ಬೆಂಗಳೂರು: ಸಮಾಜದಲ್ಲಿ ಬದಲಾವಣೆ ತರುವ ಗುರಿ ಹೊಂದಿರುವ 14 ವರ್ಷದ ವಿದ್ಯಾರ್ಥಿನಿಯೊಬ್ಬಳು ಫಾಸ್ಟ್ ಫ್ಯಾಶನ್ ವಿರುದ್ಧ ಆನ್‌ಲೈನ್ ಅಭಿಯಾನವನ್ನು ಪ್ರಾರಂಭಿಸಿದ್ದಾಳೆ.
ಡೆಲ್ಲಿ ಪಬ್ಲಿಕ್ ಸ್ಕೂಲ್ (ಬೆಂಗಳೂರು ಪೂರ್ವ)ನಲ್ಲಿ 9 ನೇ ತರಗತಿ ವಿದ್ಯಾರ್ಥಿಯಾಗಿರುವ ಎಂ.ಪಿ. ಸುದೀಕ್ಷಾ ಚಂದ್ರ ಗಾರ್ಮೆಂಟ್ಸ್ ಕಾರ್ಮಿಕರ ಪರ ಆನ್‌ಲೈನ್ ಅಭಿಯಾನ ಆರಂಭಿದ್ದಾಳೆ.
ದೇಶಾದ್ಯಂತ ಎಲ್ಲಾ ಗಾರ್ಮೆಂಟ್ಸ್ ಕಾರ್ಮಿಕರ ಹಕ್ಕುಗಳು ಮತ್ತು ನ್ಯಾಯಯುತ ವೇತನಕ್ಕಾಗಿ ಹೋರಾಡುವುದು ಈ ಅಭಿಯಾನದ ಉದ್ದೇಶವಾಗಿದೆ. ವೇಗವಾಗಿ ಬೆಳೆಯುತ್ತಿರುವ ಫ್ಯಾಷನ್ ಉದ್ಯಮದಲ್ಲಿ ಕಾರ್ಮಿಕರ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ದ ಸುದೀಕ್ಷಾ ಹೋರಾಟ ಆರಂಭಿಸಿದ್ದಾರೆ.
ಅಭಿಯಾನದ ಮೂಲಕ ಸುದೀಕ್ಷಾ ಅವರು ಆದಾಯ ತೆರಿಗೆ ಇಲಾಖೆಯು ಐಟಿ ರಿಟರ್ನ್ಸ್ ನಲ್ಲಿ ಗಾರ್ಮೆಂಟ್ ಕಾರ್ಮಿಕರ ತಲಾ ಆದಾಯ (ಪಿಐಜಿಡಬ್ಲ್ಯು) ಎಂಬ ಹೊಸ ವಿಭಾಗವನ್ನು ತರಬೇಕೆಂದು ಆಗ್ರಹಿಸಿದ್ದಾರೆ,
ಇದರಿಂದ ಪ್ರತಿಯೊಬ್ಬ ಗಾರ್ಮೆಂಟ್ಸ್ ಕಾರ್ಮಿಕನು ಎಷ್ಟು ಗಳಿಸುತ್ತಾನೆ ಎಂಬುದನ್ನು ಎಲ್ಲಾ ಕಂಪನಿಗಳನ್ನು ಬಹಿರಂಗಪಡಿಸಬೇಕಾಗುತ್ತದೆ. ಅಲ್ಲದೆ, ಜವಳಿ ಸಚಿವಾಲಯವೂ ಪರಿಶೀಲನೆ ನಡೆಸಿದಂತಾಗುತ್ತದೆ ಎಂದು ಹೇಳಿದ್ದಾರೆ.
"PIGW ಮೂಲಕ, ಕಾರ್ಮಿಕರ ಮೂಲಭೂತ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗದ ಹಾಗೂ ವೇತನವನ್ನು ಪಾವತಿಸಲು ವಿಫಲವಾದ ಕಂಪನಿಗಳನ್ನು ಬಲೆಗೆ ಬೀಳಿಸಲು ಸರ್ಕಾರಕ್ಕೂ ಸುಲಭ ಮಾರ್ಗ ಸಿಕ್ಕಂತಾಗುತ್ತದೆ ಎಂದು ತಿಳಿಸಿದ್ದಾರೆ.
2021ರ ಡಿಸೆಂಬರ್ ವರೆಗಿನ ಮಾಹಿತಿ ಪ್ರಕಾರ ರಾಜ್ಯದಲ್ಲಿ 4,00,000 ಕ್ಕೂ ಹೆಚ್ಚು ಗಾರ್ಮೆಂಟ್ ಕಾರ್ಮಿಕರಿದ್ದು, 2020 ರಿಂದ 1,000 ಕ್ಕೂ ಹೆಚ್ಚು ಕಾರ್ಖಾನೆಗಳಲ್ಲಿ ಕಾನೂನಿನಲ್ಲಿ ನಮೂದಿಸಿರುವುದಕ್ಕಿತಲೂ ಕಡಿಮೆ ವೇತನವನ್ನು ನೀಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ಕಾರ್ಮಿಕರಿಗೆ ಪಾವತಿಸದ ಒಟ್ಟು ವೇತನವು $ 50 ಮಿಲಿಯನ್‌ಗಿಂತಲೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಇದು ಜಾಗತಿಕ ಗಾರ್ಮೆಂಟ್ ಉದ್ಯಮದಲ್ಲಿ ನಡೆದಿರುವ ಅತ್ಯಂತ ದೊಡ್ಡ ವಂಚನೆಯಾಗಿದೆ. ಈ ಮಳಿಗೆಗಳು ನೀಡುತ್ತಿರುವ ವೇತನ ಕಾರ್ಮಿಕರು ತಮ್ಮ ಮಕ್ಕಳ ಆಹಾರ, ಮನೆ ಬಾಡಿಗೆ ಮತ್ತು ಶಾಲಾ ಶುಲ್ಕದಂತಹ ಮೂಲಭೂತ ಅವಶ್ಯಕತೆಗಳನ್ನು ಸಹ ಭರಿಸಲು ಸಾಧ್ಯವಾಗದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ವಿಷಯದ ಕುರಿತು ನಗರದಾದ್ಯಂತ ಇರುವ ಎಲ್ಲಾ ಪ್ರಮುಖ ಫ್ಯಾಷನ್ ಮಳಿಗೆಗಳನ್ನು ನಾನು ಸಂಪರ್ಕಿಸಿದ್ದೇನೆ, ಆದರೆ, ಯಾವುದೇ ಉತ್ತರಗಳು ಬಂದಿಲ್ಲ. ಹೀಗಾಗಿ, ಫಾಸ್ಟ್ ಫ್ಯಾಷನ್ ವಿರುದ್ಧ ಹೋರಾಟ ಆರಂಭಿಸಿದ್ದೇನೆ. ಫಾಸ್ಟ್ ಫ್ಯಾಷನ್ ಸೊಕ್ಕು ಮುರಿಯಲು ಜನರು ಕೂಡ ಸಹಾಯ ಮಾಡಬೇಕಿದ್ದು, ಸ್ಲೋ ಫ್ಯಾಷನ್, ಸಸ್ಟೇನೇಬನ್ ಫ್ಯಾಷನ್, ಥ್ರಿಫ್ಟಿಂಗ್ ಮತ್ತು ನೈಸರ್ಗಿಕ ದಾರಗಳಿಂದ ಮಾಡಿದ ಬಟ್ಟೆಗಳನ್ನು ಧರಿಸಲು ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.
Advertisement