ಹೆಚ್ಚುವರಿ ಭದ್ರತಾ ಠೇವಣಿ (ASD) ಹೆಸರಲ್ಲಿ ಸುಲಿಗೆ, ವಿದ್ಯುತ್ ಬಿಲ್ ಜಾಸ್ತಿ ಬರ್ತಿದೆ ಎಂದ ಜನ: ಬಳಕೆ ಹೆಚ್ಚಾಗಿದೆ ಎಂದ Bescom

ವಿದ್ಯುತ್ ಸರಬರಾಜು ಕಂಪನಿಗಳು ಬಿಲ್ ನಲ್ಲಿ ಹೆಚ್ಚುವರಿ ಭದ್ರತಾ ಠೇವಣಿ (ASD) ವಿಧಿಸುತ್ತಿದ್ದು, ಇದಕ್ಕೂ ಕಾರಣ ನೀಡಿರುವ ವಿದ್ಯುತ್ ಕಂಪನಿಗಳು ವಿದ್ಯುತ್ ಬಳಕೆ ಹೆಚ್ಚಾಗಿರುವುದರಿಂದ ASD ಅಥವಾ ಭದ್ರತಾ ಠೇವಣಿ ಶುಲ್ಕ ಕಟ್ಟುವುದು ಅನಿವಾರ್ಯವಾಗಿದೆ ಎಂದು ಹೇಳಿದೆ.
Bescom cites over-consumption
ವಿದ್ಯುತ್ ಬಿಲ್ ಸಮಸ್ಯೆ (ಸಾಂದರ್ಭಿಕ ಚಿತ್ರ)
Updated on

ಬೆಂಗಳೂರು: ನಗರ ಮತ್ತು ರಾಜ್ಯದ ಇತರ ಭಾಗಗಳ ಅನೇಕ ಗ್ರಾಹಕರು ಜೂನ್‌ ತಿಂಗಳಿನಲ್ಲಿ ತಮ್ಮ ಸಾಮಾನ್ಯ ಪ್ರಮಾಣಕ್ಕಿಂತ ಹೆಚ್ಚಿನ ವಿದ್ಯುತ್ ಬಿಲ್‌ ಮತ್ತು ಎಎಸ್ ಡಿ ಬರುತ್ತಿದೆ ಎಂದು ಆಘಾತ ವ್ಯಕ್ತಪಡಿಸಿದ್ದು, ಆದರೆ ಬೆಸ್ಕಾಂ ಮಾತ್ರ ವಿದ್ಯುತ್ ಬಳಕೆ ಹೆಚ್ಚಾಗಿರುವುದರಿಂದ ಬಿಲ್ ಹೆಚ್ಚು ಬರುತ್ತಿದೆ ಎಂದು ಸಬೂಬು ಹೇಳುತ್ತಿದೆ.

ವಿದ್ಯುತ್ ಸರಬರಾಜು ಕಂಪನಿಗಳು ಬಿಲ್ ನಲ್ಲಿ ಹೆಚ್ಚುವರಿ ಭದ್ರತಾ ಠೇವಣಿ (ASD) ವಿಧಿಸುತ್ತಿದ್ದು, ಇದಕ್ಕೂ ಕಾರಣ ನೀಡಿರುವ ವಿದ್ಯುತ್ ಕಂಪನಿಗಳು ವಿದ್ಯುತ್ ಬಳಕೆ ಹೆಚ್ಚಾಗಿರುವುದರಿಂದ ASD ಅಥವಾ ಭದ್ರತಾ ಠೇವಣಿ ಶುಲ್ಕ ಕಟ್ಟುವುದು ಅನಿವಾರ್ಯವಾಗಿದೆ ಎಂದು ಹೇಳಿದೆ.

ಈಗಿರುವ ಸಮಸ್ಯೆಗಳ ನಡುವೆ ASD ಆನ್ ಲೈನ್ ಪಾವತಿಗೆ ಅವಕಾಶ ಇಲ್ಲ.. ಇದೂ ಕೂಡ ಗ್ರಾಹಕರ ತಾಳ್ಮೆ ಪರೀಕ್ಷಿಸುವಂತಾಗಿದೆ. ಆನ್‌ಲೈನ್ ಪಾವತಿ ಸಾಧ್ಯಾವಾಗುತ್ತಿಲ್ಲವಾದ್ದರಿಂದ ಗ್ರಾಹಕರು ಹತ್ತಿರದ ವಿದ್ಯುತ್ ಸರಬರಾಜು ಕಂಪನಿಯ ಕಚೇರಿಗೆ ತೆರಳಿ ನಗದು ರೂಪದಲ್ಲೇ ಏಳು ದಿನಗಳ ಒಳಗೆ ಬಿಲ್‌ಗಳನ್ನು ಪಾವತಿಸಲು ಕೇಳಲಾಗುತ್ತಿದೆ.

