ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕುಡಿದ ಮತ್ತಿನಲ್ಲಿ ಪುಂಡನ ಅಟ್ಟಹಾಸ; ಹಲವು ವಾಹನಗಳ ಗ್ಲಾಸ್ ಪೀಸ್ ಪೀಸ್!

ಮದ್ಯದ ಅಮಲಿನಲ್ಲಿ ಪುಂಡನೋರ್ವ ಅಟ್ಟಹಾಸ ಮೆರೆದಿದ್ದು ಹಲವು ವಾಹನಗಳ ಗಾಜು ಪುಡಿ ಪುಡಿ ಮಾಡಿದ್ದಾನೆ.

ಬೆಂಗಳೂರು: ಮದ್ಯದ ಅಮಲಿನಲ್ಲಿ ಪುಂಡನೋರ್ವ ಅಟ್ಟಹಾಸ ಮೆರೆದಿದ್ದು 7 ವಾಹನಗಳ ಗಾಜು ಪುಡಿ ಪುಡಿ ಮಾಡಿದ್ದಾನೆ.

ಬ್ಯಾಟರಾಯನಪುರ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ಪುಂಡನೋರ್ವ ಸಿಕ್ಕ ಸಿಕ್ಕ ವಾಹನಗಳ ಗ್ಲಾಸು ಪುಡಿ ಪುಡಿ ಮಾಡಿದ್ದಾನೆ. ಟಾಟಾ ಏಸ್, ಟಿಟಿ ವಾಹನ, ಇನೋವಾ ಸೇರಿದಂತೆ ಹಲವು ವಾಹನಗಳ ಗ್ಲಾಸ್ ಪುಡಿ ಪುಡಿ ಮಾಡಿದ್ದಾನೆ.

ಜೊತೆಗೆ ಕಾರೊಂದನ್ನು ಹತ್ತಿ ಓಡಿಸಿಕೊಂಡು ಹೋಗಲು ಯತ್ನಿಸಿದ್ದಾನೆ. ಆದರೆ ಕಾರು ಓಡಿಸಲಾಗದೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ. ನಂತರ ಪೊಲೀಸ್ ಠಾಣೆಯ ಹೊರಗೆ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಹತ್ತಿ ಓಡಿಸಲು ಯತ್ನಿಸಿದ ವೇಳೆ ಆತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಸಾಂದರ್ಭಿಕ ಚಿತ್ರ
ಬೆಂಗಳೂರಿನಲ್ಲಿ ಪುಡಿರೌಡಿಗಳ ಅಟ್ಟಹಾಸ: 21 ಕಾರುಗಳಿಗೆ ಹಾನಿ

ಗುರುವಾರ ಮುಂಜಾನೆ ಮೈಸೂರು ರಸ್ತೆಯ ಮೇಲ್ಸೇತುವೆ ಕೆಳಗಡೆ ಈ ಘಟನೆ ನಡೆದಿದೆ. ಆರೋಪಿಯನ್ನು ಪಶ್ಚಿಮ ಬಂಗಾಳ ಮೂಲದ ಪ್ರತಾಪ್ ಚಂದ ಎಂದು ಗುರುತಿಸಲಾಗಿದೆ. ಈತ ಚಾಮರಾಜಪೇಟೆಯ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದರು.

ಬೆಳಗಿನ ಜಾವ 3.30 ರಿಂದ 4 ಗಂಟೆಯ ನಡುವೆ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳಿಗೆ ಪ್ರತಾಪ್ ಚಂದ ಹಾನಿ ಮಾಡಿದ್ದಾನೆ, ಆತನನ್ನು ಬಂಧಿಸಿರುವ ಬ್ಯಾಟರಾಯನಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

X

Advertisement

X
Kannada Prabha
www.kannadaprabha.com