ಬೆಂಗಳೂರು ಟ್ರಾಫಿಕ್​ ನಿರ್ವಹಣೆಗೆ 750 AI ಕ್ಯಾಮರಾ ಅಳವಡಿಕೆಗೆ ಸರ್ಕಾರ ಮುಂದು!

ಈ ಸ್ಥಳಗಳಲ್ಲಿ ಈಗಾಗಲೇ ಸುಮಾರು 7,500 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಹೆಚ್ಚುವರಿ ಕ್ಯಾಮರಾಗಳನ್ನು ನಗರದ ಹೊರವಲಯ ಮತ್ತು ಹೊಸ ಟ್ರಾಫಿಕ್ ಸಿಗ್ನಲ್‌ಗಳನ್ನು ಅಳವಡಿಸಲಾಗಿರುವ ಪ್ರಮುಖ ಜಂಕ್ಷನ್‌ಗಳಲ್ಲಿ ಅಳವಡಿಸಲಾಗುತ್ತದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಬೆಂಗಳೂರಿನಲ್ಲಿ ಟ್ರಾಫಿಕ್ ನಿರ್ವಹಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಸುಮಾರು 3,000 ಕಡೆಗಳಲ್ಲಿ ಹೆಚ್ಚುವರಿಯಾಗಿ 750 ಕೃತಕ ಬುದ್ಧಿಮತ್ತೆ ಸ್ಮಾರ್ಟ್ ಕ್ಯಾಮರಾಗಳನ್ನು ಅಳವಡಿಸಲು ಸರ್ಕಾರ ಮುಂದಾಗಿದೆ.

ಈ ಸ್ಥಳಗಳಲ್ಲಿ ಈಗಾಗಲೇ ಸುಮಾರು 7,500 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಹೆಚ್ಚುವರಿ ಕ್ಯಾಮರಾಗಳನ್ನು ನಗರದ ಹೊರವಲಯ ಮತ್ತು ಹೊಸ ಟ್ರಾಫಿಕ್ ಸಿಗ್ನಲ್‌ಗಳನ್ನು ಅಳವಡಿಸಲಾಗಿರುವ ಪ್ರಮುಖ ಜಂಕ್ಷನ್‌ಗಳಲ್ಲಿ ಅಳವಡಿಸಲಾಗುತ್ತದೆ.

ಟ್ರಾಫಿಕ್ ನಿರ್ವಹಣೆಗೆ ನೆರವಾಗುವುದು, ಹಿಟ್ ಅಂಡ್ ರನ್ ಪ್ರಕರಣಗಳು, ಮಹಿಳೆಯರಿಗೆ ಕಿರುಕುಳ ಮತ್ತು ಇತರ ಕಾನೂನು ಸುವ್ಯವಸ್ಥೆ ಸಂಬಂಧಿತ ಘಟನೆಗಳ ಮೇಲೆ ನಿರಂತರವಾಗಿ ಕಣ್ಗಾವಲಿರಿಸುವುದು ಇದರ ಹಿಂದಿನ ಉದ್ದೇಶವಾಗಿದೆ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ (ಪೂರ್ವ) ರಮಣ್ ಗುಪ್ತಾ ಅವರು ತಿಳಿಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ಸುರಕ್ಷಿತ ನಗರ ಯೋಜನೆಯ ಭಾಗವಾಗಿ ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು, ವಿಮಾನ ನಿಲ್ದಾಣಗಳು ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 150 ವಾಚ್ ಟವರ್‌ಗಳು ಮತ್ತು ಎಂಟು ಹೈ ಡೆಫಿನಿಷನ್ ಫೇಸ್-ರೆಕಗ್ನಿಷನ್ ಕ್ಯಾಮರಾಗಳನ್ನು ಅಳವಡಿಸಲಾಗುವುದು ಎಂದು ಹೇಳಿದ್ದಾರೆ.

ಸಂಗ್ರಹ ಚಿತ್ರ
ಬೆಂಗಳೂರು ನಗರ ಸಂಚಾರ ದಟ್ಟಣೆ ತಗ್ಗಿಸಲು ಕ್ರಮ: ನಗರದ ಶಾಸಕರು, ಅಧಿಕಾರಿಗಳ ಸಲಹೆ ಕೇಳಿದ ಡಿಸಿಎಂ ಶಿವಕುಮಾರ್

ಹೈ-ಡೆಫಿನಿಷನ್ ಫೇಸ್-ರೆಕಗ್ನಿಷನ್ ಕ್ಯಾಮರಾಗಳು ಸಂಚಾರ ದಟ್ಟಣೆಯನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡಲಿವೆ. ವಾಚ್ ಟವರ್‌ಗಳು ಸಾರ್ವಜನಿಕ ಪ್ರದೇಶಗಳ ಸಮರ್ಪಕ ಚಿತ್ರಣ ಒದಗಿಸಲಿವೆ. ಜತೆಗೆ, ಅಧಿಕಾರಿಗಳು ಘಟನೆಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಲು ಅನುವು ಮಾಡಿಕೊಡಲಿದೆ ಎಂದು ತಿಳಿಸಿದ್ದಾರೆ.

ಉಪ ಪೊಲೀಸ್ ಆಯುಕ್ತ (ಸಂಚಾರ-ದಕ್ಷಿಣ) ಶಿವ ಪ್ರಕಾಶ್ ದೇವರಾಜು ಅವರು ಮಾತನಾಡಿ, ಕನಕಪುರ ರಸ್ತೆ, ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ ಮತ್ತು ಸರ್ಜಾಪುರ ರಸ್ತೆಯಂತಹ ಪ್ರಮುಖ ಪ್ರದೇಶಗಳು 50 ಹೊಸ ಟ್ರಾಫಿಕ್ ಸಿಗ್ನಲ್‌ಗಳನ್ನು ಒಳಗೊಂಡಿರಲಿದ್ದು, ಈ ಪ್ರದೇಶಗಳಲ್ಲಿಯೂ ಹೊಸ ಕ್ಯಾಮರಾಗಳನ್ನು ಅಳವಡಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಈ ಕ್ಯಾಮರಾಗಳು ವೀಡಿಯೊ ಕಣ್ಗಾವಲು ಸುಗಮಗೊಳಿಸಲಿವೆ. ಸಂಚಾರ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲೂ ನೆರವಾಗಲಿವೆ ಎಂದು ಶಿವ ಪ್ರಕಾಶ್ ಹೇಳಿದ್ದಾರೆ. ನೋ-ಎಂಟ್ರಿ ಜೋನ್‌ಗಳಲ್ಲಿ ಚಾಲನೆ ಮಾಡುವುದು ಅಥವಾ ಫುಟ್‌ಪಾತ್‌ಗಳಲ್ಲಿ ವಾಹನ ನಿಲುಗಡೆ ಮಾಡುವಂತಹ ನಿಯಮ ಉಲ್ಲಂಘನೆಗಳನ್ನು ಸದ್ಯ ಕ್ಯಾಮರಾ ಮೂಲಕ ಪತ್ತೆ ಮಾಡಲಾಗುತ್ತಿಲ್ಲ. ಹೆಚ್ಚುವರಿ ಕ್ಯಾಮರಾಗಳು ಇದಕ್ಕೆ ನೆರವಾಗಲಿವೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com