
ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಲ್ಲಿ ದೊಣ್ಣೆಯಿಂದ ಹೊಡೆದು ವ್ಯಕ್ತಿಯ ಬರ್ಬರ ಹತ್ಯೆ ನಡೆಸಲಾಗಿದೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಕೂಡ್ಲು ಗ್ರಾಮದ ಸಾಯಿ ಮೆಡೋಸ್ ಲೇಔಟ್‌ನಲ್ಲಿ ಘಟನೆ ನಡೆದಿದೆ. ಕೃಷ್ಣೋಜಿ ರಾವ್ (37) ಕೊಲೆಯಾದವನು.
ಶಿವಕುಮಾರ್, ರಾಜೇಶ್ವರಿ ಕೊಲೆ ಮಾಡಿದ ಆರೋಪಿಗಳಾಗಿದ್ದಾರೆ. ಮದುವೆಯಾಗಿದ್ದ ರಾಜೇಶ್ವರಿ ಪತಿಯಿಂದ ದೂರಾಗಿದ್ದಳು. ಬಳಿಕ ಕೆಲ ವರ್ಷಗಳ ಹಿಂದೆ ಕೃಷ್ಣೋಜಿರಾವ್ ಜತೆ ರಾಜೇಶ್ವರಿ ಸಂಬಂಧ ಹೊಂದಿದ್ದಳು. ಇವರಿಬ್ಬರು ಗಂಡ-ಹೆಂಡತಿ ಎಂದು ಹೇಳಿಕೊಂಡು ಗಾರೆ ಕೆಲಸ ಮಾಡಿಕೊಂಡು ಒಟ್ಟಿಗೆ ವಾಸವಿದ್ದರು.
ಕೃಷ್ಣೋಜಿರಾವ್, ರಾಜೇಶ್ವರಿ ಮತ್ತು ಆಕೆಯ ಮಗ ಶಿವಕುಮಾರ್ ನಿರ್ಮಾಣ ಹಂತದ ಕಟ್ಟಡದಲ್ಲಿ ವಾಸವಿದ್ದರು. ಇತ್ತೀಚೆಗೆ ಕೃಷ್ಣೋಜಿರಾವ್ ದಿನನಿತ್ಯ ಕುಡಿದು ಬಂದು ರಾಜೇಶ್ವರಿಗೆ ಹಲ್ಲೆ ಮಾಡುತ್ತಿದ್ದ. ಇದರಿಂದಾಗಿ ರಾಜೇಶ್ವರಿ ಹಾಗೂ ಆಕೆಯ ಮಗ ಶಿವಕುಮಾರ್ ಬೇಸತ್ತು ಹೋಗಿದ್ದರು. ನಿನ್ನೆ ಭಾನುವಾರ ಸಂಜೆ ಕಂಠ ಪೂರ್ತಿ ಕುಡಿದು ಬಂದಿದ್ದ ಕೃಷ್ಣೋಜಿರಾವ್, ರಾಜೇಶ್ವರಿ ಜತೆಗೆ ಗಲಾಟೆ ಮಾಡಿ ಹಲ್ಲೆ ಮಾಡುತ್ತಿದ್ದ. ಈ ವೇಳೆ ಅಲ್ಲಿಗೆ ಬಂದ ರಾಜೇಶ್ವರಿ ಮಗ ಶಿವಕುಮಾರ್ ದೊಣ್ಣೆಯಿಂದ ಕೃಷ್ಣೋಜಿರಾವ್ ತಲೆಗೆ ಹೊಡೆದಿದ್ದ ಸಾಯಿಸಿದ್ದ.
Advertisement