿ, ಮೌಲ್ಯಮಾಪನದ ಸತ್ವವನ್ನು ನಮ್ಮ ಪೂರ್ವಜರಿಂದ ಕಲಿಯಬೇಕಿದೆ. ಮುಂದಿನ ಚುನಾವಣೆಯಲ್ಲಿ ನಾವೆಲ್ಲ ಎಚ್ಚರಗೊಂಡು ಈಗಲಾದರೂ ಮೌಲ್ಯಮಾಪನ ಮಾಡುವ ಅವಶ್ಯಕತೆ ಇದೆ. ಇಂದರಿಂದ ಶೇ. 90ರಷ್ಟು ಅಸಮರ್ಥರು ಸಂಸತ್ ಭವನದಿಂದ ಹೊರಗೆ ಉಳಿಯಲಿದ್ದಾರೆ” ಎಂದು ತಿಳಿಸಿದರು,

“ಇಂದಿನ ಜನಸ್ತೋಮ ಮಾಯದ ಬಲೆಯಲ್ಲಿ ಸಿಲುಕಿಕೊಂಡಿದೆ. ಬಿಡಿಸಿಕೊಳ್ಳಲಾಗದ ಮೀನಿನಂತೆ ಒದ್ದಾಡುತ್ತಿದ್ದೇವೆ. ಬಡವ – ಬಲ್ಲಿಗನ ಅಂತರ ಹೆಚ್ಚಾಗಿದೆ. ಪ್ರಜಾಪ್ರಭುತ್ವ ಉಳಿಯಬೇಕೆಂದರೆ ಉದ್ಯೋಗ, ಶಿಕ್ಷಣ, ಆರೋಗ್ಯವನ್ನು ಮಾನದಂಡವಾಗಿಸಿ ಈ ಮಾಲ್ಯಮಾಪನದ ಕೆಲಸ ಆಗಲೇ ಬೇಕಿದೆ” ಎಂದು ಹೇಳಿದರು.

“ಸನಾತನ ಧರ್ಮ ಎಂಬುದು ಅನಾದಿ ಕಾಲದಿಂದ ಬಂದಂತಹ ಧರ್ಮ ಎಂಬುದನ್ನು ಒಪ್ಪಿಕೊಳ್ಳೋಣ. ಆದರೆ, ಇದು ಜಾತಿಯತೆ ಎಂಬ ಅನಿಷ್ಟ ಪದ್ಧತಿಯಿಂದ ಕೂಡಿದೆ. ಅತಿಯಾಸೆ ಗತಿಗೇಡು, ಭಗವಾನ್ ಬುದ್ಧರ ಅತಿ ಆಸೆಯೇ ದುಃಖಕ್ಕೆ ಮೂಲ ಎಂಬ ಮಾತಿನಂತೆ ಇಂದು ಎಲ್ಲರಿಗೂ ದಾಹದ ತೀವ್ರತೆ ಹೆಚ್ಚಾಗಿದೆ‌. ಇವರ ಬಾಯಾರಿಕೆ ನೀರು ಇಲ್ಲದಷ್ಟಿದೆ. ಇಂತಹ ಗತಕಾಲದ ಅನಿಷ್ಠ ಪದ್ಧತಿಗಳು ವರ್ತಮಾನದ ಆಶಯಗಳನ್ನು ಕೊಲ್ಲುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ಮೌಲ್ಯ ಹಾಗೂ ಅಪಮೌಲ್ಯಗಳು ಹೇಗಿವಿಯೋ ಅದೇ ರೀತಿಯಲ್ಲಿ ಹಿಂದೂ ಸಮಾಜದಲ್ಲಿ ಕೆಲವು ಅಪದ್ಧ, ಅಪಮೌಲ್ಯಗಳು ಇವೆ. ಜಾತಿಭೇದ, ಮೇಲೂಕೀಳು, ಅಸ್ಪೃಶ್ಯತೆ ಬಹಳಿಷ್ಟಿದೆ‌. ಇಂದು ಸನಾತನ ಧರ್ಮದ ಮೌಲ್ಯ ಅಪಮೌಲ್ಯಗೊಂಡಿದೆ” ಎಂದರು.

“ಅಪೂರ್ಣ ರಾಮ ಮಂದಿರ ಉದ್ಘಾಟನೆಯ ವಿಚಾರ ಇದೀಗ ದೇಶದಲ್ಲಿ ಚರ್ಚೆಯಲ್ಲಿದೆ. ನಮ್ಮ ಬಹುತೇಕ ಹಳ್ಳಿಗಳಲ್ಲಿ ರಾಮಮಂದಿರಗಳಿವೆ. ಅವುಗಳು ಸಾಮಾನ್ಯವಾಗಿ ಜೋಜಾಟದ ಕೇಂದ್ರವಾಗಿ ಪರಿವರ್ತನೆಗೊಂಡಿವೆ. ಅದರಂತೆ ಅಯೋಧ್ಯೆಯ ರಾಮ ಮಂದಿರ ಕೂಡ ರಾಜಕಾರಣದ ಜೂಜಾಟದ ಕೇಂದ್ರವಾಗಿದಿರಲಿ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

“ಈ ನಡುವೆ ಎಲ್ಲ ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿದೆ ಹಳಸಿಹೋಗುತ್ತಿದೆ. ರಾಮ ತನ್ನ ಆಡಳಿತದಲ್ಲಿ ಒಂದು ನ್ಯಾಯದ ಗಂಟೆ ಕಟ್ಟಿದ್ದ ಎಂಬ ಪ್ರತೀತಿ ಇದೆ‌. ಅದರಲ್ಲಿ ಜನರು ಜೀವನದ ಸಮಸ್ಯೆ, ಉದ್ಯೋಗ, ಆರೋಗ್ಯವನ್ನು ಬೇಡಿಕೊಂಡರೆ, ರಾಮ ಕೇಳಿಸಿಕೊಳ್ಳುತ್ತಿದ್ದನಂತೆ. ಅದನ್ನು ನಂಬೋಣ‌. ಅದರಂತೆ ಇಂದು ಆಯೋಧ್ಯೆಯ ರಾಮ ಮಂದಿರದ ನಾಲ್ಕು ದಿಕ್ಕಲ್ಲೂ ನಾಲ್ಕು ಗಂಟೆಗಳನ್ನು ಕಟ್ಟಿ. ಈ ಗಂಟೆಗಳ ಮೂಲಕ ಇವತ್ತಿನ ಆಡಳಿತಗಾರರು ತಮ್ಮ ಹೃದಯ, ಕಣ್ಣು, ಕಿವಿ, ಸ್ಪರ್ಶದಿಂದ ಜನರ ಸಮಸ್ಯೆಗಳನ್ನು ಆಲಿಸಲಿ. ಮಾತು ಕೊಟ್ಟು ನಡೆಸಲಿ, ಕೊಟ್ಟ ಮಾತು ಯಾವತ್ತಿಗೂ ಕಾಲಕಸವಾಗದಿರಲಿ” ಎಂದು ತಿಳಿಸಿದರು‌.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com