Bescom cites over-consumption
ಬೆಂಗಳೂರು: ಅನಧಿಕೃತ ಕೇಬಲ್‌ ತೆರವಿಗೆ ಬೆಸ್ಕಾಂ ಗಡುವು!

ಈ ಬಗ್ಗೆ ಮಾತನಾಡಿರುವ ಬೆಂಗಳೂರು ನಿವಾಸಿ ವಿಭಾ ಕೆ, "ನಮಗೆ ಇದುವರೆಗೆ ಇಷ್ಟು ದೊಡ್ಡ ಮೊತ್ತದ ಬಿಲ್ ಬಂದಿರಲಿಲ್ಲ. ವಿದ್ಯುತ್ ಸಂಪರ್ಕ ಕಡಿತಗೊಳಿಸುವುದು ನಮಗೆ ಇಷ್ಟವಿಲ್ಲದ ಕಾರಣ ಅದನ್ನು ಪಾವತಿಸದೆ ನಮಗೆ ಬೇರೆ ದಾರಿ ಇಲ್ಲ. ನಮ್ಮ ಸಮಸ್ಯೆ ವಿವರಿಸಲು ಬೆಸ್ಕಾಂನಲ್ಲಿ ಯಾರೂ ಇರಲಿಲ್ಲ ಎಂದು ಹೇಳಿದ್ದಾರೆ.

ಮಾತ್ರವಲ್ಲದೇ ಗೃಹ ಜ್ಯೋತಿ ಯೋಜನೆಯಡಿ ಶೂನ್ಯ ಬಿಲ್ ಪಡೆಯುತ್ತಿದ್ದ ಗ್ರಾಹಕರು ಕೂಡ ವಿದ್ಯುತ್ ಮೀಟರ್ ಬಿಲ್‌ಗಳ ಜೊತೆಗೆ ಎಎಸ್‌ಡಿ ಬಿಲ್‌ಗಳನ್ನು ಪಡೆದಿದ್ದಾರೆ. ಅಂತಹ ಹೆಚ್ಚಿನ ಗ್ರಾಹಕರು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮಿತಿಗಳ ಅಡಿಯಲ್ಲಿದ್ದಾರೆ. ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕಕ್ಕೆ ಬಿಲ್ ಮಾಡಿದ ಮೊತ್ತವು ಕಳೆದ ಹಣಕಾಸು ವರ್ಷದ ಮೊತ್ತಕ್ಕೆ ಸಮನಾಗಿರುತ್ತದೆ. ಬೆಸ್ಕಾಂ ಅಂಕಿಅಂಶಗಳ ಪ್ರಕಾರ, 24,28,596 ಮೀಟರ್ ಗಳಿಂದ, 2024-25 ರ ಆರ್ಥಿಕ ವರ್ಷಕ್ಕೆ 450.94 ಕೋಟಿ ರೂ. ಬಿಲ್ ಮಾಡಲಾಗಿದೆ. ಕಳೆದ ವರ್ಷ, 23,99,602 ಮೀಟರ್ ಗಳಿಂದ ಸರಿ ಸುಮಾರು ಇಷ್ಟೇ ಪ್ರಮಾಣದ ಬಿಲ್ ಮಾಡಲಾಗಿತ್ತು.

ಬೆಸ್ಕಾಂ ಅಧಿಕಾರಿಯೊಬ್ಬರು, "ಈ ವರ್ಷ, ಬೇಸಿಗೆ ಕಠಿಣ ಮತ್ತು ದೀರ್ಘಕಾಲದವರೆಗೆ ಇದ್ದಿದ್ದರಿಂದ ವಿದ್ಯುತ್ ಬಳಕೆ ಹೆಚ್ಚಾಗಿದೆ. ಹೀಗಾಗಿ ಹೆಚ್ಚಿನ ಪ್ರಮಾಣದ ಎಎಸ್‌ಡಿ ನೀಡಲಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ.

