ಬೆಂಗಳೂರಿನ ಶಾಲೆಯಲ್ಲಿ ಮತ್ತೊಂದು ಹೀನಕೃತ್ಯ: 3 ವರ್ಷದ ಬಾಲಕಿ ಮೇಲೆ ಶಿಕ್ಷಕಿಯಿಂದ ಲೈಂಗಿಕ ದೌರ್ಜನ್ಯ!?

ಪೋಷಕರು ನೀಡಿದ ದೂರು ಆಧರಿಸಿ ಕೆ.ಜಿ.ಹಳ್ಳಿ ವ್ಯಾಪ್ತಿಯಲ್ಲಿರುವ ಖಾಸಗಿ ಶಾಲೆಯ ಶಿಕ್ಷಕಿ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮೂರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದ ಅಡಿ ನರ್ಸರಿ ಶಾಲೆಯ 50 ವರ್ಷದ ಶಿಕ್ಷಕಿ ವಿರುದ್ಧ ಕೆ.ಜಿ.ಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪೋಕ್ಸೊ (ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಪೋಷಕರು ನೀಡಿದ ದೂರು ಆಧರಿಸಿ ಕೆ.ಜಿ.ಹಳ್ಳಿ ವ್ಯಾಪ್ತಿಯಲ್ಲಿರುವ ಖಾಸಗಿ ಶಾಲೆಯ ಶಿಕ್ಷಕಿ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಶಿಕ್ಷಕಿಯನ್ನು ವಿಚಾರಣೆ ನಡೆಸಿ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಜೂನ್‌ 6ರಂದು ಮಗಳನ್ನು ಖಾಸಗಿ ಶಾಲೆಗೆ ದಾಖಲು ಮಾಡಿದ್ದೆವು. 10 ದಿನ ಶಾಲೆಗೆ ತೆರಳಿದ್ದ ಮಗು ನಂತರ ಶಾಲೆಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿತ್ತು. ಆಕೆಯನ್ನು ವಿಚಾರಿಸಿದಾಗ, ಖಾಸಗಿ ಅಂಗಗಳಲ್ಲಿ ನೋವು ಆಗಿರುವ ಬಗ್ಗೆ ತಿಳಿಸಿದ್ದಳು. ಯಾರು ಎಂದು ಕೇಳಿದಾಗ ಮಗು 'ಮೇಡಮ್' ಎಂದು ಹೇಳಲು ಪ್ರಾರಂಭಿಸಿದಳು. ಸಂತ್ರಸ್ತೆಗೆ ಆಕೆಯ ತಾಯಿ ಒಳ್ಳೆಯ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶದ ಬಗ್ಗೆ ತಿಳಿಸಲಾಗಿತ್ತು. ಆರೋಪಿ ಶಿಕ್ಷಕಿ ಬಾಲಕಿಗೆ ತನ್ನ ಬೆರಳುಗಳಿಂದ ಪದೇ ಪದೇ ನೋಯಿಸುತ್ತಿದ್ದಳು ಎನ್ನಲಾಗಿದೆ. ಮಗಳ ಖಾಸಗಿ ಭಾಗಗಳಲ್ಲಿ ಗಾಯಗಳನ್ನು ಕಂಡ ಪೋಷಕರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಮನೆಯವರಿಗೆ ಬುದ್ಧಿ ಕಲಿಸಲು ಸ್ನೇಹಿತರೊಂದಿಗೆ ಕಳ್ಳತನ ಮಾಡಿದ ಬಾಲಕಿ; ಹಲವು ಪ್ರಕರಣ ಬೇಧಿಸಿದ ಪೊಲೀಸರು

ಕೆ.ಜಿ.ಹಳ್ಳಿಯ ವೆಂಕಟೇಶಪುರದಲ್ಲಿ ವಾಸವಾಗಿರುವ ಬಾಲಕಿಯ ತಂದೆ ವೃತ್ತಿಯಲ್ಲಿ ಕಟುಕ( ಮಾಂಸ ಕ್ತರಿಸುವವರು) ಆಗಿದ್ದಾರೆ, ತಾಯಿ ಗೃಹಿಣಿ. ನರ್ಸರಿ ವಿದ್ಯಾರ್ಥಿನಿಯಾಗಿರುವ ಬಾಲಕಿ ಜೂನ್ 6 ರಿಂದ ಶಾಲೆಗೆ ಹೋಗುತ್ತಿದ್ದಳು. ಶಾಲೆಗೆ ಹಾಜರಾದ ಹತ್ತು ದಿನಗಳ ನಂತರ, ಅವಳು ಹೋಗಲು ನಿರಾಕರಿಸಿದಳು, ತನ್ನ ತಾಯಿಗೆ ತನ್ನ ಖಾಸಗಿ ಅಂಗಗಳಲ್ಲಿ ತೀವ್ರವಾದ ನೋವಿನ ಬಗ್ಗೆ ಹೇಳಿದಳು. ಆದರೆ ಪೋಷಕರು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.

ಬುಧವಾರ ಬಾಲಕಿ ಬೆಳಗ್ಗೆ 9.30ರ ಸುಮಾರಿಗೆ ಶಾಲೆಗೆ ಹೋಗಿದ್ದು, ಮಧ್ಯಾಹ್ನ 12.30ಕ್ಕೆ ಮನೆಗೆ ಮರಳಿದ್ದಾಳೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ, ಪ್ರಕೃತಿಯ ಕರೆಗೆ ಹಾಜರಾಗಲು ಸಾಧ್ಯವಾಗದೆ ನೋವಿನಿಂದ ಅಳಲು ಪ್ರಾರಂಭಿಸಿದಳು. ಈ ಬಗ್ಗೆ ತಾಯಿ ವಿಚಾರಿಸಿದಾಗ ಮಗುವಿಗೆ ಶಿಕ್ಷಕಿಯ ಹೆಸರು ತಿಳಿದಿಲ್ಲದ ಕಾರಣ 'ಮೇಮ್' ಎಂದು ಮಾತ್ರ ಹೇಳಿದಳು. ಕೂಡಲೇ ಆಕೆಯನ್ನು ಫ್ರೇಜರ್ ಟೌನ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸಂತ್ರಸ್ತ ಬಾಲಕಿಗೆ ನಂತರ ವಾಣಿವಿಲಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ತಂದೆ ಪೊಲೀಸರಿಗೆ ವೈದ್ಯಕೀಯ ಚಿಕಿತ್ಸೆಯ ದಾಖಲೆಗಳನ್ನು ಒದಗಿಸಿದ್ದಾರೆ. ಬುಧವಾರ ಸಂಜೆ 6 ಗಂಟೆಗೆ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅವರು ತೋರಿಸಿದ್ದಾರೆ. ಇದು ಮೆಡಿಕೋ-ಲೀಗಲ್ ಕೇಸ್ ಆಗಿದ್ದರಿಂದ ಆಸ್ಪತ್ರೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಗುರುವಾರ ಮುಂಜಾನೆ ದೂರು ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com