'ಶಕ್ತಿ' ಯೋಜನೆ ಅನುಷ್ಠಾನಕ್ಕೆ ಒಂದು ವರ್ಷ; 227 ಕೋಟಿ ಮಹಿಳೆಯರು ಉಚಿತ ಪ್ರಯಾಣ: ರಾಮಲಿಂಗಾ ರೆಡ್ಡಿ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕಳೆದ ವರ್ಷ ಜೂನ್ 11 ರಂದು ಪಕ್ಷವು ವಿಧಾನಸಭೆ ಚುನಾವಣೆಗೆ ಮೊದಲು ಭರವಸೆ ನೀಡಿದ್ದ ಐದು ಖಾತರಿಗಳಲ್ಲಿ ಒಂದಾದ 'ಶಕ್ತಿ' ಯೋಜನೆಯನ್ನು ಪ್ರಾರಂಭಿಸಿತು.
ರಾಮಲಿಂಗಾ ರೆಡ್ಡಿ
ರಾಮಲಿಂಗಾ ರೆಡ್ಡಿ

ಬೆಂಗಳೂರು: ಕಳೆದ ಒಂದು ವರ್ಷದಲ್ಲಿ 'ಶಕ್ತಿ' ಯೋಜನೆಯಡಿಯಲ್ಲಿ ರಾಜ್ಯದ 227 ಕೋಟಿ ಮಹಿಳೆಯರು ಐಷಾರಾಮಿಯಲ್ಲದ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಲಾಭವನ್ನು ಪಡೆದುಕೊಂಡಿದ್ದು, ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ 5,526.64 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಂಗಳವಾರ ತಿಳಿಸಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕಳೆದ ವರ್ಷ ಜೂನ್ 11 ರಂದು ಪಕ್ಷವು ವಿಧಾನಸಭೆ ಚುನಾವಣೆಗೆ ಮೊದಲು ಭರವಸೆ ನೀಡಿದ್ದ ಐದು ಖಾತರಿಗಳಲ್ಲಿ ಒಂದಾದ 'ಶಕ್ತಿ' ಯೋಜನೆಯನ್ನು ಪ್ರಾರಂಭಿಸಿತು.

ರಾಜ್ಯ ಸರ್ಕಾರವು 'ಶಕ್ತಿ' ಯೋಜನೆ ಅನುಷ್ಠಾನ ಮಾಡಿ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ 226.95 ಕೋಟಿ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ ಎಂದು ರೆಡ್ಡಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಪೈಕಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ (ಬಿಎಂಟಿಸಿ-71.45 ಕೋಟಿ) ಮಹಿಳೆಯರು ಹೆಚ್ಚಿನ ಪ್ರಯಾಣ ಮಾಡಿದ್ದಾರೆ. ನಂತರದ ಸ್ಥಾನದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್‌ಟಿಸಿ-69.5 ಕೋಟಿ), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಆರ್‌ಟಿಸಿ) ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ಕ್ರಮವಾಗಿ 52.12 ಕೋಟಿ ಮತ್ತು 33.47 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ.

ರಾಮಲಿಂಗಾ ರೆಡ್ಡಿ
'ಶಕ್ತಿ ಯೋಜನೆ'ಗೆ ವರ್ಷದ ಹರ್ಷ: KSRTC ಗೆ 3,349 ಕೋಟಿ ರೂ. ದಾಖಲೆಯ ಆದಾಯ!

ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಕೆಎಸ್‌ಆರ್‌ಟಿಸಿ 2,111.14 ಕೋಟಿ ರೂ., ಎನ್‌ಡಬ್ಲ್ಯುಕೆಆರ್‌ಟಿಸಿ 1,352.68 ಕೋಟಿ ರೂ., ಕೆಕೆಆರ್‌ಟಿಸಿ 1,125.81 ಕೋಟಿ ರೂ. ಮತ್ತು ಬಿಎಂಟಿಸಿ 937.01 ಕೋಟಿ ರೂ. ವೆಚ್ಚ ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ.