Bescom cites over-consumption
ಗೊಂದಲ ಸೃಷ್ಟಿ ಮಾಡುವುದೇ ಬಿಜೆಪಿಯವರ ಕೆಲಸ, ವಿದ್ಯುತ್ ದರ ಹೆಚ್ಚಿಸಿದ್ದು ನಾವಲ್ಲ, ಏಪ್ರಿಲ್ ನಲ್ಲೇ ತೀರ್ಮಾನ ಆಗಿತ್ತು: ಸಿಎಂ ಸಿದ್ದರಾಮಯ್ಯ

ಬೆಸ್ಕಾಂ ನಿರ್ದೇಶಕ (ಹಣಕಾಸು) ದರ್ಶನ್ ಜೆ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಈ ಬಗ್ಗೆ ಮಾಹಿತಿ ನೀಡಿದ್ದು, 'ಸಾಮಾನ್ಯವಾಗಿ ಸುಮಾರು 0.5% ಗ್ರಾಹಕರು ವಾರ್ಷಿಕವಾಗಿ ASD ಬಿಲ್‌ಗಳನ್ನು ಪಡೆಯುತ್ತಾರೆ. ಇದು ಬಳಕೆಯನ್ನು ಅವಲಂಬಿಸಿರುತ್ತದೆ. ಸರಾಸರಿಯಾಗಿ, ಹೆಚ್ಚಿನ ಗ್ರಾಹಕರು 1KW ವಿದ್ಯುತ್ ಬಳಕೆಯ ಮೀಟರ್‌ಗಳನ್ನು ಆಯ್ಕೆ ಮಾಡುತ್ತಾರೆ. ಏಕೆಂದರೆ ಸ್ಥಿರ ಶುಲ್ಕಗಳು ಕಡಿಮೆ ಮತ್ತು ಜನರು ಕಡಿಮೆ ವಿದ್ಯುತ್ ಬಳಸುತ್ತಾರೆ ಎಂದು ಭಾವಿಸುತ್ತಾರೆ.

ಆದರೆ ಕಾಲಾನಂತರದಲ್ಲಿ, ಅವರ ಬಳಕೆ ಪ್ರಮಾಣ ಹೆಚ್ಚಾಗುತ್ತದೆ. ಒಂದೆರಡು ತಿಂಗಳುಗಳ ಬಳಕೆಯ ಹೆಚ್ಚಳದ ಆಧಾರದ ಮೇಲೆ, ASD ಬಿಲ್‌ಗಳನ್ನು ಉತ್ಪಾದಿಸಲಾಗುತ್ತದೆ. ಮೀಟರ್ ರೀಡಿಂಗ್ ಮ್ಯಾನ್ಯುವಲ್ ಆಗಿದ್ದರಿಂದ ಈ ಬಿಲ್‌ಗಳನ್ನು ಮೊದಲೇ ಉತ್ಪಾದಿಸಲಾಗುತ್ತಿರಲಿಲ್ಲ. ಆದರೆ ಅದನ್ನು ಡಿಜಿಟೈಸ್ ಮಾಡಿರುವುದರಿಂದ, ಮೀಟರ್ ರೀಡಿಂಗ್‌ಗಳನ್ನು ಹೋಲಿಸಲಾಗುತ್ತದೆ ಮತ್ತು ಲೆಕ್ಕಹಾಕಲಾಗುತ್ತದೆ ಮತ್ತು ಆಗ ಎಎಸ್‌ಡಿಗಳು ಬರುತ್ತದೆ ಎಂದು ಹೇಳಿದ್ದಾರೆ.

ಅಂತೆಯೇ ಹೀಗೆ ಸಂಗ್ರಹಿಸಿದ ಮೊತ್ತವನ್ನು ಟ್ರಾನ್ಸ್ಫಾರ್ಮರ್ ವರ್ಧನೆ ಮತ್ತು ನಿರ್ವಹಣೆಗಾಗಿ ಬಳಸಲಾಗುತ್ತದೆ. ವಿದ್ಯುತ್ ಏರಿಳಿತದ ಸಮಯದಲ್ಲಿ ಹಾನಿಗೊಳಗಾಗಿರುವ ಲೈನ್‌ಗಳನ್ನು ಸರಿಪಡಿಸಲು ಸಹ ಇದನ್ನು ಬಳಸಲಾಗುತ್ತದೆ ಎಂದು ಅಧಿಕಾರಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com