ಬ್ರಹ್ಮಕಲಶೋತ್ಸವಕ್ಕೆ ತಲಕಾವೇರಿ ನೀರು ಕೊಂಡೊಯ್ದ ತಮಿಳುನಾಡು ಭಕ್ತರು!

ದೇವಾಲಯದ ಬ್ರಹ್ಮಕಲಶೋತ್ಸವಕ್ಕೆ ತಮಿಳುನಾಡು ಭಕ್ತರು ತಲಕಾವೇರಿಗೆ ಭೇಟಿ ನೀಡಿ, ಕಾವೇರಿ ನೀರನ್ನು ಕೊಂಡೊಯ್ದಿದ್ದಾರೆ.
ಕಾವೇರಿ ನೀರು ಸಂಗ್ರಹಿಸಿರುವ ತಮಿಳುನಾಡು ಭಕ್ತರು.
ಕಾವೇರಿ ನೀರು ಸಂಗ್ರಹಿಸಿರುವ ತಮಿಳುನಾಡು ಭಕ್ತರು.
Updated on

ಮಡಿಕೇರಿ: ದೇವಾಲಯದ ಬ್ರಹ್ಮಕಲಶೋತ್ಸವಕ್ಕೆ ತಮಿಳುನಾಡು ಭಕ್ತರು ತಲಕಾವೇರಿಗೆ ಭೇಟಿ ನೀಡಿ, ಕಾವೇರಿ ನೀರನ್ನು ಕೊಂಡೊಯ್ದಿದ್ದಾರೆ.

ಭಾನುವಾರ ತಲಕಾವೇರಿಗೆ ಭೇಟಿ ನೀಡಿದ ತಮಿಳುನಾಡಿನ 350ಕ್ಕೂ ಹೆಚ್ಚು ಭಕ್ತರು ಕಾವೇರಿ ನೀರನ್ನು ಸಂಗ್ರಹಿಸಿ, ಕೊಂಡೊಯ್ದರು.

ಈ ನೀರನ್ನು ತಮಿಳುನಾಡಿನ ತಿರುಪುರ್ ಜಿಲ್ಲೆಯ 16ನೇ ಶತಮಾನದ ಶಿವ ದೇವಾಲಯದ ನವೀಕರಣಕ್ಕಾಗಿ ಬಳಸಲಾಗುತ್ತದೆ ಎಂದು ತಿಳಿದುಬಂದಿದೆ.

ಈ ದೇವಸ್ಥಾನವನ್ನು ಕರುನೈಯಾತ್ತಲ್ ದೇವಸ್ಥಾನ ಎಂದು ಕರೆಯಲಾಗುತ್ತದೆ. ಇದು ತಿರುಪುರದಲ್ಲಿರುವ 16 ನೇ ಶತಮಾನದ ದೇವಾಲಯವಾಗಿದೆ.

ಈ ದೇವಾಲಯವನ್ನು ಚೋಳ ರಾಜವಂಶದ ಅವಧಿಯಲ್ಲಿ ನಿರ್ಮಿಸಲಾಗಿತ್ತು. ಈ ದೇವಾಲಯವನ್ನು ಇಂದು ತಮಿಳುನಾಡಿನ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು ನಿರ್ವಹಿಸುತ್ತಿದೆ.

25 ಕೋಟಿ ವೆಚ್ಚದಲ್ಲಿ ದೇವಾಲಯದ ಜೀರ್ಣೋದ್ಧಾರ ನಡೆಯುತ್ತಿದ್ದು, ದೇವಾಲಯ ಸಮಿತಿಯು ಸಮಾರಂಭದಲ್ಲಿ ವಿಶೇಷ ಆಚರಣೆಗಳನ್ನು ಹಮ್ಮಿಕೊಂಡಿದೆ.

ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸದಸ್ಯರಲ್ಲೊಬ್ಬರಾದ ಅರುಣಾಚಲಂ ಅವರು ಮಾತನಾಡಿ, “ಮುಂದಿನ ತಿಂಗಳು ದೇವಸ್ಥಾನದಲ್ಲಿ ‘ಕುಂಭ ಅಭಿಷೇಕ’ ಆಚರಣೆ ನಡೆಯಲಿದ್ದು, ಬ್ರಹ್ಮಕಲಶೋತ್ಸವದ ವೇಳೆ ತಲಕಾವೇರಿಯ ಪವಿತ್ರ ನೀರನ್ನು ಮಾತ್ರ ಬಳಸಲಾಗುತ್ತದೆ ಎಂದು ಹೇಳಿದರು.

ಇದಕ್ಕಾಗಿ 350 ಕ್ಕೂ ಹೆಚ್ಚು ಭಕ್ತರು ಪವಿತ್ರ ನೀರನ್ನು ಸಂಗ್ರಹಿಸಲು ತಲಕಾವೇರಿಗೆ ಭೇಟಿ ನೀಡಿದ್ದಾರೆ. ಮಹಿಳಾ ಭಕ್ತರು ತಲಕಾವೇರಿಗೆ ಪೂಜೆ ಸಲ್ಲಿಸಿ, ಮಡಿಕೆಗಳಲ್ಲಿ ನೀರುನ್ನು ಹೊತ್ತು ದೇಲಾಯಕ್ಕೆ ಬರುತ್ತಾರೆಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com