5,800 ಹೊಸ ಬಸ್‌ಗಳ ಸೇರ್ಪಡೆಗೆ ಅನುಮೋದನೆ ನೀಡಲಾಗಿದ್ದು, ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದಲ್ಲದೆ, ಇತ್ತೀಚಿನ ದಿನಗಳಲ್ಲಿ ನಾಲ್ಕು ಸಾರಿಗೆ ನಿಗಮಗಳಾದ್ಯಂತ 2,438 ಹೊಸ ಬಸ್‌ಗಳನ್ನು ಸೇರ್ಪಡೆಗೊಳಿಸಲಾಗಿದೆ. ರಾಜ್ಯವು 'ಪಲ್ಲಕ್ಕಿ', 'ಅಶ್ವಮೇಧ ಕ್ಲಾಸಿಕ್', 'ಕಲ್ಯಾಣ ರಥ' ಮತ್ತು 'ಅಮೋಘ ವರ್ಷ' ಬ್ರಾಂಡ್‌ನೊಂದಿಗೆ ಹೊಸ ಬಸ್‌ಗಳನ್ನು ಪರಿಚಯಿಸಿದೆ ಎಂದು ಸಚಿವರು ತಿಳಿಸಿದ್ದಾರೆ.

ರಾಮಲಿಂಗಾ ರೆಡ್ಡಿ
'ಶಕ್ತಿ ಯೋಜನೆ'ಯಿಂದ ಹೆಚ್ಚಿದ ಬೇಡಿಕೆ: ಕೆಎಸ್ ಆರ್ ಟಿಸಿಯಿಂದ 350 ಹೊಸ ಬಿಎಸ್ VI ಎಕ್ಸ್ ಪ್ರೆಸ್ ಬಸ್ಸುಗಳ ಸೇರ್ಪಡೆ

'ಸಾರಿಗೆ ಇಲಾಖೆಯಲ್ಲಿ 9,000 ಹುದ್ದೆಗಳ ನೇಮಕಾತಿಗೆ ಅನುಮೋದನೆ ನೀಡಲಾಗಿದೆ. ಈ ನಿಟ್ಟಿನಲ್ಲಿ 1,844 ಚಾಲಕ-ಕಮ್-ಕಂಡಕ್ಟರ್ ಮತ್ತು ತಾಂತ್ರಿಕ ಸಹಾಯಕರನ್ನು ನೇಮಕ ಮಾಡಲು ನೇಮಕಾತಿ ಆದೇಶಗಳನ್ನು ನೀಡಲಾಗಿದೆ. 6,500 ಹುದ್ದೆಗಳಿಗೆ (ಕೆಎಸ್‌ಆರ್‌ಟಿಸಿ- 2,500 ಡ್ರೈವರ್-ಕಮ್-ಕಂಡಕ್ಟರ್‌ಗಳು, ಬಿಎಂಟಿಸಿ-2,000 ಕಂಡಕ್ಟರ್‌ಗಳು, ಎನ್‌ಡಬ್ಲ್ಯುಕೆಆರ್‌ಟಿಸಿ-1,000 ಚಾಲಕರು ಮತ್ತು 1,000 ಕಂಡಕ್ಟರ್‌ಗಳು) ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಮತ್ತು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ' ಎಂದು ಸಚಿವರು ಹೇಳಿದರು.

ಸರ್ಕಾರ ನಿರ್ವಹಿಸುವ ಬಸ್‌ನಲ್ಲಿ ಪ್ರಯಾಣಿಸುವಾಗ ಅಪಘಾತದಲ್ಲಿ ಯಾವುದೇ ಪ್ರಯಾಣಿಕರು ಸಾವಿಗೀಡಾದರೆ ಅವಲಂಬಿತರಿಗೆ ಸರ್ಕಾರವು ಅಪಘಾತ ಪರಿಹಾರವನ್ನು ಮೂರು ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಿಸಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com