BDA Sites: 149 ಮೂಲೆ ನಿವೇಶನ ಇ-ಹರಾಜು

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಜುಲೈನಲ್ಲಿ ವಿವಿಧ ಪ್ರದೇಶಗಳಲ್ಲಿನ ಸೈಟುಗಳನ್ನು ಈ-ಹರಾಜಿನ ಮೂಲಕ ಮಾರಾಟ ಮಾಡಲು ಮುಂದಾಗಿದೆ. ಒಟ್ಟು 149 ಕಾರ್ನರ್‌ ಸೈಟುಗಳಿದ್ದು, ಆಸಕ್ತರು ಖರೀದಿ ಮಾಡಬಹುದಾಗಿದೆ.
ಬಿಡಿಎ ನಿವೇಶನ
ಬಿಡಿಎ ನಿವೇಶನTNIE
Updated on

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಜುಲೈನಲ್ಲಿ ವಿವಿಧ ಪ್ರದೇಶಗಳಲ್ಲಿನ ಸೈಟುಗಳನ್ನು ಈ-ಹರಾಜಿನ ಮೂಲಕ ಮಾರಾಟ ಮಾಡಲು ಮುಂದಾಗಿದೆ. ಒಟ್ಟು 149 ಕಾರ್ನರ್‌ ಸೈಟುಗಳಿದ್ದು, ಆಸಕ್ತರು ಖರೀದಿ ಮಾಡಬಹುದಾಗಿದೆ.

ಬಿಡಿಎ ನಿವೇಶನಗಳ ಈ-ಹರಾಜು ಕೊನೆಯ ಬಾರಿ ನಡೆದಿದ್ದು ಈ ವರ್ಷದ ಮಾರ್ಚ್‌ನಲ್ಲಿ. ಈಗ ಜುಲೈ ಮೊದಲ ವಾರದಲ್ಲಿ 149 ಮೂಲೆ ನಿವೇಶನ ಮಾರಾಟಕ್ಕೆ ಬಿಡಿಎ ಪ್ರಕ್ರಿಯೆ ನಡೆಸಲಿದೆ.

ನಗರದ ವಿವಿಧ ಭಾಗದಲ್ಲಿ ಲಭ್ಯವಿರುವ ಈ ಮೂಲೆ ನಿವೇಶನಗಳನ್ನು ಹರಾಜು ಮೂಲಕ ಮಾರಾಟ ಮಾಡಲಾಗುತ್ತಿದ್ದು, ಈ ನಿವೇಶನಗಳಿಗೆ ಕನಿಷ್ಠ ಬಿಡ್ ಬೆಲೆ ಎಷ್ಟು ಎಂದು ಇನ್ನೂ ಅಧಿಕೃತವಾಗಿ ಬೆಲೆ ನಿಗದಿ ಮಾಡಿಲ್ಲ.

ಬಿಡಿಎ ನಿವೇಶನ
ಇದೇ ಮೊದಲ ಬಾರಿಗೆ ಆನ್‌ಲೈನ್‌ನಲ್ಲಿ ಬೆಂಗಳೂರಿನ ಡಾ. ಕಾರಂತ್ ಲೇಔಟ್‌ ಬಿಡಿಎ ಸೈಟ್‌ಗಳ ಹಂಚಿಕೆ!

ಕಾರ್ನರ್ ಸೈಟ್‌ಗಳು ಬಿಡಿಎಗೆ ಆದಾಯದ ಮುಖ್ಯ ಮೂಲವಾಗಿದ್ದು, ಸಾಮಾನ್ಯ ನಿವೇಶನಗಳಿಗಿಂತ ಇವುಗಳ ಬೆಲೆ ಹೆಚ್ಚಾಗಿರಲಿವೆ ಎನ್ನಲಾಗಿದೆ.

ನೇರ ಹರಾಜು ಪ್ರಕ್ರಿಯೆ ಜುಲೈ 1 ರಂದು ಬೆಳಗ್ಗೆ 11 ಗಂಟೆಗೆ ಆರಂಭವಾಗಿ ಜುಲೈ 2 ರಂದು ಸಂಜೆ 5 ಗಂಟೆಗೆ ಮುಕ್ತಾಯವಾಗಲಿದೆ.

ಬನಶಂಕರಿ 5ನೇ ಹಂತದ ವಿವಿಧ ಬ್ಲಾಕ್‌ಗಳು, ಅಂಜನಾಪುರ, ಉಳ್ಳಾಲು, ಗೌರಿನಾಯಕನಹಳ್ಳಿ, ವಾಲೇಗರಹಳ್ಳಿ ಮತ್ತು ಮಳಲಹಳ್ಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ 74 ನಿವೇಶನಗಳಿಗೆ ಹರಾಜು ಪ್ರಕ್ಯಿಯೆ ನಡೆಯಲಿದೆ.

ಇನ್ನುಳಿದ 75 ಸೈಟ್‌ಗಳ ಹರಾಜು ಜುಲೈ 1 ರಂದು ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗಿ ಜುಲೈ 4 ರಂದು ಸಂಜೆ 5 ಗಂಟೆಗೆ ಮುಕ್ತಾಯಗೊಳ್ಳಲಿದೆ, HBR ಮೊದಲ ಹಂತ, HRBR 2ನೇ ಬ್ಲಾಕ್ ಮತ್ತು ಬನಶಂಕರಿ 5ನೇ ಹಂತ (7ನೇ ಬ್ಲಾಕ್) ಸೇರಿದಂತೆ ಕೆಲವು ಪ್ರದೇಶಗಳನ್ನು ಇದು ಒಳಗೊಂಡಿದೆ. ಸೈಟ್‌ಗಳ ಸ್ಥಳ ಮತ್ತು ವಿವರಗಳಿಗಾಗಿ, https://kppp.karnataka.gov.in ಗೆ ಲಾಗ್ ಇನ್ ಮಾಡಬಹುದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com