ಬೆಂಗಳೂರು: KSR ರೈಲು ನಿಲ್ದಾಣದ ಆವರಣದಲ್ಲಿ ಅಪರಿಚಿತ ಬಾಲಕಿ ಶವ ಪತ್ತೆ!

ಕೆಎಸ್ಆರ್ ಹೊರಾವರಣದ ಕಾರುಗಳ ನಿಲುಗಡೆ ಪ್ರದೇಶದಲ್ಲಿ ಅಪರಿಚಿತ ಬಾಲಕಿ ಮೃತದೇಹ ನೋಡಿ ಪೊಲೀಸರಿಗೆ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣ ಆವರಣದ ವಾಹನ ನಿಲುಗಡೆ ಪ್ರದೇಶದಲ್ಲಿ ಅಪರಿಚಿತ ಬಾಲಕಿ ಮೃತದೇಹವೊಂದು ಬುಧವಾರ ಪತ್ತೆಯಾಗಿದೆ.

ಮೃತ ಬಾಲಕಿ 5ರಿಂದ 6 ವರ್ಷ ವಯಸ್ಸಿನವಳಾಗಿದ್ದು, ಮೃತದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿವೆ. ಕೆಎಸ್ಆರ್ ಹೊರಾವರಣದ ಕಾರುಗಳ ನಿಲುಗಡೆ ಪ್ರದೇಶದಲ್ಲಿ ಅಪರಿಚಿತ ಬಾಲಕಿ ಮೃತದೇಹ ನೋಡಿ ಪೊಲೀಸರಿಗೆ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ.

ಕೂಡಲೇ ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ.

ರೈಲ್ವೇ ನಿಲ್ದಾಣದ ವಾಹನಗಳ ನಿಲುಗಡೆ ಪ್ರದೇಶಕ್ಕೆ ಬೇರೆಡೆಯಿಂದ ಬಾಲಕಿ ಮೃತದೇಹ ತಂದು ಬಿಸಾಡಿ ಹೋಗಿರುವ ಶಂಕೆ ಇದೆ. ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ಖಚಿತವಾಗಿಲ್ಲ. ಮರಣೋತ್ತರ ವರದಿ ಬಳಿಕ ಗೊತ್ತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಗ್ರಹ ಚಿತ್ರ
40 ವರ್ಷದ ವಿವಾಹಿತ ಪುರುಷನೊಂದಿಗೆ 20ರ ಯುವತಿ ಪ್ರೀತಿ: ಇಬ್ಬರ ಶವ ಕೆರೆಯಲ್ಲಿ ಪತ್ತೆ

ಮೃತದೇಹದಿಂದ ಸಂಪೂರ್ಣವಾಗಿ ಮುಚ್ಚಲಾಗಿತ್ತು. ಬೆಳಿಗ್ಗೆ ಸಾಕಷ್ಟು ಸಮಯವಾದರೂ ಮೇಲೇಳದಿದ್ದಾಗ ಸುತ್ತಮುತ್ತಲಿನವರು ಎಬ್ಬಿಸಲು ಯತ್ನಿಸಿದ್ದಾರೆ. ಯಾವುದೇ ಚಲನೆಗಳು ಕಂಡು ಬರದಿದ್ದಾಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆಂದು ಹೇಳಿದ್ದಾರೆ.

ಪ್ರಕರಣ ಸಂಬಂಧ 5 ವಿಶೇಷಗಳನ್ನು ರಚಿಸಲಾಗಿದೆ. ಸ್ಥಳದ ಸುತ್ತಲೂ ಹಲವು ಸಿಸಿಟಿವಿ ಕ್ಯಾಮೆರಾಗಳಿದ್ದು, ಶೀಘ್ರದಲ್ಲಿಯೇ ಎಲ್ಲಾ ಮಾಹಿತಿ ತಿಳಿದುಬರಲಿದೆ. ರೈಲ್ವೇ ನಿಲ್ದಾಣ ಜನನಿಬಿಡ ಪ್ರದೇಶವಾಗಿದ್ದು, ಇಲ್ಲಿ ಹತ್ಯೆ ನಡೆದಿರುವ ಸಾಧ್ಯತೆಗಳಿಲ್ಲ. ಬೇರೆಡೆ ಹತ್ಯೆ ಮಾಡಿ, ಇಲ್ಲಿ ತಂದಿರಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಸಿಟಿ ರೈಲ್ವೇ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ನಡುವೆ ಕೆಲ ಪ್ರತ್ಯಕ್ಷದರ್ಶಿಗಳು 15 ದಿನಗಳ ಹಿಂದೆ ಬಾಲಕಿಯನ್ನು ಆಕೆಯ ತಾಯಿಯೊಂದಿಗೆ ಇದ್ದಿದ್ದನ್ನು ನೋಡಿರುವುದಾಗಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com