
ಚಾಮರಾಜನಗರ: ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದಲ್ಲಿ ಅತ್ತಿಗೆ ಜೊತೆಗಿನ ತನ್ನ ಅಕ್ರಮ ಸಂಬಂಧ ಗೊತ್ತಾಗುತ್ತಿದ್ದಂತೆ ತನ್ನ ಸ್ವಂತ ಅಣ್ಣನನ್ನು ತಮ್ಮನೇ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಅತ್ತಿಗೆ ಜೊತೆಗಿನ ಲವ್ವಿಡವ್ವಿಗೆ ಅಡ್ಡಿಯಾಗಿದ್ದಾನೆಂದು ತನ್ನ ಅಣ್ಣ ಚೌಡಹಳ್ಳಿ ಗ್ರಾಮದ 45 ವರ್ಷದ ಪ್ರಸಾದ್ ಎಂಬಾತನನ್ನು 39 ವರ್ಷದ ಕುಮಾರ್ ಕೊಲೆ ಮಾಡಿದ್ದಾನೆ. ತನ್ನ ಹೆಂಡತಿ ಜೊತೆ ತನ್ನ ಸಹೋದರ ಕುಮಾರ್ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ವಿಚಾರ ತಿಳಿದ ಕೂಡಲೇ ಪ್ರಸಾದ್, ಕುಮಾರ್ ಜೊತೆ ಜಗಳವಾಡಿದ್ದಾನೆ.
ಅಣ್ಣ-ತಮ್ಮನ ನಡುವೆ ಗಲಾಟೆ ಜೋರಾಗುತ್ತಿದ್ದಂತೆ ಇಬ್ಬರು ಕೈ ಕೈ ಮಿಲಾಯಿಸಿದ್ದಾರೆ. ನಂತರ ಕುಮಾರ್ ಸಿಟ್ಟಿನಲ್ಲಿ ಪ್ರಸಾದ್ ಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಪ್ರಸಾದ್ ಮೃತಪಟ್ಟಿದ್ದಾರೆ. ಕೊಲೆ ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಗುಂಡ್ಲುಪೇಟೆ ಪೊಲೀಸರು ದೌಡಾಯಿಸಿದ್ದು ಆರೋಪಿ ಕುಮಾರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Advertisement