ಆರ್ಡರ್ ಮಾಡಿದ್ದು Xbox ಕಂಟ್ರೋಲರ್, ಬಂದಿದ್ದು ನಾಗರಹಾವು!; ಬೆಂಗಳೂರಿನ ದಂಪತಿಗೆ ಅಮೇಜಾನ್ ಕ್ಷಮಾಪಣೆ

ತಾವು ಆರ್ಡರ್ ಮಾಡಿದ್ದ ಪೊಟ್ಟಣದಲ್ಲಿ ನಾಗರಹಾವು ಕಂಡುಬಂದಿದೆ. Xbox ಕಂಟ್ರೋಲರ್ ಬದಲಿಗೆ ಹಾವನ್ನು ಸ್ವೀಕರಿಸಿದ ದಂಪತಿ ಈ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ.
ಆನ್‌ಲೈನ್ ಆರ್ಡರ್ ಮಾಡಿದ್ದ ಬಾಕ್ಸ್‌ನಲ್ಲಿ ಕಂಡುಬಂದ ಜೀವಂತ ಹಾವು
ಆನ್‌ಲೈನ್ ಆರ್ಡರ್ ಮಾಡಿದ್ದ ಬಾಕ್ಸ್‌ನಲ್ಲಿ ಕಂಡುಬಂದ ಜೀವಂತ ಹಾವು

ಬೆಂಗಳೂರು: ಸರ್ಜಾಪುರ ರಸ್ತೆಯಲ್ಲಿರುವ ಕುಟುಂಬವೊಂದು ಅಮೇಜಾನ್‌ನಲ್ಲಿ ಎಕ್ಸ್‌ಬಾಕ್ಸ್ ನಿಯಂತ್ರಕವನ್ನು ಆರ್ಡರ್ ಮಾಡಿತ್ತು. ಆದರೆ, ಆರ್ಡರ್ ಬಾಕ್ಸ್‌ ಅನ್ನು ತೆರೆದು ನೋಡಿದಾಗ ಆಘಾತ ಕಾದಿತ್ತು. ತಾವು ಆರ್ಡರ್ ಮಾಡಿದ್ದ ಪೊಟ್ಟಣದಲ್ಲಿ ನಾಗರಹಾವು ಕಂಡುಬಂದಿದೆ.

Xbox ಕಂಟ್ರೋಲರ್ ಬದಲಿಗೆ ಹಾವನ್ನು ಸ್ವೀಕರಿಸಿದ ದಂಪತಿ ಈ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ.

ವಿಷಪೂರಿತ ಹಾವು ಅದೃಷ್ಟವಶಾತ್ ಪ್ಯಾಕೇಜಿಂಗ್ ಟೇಪ್‌ಗೆ ಅಂಟಿಕೊಂಡಿದ್ದರಿಂದಾಗಿ ಆಗಬಹುದಾಗಿದ್ದ ಹಾನಿ ತಪ್ಪಿದಂತಾಗಿದೆ.

ಎನ್‌ಡಿಟಿವಿ ವರದಿ ಪ್ರಕಾರ, ಕರ್ನಾಟಕದಲ್ಲಿ ಸ್ಥಳೀಯವಾಗಿ ಕಂಡುಬರುವ ಈ ಹಾವು ಅತ್ಯಂತ ವಿಷಕಾರಿ ಸ್ಪೆಕ್ಟಾಕಲ್ಡ್ ಕೋಬ್ರಾ ಜಾತಿಗೆ ಸೇರಿದ್ದು ಎಂದು ಗುರುತಿಸಲಾಗಿದೆ. ಹಾವನ್ನು ಸೆರೆಹಿಡಿದು ನಂತರ ಸುರಕ್ಷಿತ ಸ್ಥಳದಲ್ಲಿ ಬಿಡಲಾಗಿದೆ ಎಂದು ವರದಿಯಾಗಿದೆ.

ವಿಡಿಯೋಗೆ ಪ್ರತಿಕ್ರಿಯೆಯಾಗಿ ಅಮೆಜಾನ್ ಹೆಲ್ಪ್ ಟ್ವೀಟ್ ಮಾಡಿದ್ದು, 'ಅಮೆಜಾನ್ ಆರ್ಡರ್‌ ಮೂಲಕ ನಿಮಗೆ ಎದುರಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ. ಇದನ್ನು ಪರಿಶೀಲಿಸಲು ನಾವು ಬಯಸುತ್ತೇವೆ. ದಯವಿಟ್ಟು ಅಗತ್ಯವಿರುವ ವಿವರಗಳನ್ನು ಇಲ್ಲಿ ಹಂಚಿಕೊಳ್ಳಿ ಮತ್ತು ನವೀಕರಣದೊಂದಿಗೆ ನಮ್ಮ ತಂಡವು ಶೀಘ್ರದಲ್ಲೇ ನಿಮ್ಮನ್ನು ಸಂಪರ್ಕಿಸುತ್ತದೆ' ಎಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com