ರಾಮಮೂರ್ತಿಗೆ ಕೃಷ್ಣಶಿಲೆ ಕೊಟ್ಟಾತನಿಗೆ 80 ಸಾವಿರ ರೂ. ದಂಡ: ಸರ್ಕಾರದ ವಿರುದ್ಧ ಬಿಜೆಪಿ ಕಿಡಿ

ಆಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಗೆ ಆಯ್ಕೆಯಾಗಿರುವ ‘ಬಾಲರಾಮ’ನ ‌ಮೂರ್ತಿ ಕೆತ್ತಲು ಬಳಸಿದ ಕೃಷ್ಣಶಿಲೆಯನ್ನು ಒದಗಿಸಿದ ಕಲ್ಲು ಗಣಿಗಾರಿಕೆ ಗುತ್ತಿಗೆದಾರನಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ದಂಡ ವಿಧಿಸಿತ್ತು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದ್ದು, ಸರ್ಕಾರದ ಈ ನಡೆಗೆ ಬಿಜೆಪಿ ತೀವ್ರ ಕಿಡಿಕಾರಿದೆ.
ಆರ್.ಅಶೋಕ್
ಆರ್.ಅಶೋಕ್

ಬೆಂಗಳೂರು: ಆಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಗೆ ಆಯ್ಕೆಯಾಗಿರುವ ‘ಬಾಲರಾಮ’ನ ‌ಮೂರ್ತಿ ಕೆತ್ತಲು ಬಳಸಿದ ಕೃಷ್ಣಶಿಲೆಯನ್ನು ಒದಗಿಸಿದ ಕಲ್ಲು ಗಣಿಗಾರಿಕೆ ಗುತ್ತಿಗೆದಾರನಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ದಂಡ ವಿಧಿಸಿತ್ತು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದ್ದು, ಸರ್ಕಾರದ ಈ ನಡೆಗೆ ಬಿಜೆಪಿ ತೀವ್ರ ಕಿಡಿಕಾರಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ರಾಮಭಕ್ತರ ಮೇಲಿನ ಕೋಪ ಇನ್ನೂ ತಣ್ಣಗಾದಂತಿಲ್ಲ ಎಂದು ಕಿಡಿಕಾರಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರೇ, ತಾವು ದೇವರ ಮೇಲೆ ನಂಬಿಕೆ ಇಲ್ಲದ ನಾಸ್ತಿಕರು ಅಂತ ಇನ್ನೊಬ್ಬರ ಭಕ್ತಿ, ಶ್ರದ್ಧೆಗಳ ಮೇಲೆ ದ್ವೇಷ ಸಾಧಿಸುವುದು ಯಾವ ನ್ಯಾಯ? ತಮಗೆ ರಾಮಮಂದಿರಕ್ಕೆ ಕಾಣಿಕೆ ಕೊಡುವ ಮನಸ್ಸಿಲ್ಲದಿದ್ದರೆ ಹೋಗಲಿ, ತಮ್ಮ ಕೈಲಾದ ಅಳಿಲು ಸೇವೆ ಮಾಡುತ್ತಿರುವ ಭಕ್ತರಿಗೆ ತೊಂದರೆ ಕೊಡಬೇಡಿ ಎಂದು ಹೇಳಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ವಿರುದ್ಧವೂ ಕಿಡಿಕಾರಿರುವ ಅವರು, ರಾಮೊತ್ಸವಕ್ಕೆ ಅಡ್ಡಿ, ಕರಸೇವಕರ ಬಂಧನ, ರಾಮನ ಫ್ಲೆಕ್ಸ್ ಹರಿದಿದ್ದು, ರಾಮ ಸೀತೆ ಟೆಂಟ್ ಗೊಂಬೆ, ಜನವರಿ 22ರಂದು ರಜೆ ಕೊಡಲ್ಲ, ರಾಮ ಅವರ ಅಪ್ಪನ ಮನೆ ಆಸ್ತಿನಾ, ಅಯೋಧ್ಯೆಯಲ್ಲಿರುವುದು ಬಿಜೆಪಿ ರಾಮ ಇವ್ಯಾವುದೂ ಕಾಂಗ್ರೆಸ್ ನಾಯಕರಿಂದ ಬಾಯಿ ತಪ್ಪಿ ಬಂದ ಮಾತುಗಳಲ್ಲ. ಮುಸ್ಲಿಮರ ಓಲೈಕೆಗಾಗಿ ಉದ್ದೇಶಪೂರ್ವಕವಾಗಿ ಆಡಿದ ಮಾತುಗಳು. ಈ ರಾಮ ನಿಂದನೆಯ ನಡೆ-ನುಡಿಗಳೆಲ್ಲ ಕಾಂಗ್ರೆಸ್ ಪಕ್ಷದ ಮನದಾಳದಲ್ಲಿರುವ ಹಿಂದೂ ವಿರೋಧ, ರಾಮದ್ವೇಷದ ಪ್ರತಿಬಿಂಬಗಳಾಗಿವೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com