ವಿರಾಟ್ ಕೊಹ್ಲಿ ಸಹ-ಮಾಲೀಕತ್ವದ One8 Commune ರೆಸ್ಟೋರೆಂಟ್‌ ಮ್ಯಾನೇಜರ್ ವಿರುದ್ಧ FIR ದಾಖಲು

ಕಬ್ಬನ್ ಪಾರ್ಕ್ ಪೊಲೀಸರು ಸರ್ಕಾರದ ನಿರ್ದೇಶನದ ಮೇರೆಗೆ ಪೊಲೀಸ್ ಇಲಾಖೆ ನಿಗದಿಪಡಿಸಿದ ನಿಯಮಗಳನ್ನು ಉಲ್ಲಂಘಿಸುತ್ತಿರುವ ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳ ವಿರುದ್ಧ ವಿಶೇಷ ಅಭಿಯಾನ ನಡೆಸಿದರು.
ವಿರಾಟ್ ಕೊಹ್ಲಿ ಮಾಲಿಕತ್ವದ ಪಬ್
ವಿರಾಟ್ ಕೊಹ್ಲಿ ಮಾಲಿಕತ್ವದ ಪಬ್

ಬೆಂಗಳೂರು: ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಅವರ ಸಹ-ಮಾಲೀಕತ್ವದ ರೆಸ್ಟೋರೆಂಟ್ ಒನ್8 ಕಮ್ಯೂನ್ ಸೇರಿದಂತೆ ನಗರದ ಮೂರು ರೆಸ್ಟೋರೆಂಟ್‌ಗಳ ವ್ಯವಸ್ಥಾಪಕರ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅನುಮತಿಸಲಾದ ಸಮಯ ಮಿತಿಗಳನ್ನು ಮೀರಿ ತೆರೆದಿದ್ದಕ್ಕಾಗಿ ಇವರ ವಿರುದ್ಧ ದೂರು ದಾಖಲಿಸಲಾಗಿದೆ.

ಶನಿವಾರ ರಾತ್ರಿ ಕಬ್ಬನ್ ಪಾರ್ಕ್ ಪೊಲೀಸರು ಸರ್ಕಾರದ ನಿರ್ದೇಶನದ ಮೇರೆಗೆ ಪೊಲೀಸ್ ಇಲಾಖೆ ನಿಗದಿಪಡಿಸಿದ ನಿಯಮಗಳನ್ನು ಉಲ್ಲಂಘಿಸುತ್ತಿರುವ ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳ ವಿರುದ್ಧ ವಿಶೇಷ ಅಭಿಯಾನ ನಡೆಸಿದರು.

ಚರ್ಚ್ ಸ್ಟ್ರೀಟ್‌ನ ಎಂಪೈರ್ ರೆಸ್ಟೋರೆಂಟ್ ಮತ್ತು ಬ್ರಿಗೇಡ್ ರಸ್ತೆಯಲ್ಲಿರುವ ಪ್ಯಾಂಜಿಯೋ ಬಾರ್ ಮತ್ತು ರೆಸ್ಟೋರೆಂಟ್ ನಲ್ಲೂ ಸಹ ನಿಗದಿತ ಸಮಯದ ನಂತರವೂ ಗ್ರಾಹಕರಿಗೆ ಅವಕಾಶ ಕಲ್ಪಿಸಲಾಗಿತ್ತು.

One8 ಕಮ್ಯೂನ್ ರೆಸ್ಟೋರೆಂಟ್ ಅನ್ನು ಡಿಸೆಂಬರ್ 2023 ರಲ್ಲಿ ಬೆಂಗಳೂರಿನಲ್ಲಿ ಪ್ರಾರಂಭಿಸಲಾಯಿತು. ಇದು ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನ ಸಮೀಪದಲ್ಲಿರುವ ಕಸ್ತೂರ್ಬಾ ರಸ್ತೆಯಲ್ಲಿರುವ ರತ್ನಮ್ಸ್ ಕಾಂಪ್ಲೆಕ್ಸ್‌ನ ಆರನೇ ಮಹಡಿಯಲ್ಲಿದೆ.

"ನಾವು ಮಧ್ಯರಾತ್ರಿ 1:30 ರವರೆಗೆ ತೆರೆದಿದ್ದಕ್ಕಾಗಿ ಪ್ರಕರಣಗಳನ್ನು ದಾಖಲಿಸಿದ್ದೇವೆ. ಜೋರಾಗಿ ಸಂಗೀತ ನುಡಿಸುತ್ತಿರುವ ಬಗ್ಗೆ ನಮಗೆ ದೂರುಗಳು ಬಂದಿವೆ. ಪಬ್‌ಗಳನ್ನು ಮಧ್ಯರಾತ್ರಿ 1 ಗಂಟೆಯವರೆಗೆ ಮಾತ್ರ ತೆರೆಯಲು ಅನುಮತಿಸಲಾಗಿದೆ ಮತ್ತು ಅದಕ್ಕಿಂತ ಮೀರುವಂತಿಲ್ಲ" ಎಂದು ಡಿಸಿಪಿ (ಕೇಂದ್ರ) ಬಿಕೆ ಶೇಖರ್ ಮಾಧ್ಯಮಗಳಿಗೆ ತಿಳಿಸಿದರು.

ಫೋನೋಗ್ರಾಫಿಕ್ ಪರ್ಫಾರ್ಮೆನ್ಸ್ ಲಿಮಿಟೆಡ್ (PPL) ಹಕ್ಕುಸ್ವಾಮ್ಯವನ್ನು ಹೊಂದಿರುವ ಹಾಡುಗಳನ್ನು ಪ್ಲೇ ಮಾಡದಂತೆ One8 ಕಮ್ಯೂನ್ ನ್ನು ದೆಹಲಿ ಹೈಕೋರ್ಟ್ ನಿರ್ಬಂಧಿಸಿದ ನಂತರ ವಿರಾಟ್-ಕೊಹ್ಲಿ ಒಡೆತನದ ರೆಸ್ಟೋರೆಂಟ್ ಸರಪಳಿಯು ಕಳೆದ ವರ್ಷ ಸುದ್ದಿಯಲ್ಲಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com